ಅಂಡರ್ 19 ಏಕದಿನ ವಿಶ್ವಕಪ್ ನ ಸೂಪರ್ ಲೀಗ್ ಎರಡನೇ ಫೈನಲ್ ನಲ್ಲಿ ಭಾರತ ತಂಡವು 291 ರನ್ ಗಳಿಸಿ ಆಸ್ಟ್ರೇಲಿಯಾ ತಂಡಕ್ಕೆ ಸವಾಲೊಡ್ಡಿದೆ.
ಕೂಲಿಡ್ಜ್ ಕ್ರಿಕೆಟ್ ಗ್ರೌಂಡ್ ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡ, ಬ್ಯಾಟ್ಸ್ಮನ್ಗಳ ಜವಾಬ್ದಾರಿಯುತ ಆಟದ ಸಹಾಯದಿಂದ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 290ರನ್ ಕಲೆಹಾಕಿತು. ಪಂದ್ಯದ ಉದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಅಂಗ್ ಕ್ರಿಶ್ ರಘುವಂಶಿ ಮತ್ತು ಹರ್ನೂರ್ ಸಿಂಗ್ ಕೇವಲ 37 ರಂ ಗಳಿಸಿ ಪೆವಿಲಿಯನ್ ನತ್ತ ಮುಖ ಮಾಡಿದರು.
ಮೂರನೇ ವಿಕೆಟ್ ಜೊತೆ ಆಟವಾಡಿದ ಶೇಖ್ ರಶೀದ್ ಮತ್ತು ಯಶ್ ಧುಲ್ ಜೋಡಿ ಕಾಂಗರೂ ಬೌಲಿಂಗ್ ಪಡೆಯನ್ನು ಧೂಳಿಪಟಗೈಯಿತು.
ಏತನ್ಮಧ್ಯೆ, ಧುಲ್ ಶತಕ ಸಂಭ್ರಮ ಆಚರಿಸಿದರು. ಆದರೆ ಕೆಲವೇ ಹೊತ್ತಿನಲ್ಲಿ ಅವರು ರನೌಟ್ ಆದರು. ರಶೀದ್ ಅವರು ಔಟ್ ಆಗುವ ಮೂಲಕ 6 ರನ್ ಗಳಿಂದ ಶತಕ ವಂಚಿತರಾದರು.
ಉಪನಾಯಕ ಔಟಾದ ಬಳಿಕ ರನ್ ವೇಗ ಕುಸಿಯಿತು. ಕೊನೆಯಲ್ಲಿ ವಿಕೆಟ್ ಕೀಪರ್ ದಿನೇಶ್ ಬಾಣಾ ಕೇವಲ ನಾಲ್ಕು ಎಸೆತಗಳಲ್ಲಿ ತಲಾ 2 ಫೊರ್, ಸಿಕ್ಸರ್ ನೊಂದಿಗೆ ಅಜೇಯ 20 ರನ್ ಸಿಡಿಸಿದ ಪರಿಣಾಮ ತಂಡದ ಮೊತ್ತ 290ರ ಗಡಿ ಮುಟ್ಟಿತು. ಆಸ್ಟ್ರೇಲಿಯಾ ಪರ ಜಾಕ್ ನಿಸ್ಬೆತ್ ಮತ್ತು ವಿಲಿಯಮ್ ಸಲ್ಜಾಮನ್ ತಲಾ 2 ವಿಕೆಟ್ ಪಡೆದರು.