ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಯವರು ಬೆಂಗಳೂರು ರಾಜ್ಯಮಟ್ಟದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ಒಟ್ಟು 2367.99 ಕೋಟಿ ರೂ ಹೂಡಿಕೆ 88 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇದರಿಂದ 10,904 ಮಂದಿಗೆ ಉದ್ಯೋಗ ಲಭಿಸಲಿದೆ ಎಂದು ತಿಳಿಸಿದರು.
50 ಕೋಟಿ ರೂ. ಮೊತ್ತದ 7 ಬೃಹತ್ ಮತ್ತು ಮಧ್ಯಮ ಯೋಜನೆಗಳಿಗೆ ಒಪ್ಪಿಗೆ ಕೊಡಲಾಗಿದೆ. 15 ಕೋಟಿ ರೂ 50 ಕೋಟಿ ರೂ. ಒಳಗಿನ ವೆಚ್ಚದ 78 ಯೋಜನೆಗಳಿಗೆ ಅನುಮತಿ ನೀಡಲಾಗಿದೆ. ಮೂರು ಯೋಜನೆಗಳಿಗೆ ಸಂಬಂಧಿಸಿದ ಹೆಚ್ಚುವರಿ 137.15 ಕೋಟಿ ರೂ. ಪ್ರಸ್ತಾವಕ್ಕೆ ಅನುಮೋದನೆಯನ್ನು ನೀಡಲಾಗಿದೆ ಎಂದು ಸಚಿವ ನಿರಾಣಿ ಒವರು ಹೇಳಿದ್ದಾರೆ.
ಗುರುದತ್ತ ಇಂಟಿಗ್ರೇಟೆಡ್ ಟೆಕ್ಸ್ ಟೈಲ್ಸ್ ಪಾರ್ಕ್ – 357 ಕೋಟಿ ರೂ. ಸ್ಪಾನ್ ಸುಲ್ಸ್ ಫಾರ್ಮು ಲೇಷನ್-96 ಕೋಟಿ ರೂ. ರಿನಾಕ್ ಇಂಡಿಯ ಲಿಮಿಟೆಡ್ – 64 ಕೋಟಿ ರೂ. ಹೆಚ್ ಆ್ಯಂಡ್ ವಿ ಅಡ್ವಾನ್ಸಡ್ ಮೆಟೀರಿಯಲ್ ಇಂಡಿಯಾ ಪ್ರೈ. – 46.50 ಕೋಟಿ ರೂ. ಟೆಕ್ಸ್ ಪೋರ್ಟ್ ಇಂಡಸ್ಟ್ರೀಸ್ ಪ್ರೈ. ಲಿಮಿಟೆಡ್ – 44.80 ಕೋಟಿ ರೂ. ಕೇನಾಸ್ಸ್ ಟೆಕ್ನೋಲಜಿ ಇಂಡಿಯಾ ಪ್ರೈ. -35 ಕೋಟಿ ರೂ ವೆಚ್ಚದ ಯೋಜನೆಗಳಾಗಿವೆ.
ಈ ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ರಮಣರೆಡ್ಡಿ, ಇಲಾಖೆ ಆಯುಕ್ತ ಗುಂಜಾನ್ ಕೃಷ್ಣ ಸೇರಿದಂತೆ ಉನ್ನತಾಧಿಕಾರಿಗಳು ಹಾಜರಿದ್ದರು.