Saturday, November 28, 2026
Saturday, November 28, 2026

ಜನಜಾಗೃತಿ ಮೂಡಿಸಿದ ಉಚಿತ ಅಯುರ್ವೇದ ಚಿಕಿತ್ಸಾ ಶಿಬಿರ

Date:

ಶಿವಮೊಗ್ಗ ನಗರ ದುರ್ಗಿಗುಡಿಯಲ್ಲಿರುವ ಶುಕ್ರ ಆಯುರ್ವೇದ ಪ್ರತಿಷ್ಠಾನ (ರಿ.) ಹಾಗೂ ಶುಭಂ ಹೋಟೆಲ್ ಇವರ ಸಹಯೋಗದೊಂದಿಗೆ ಶುಕ್ರವಾರ ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿತ್ತು.

ಶುಭಂ ಹೋಟೆಲ್‌ನ ಮುಖ್ಯಸ್ಥರಾದ ಶ್ರೀಯುತ ಚಂದ್ರಹಾಸ್, ಶ್ರೀಯುತ ಉದಯ ಕಡಂಬ, ಶ್ರೀ ಮಂಜುನಾಥ್ ಶೆಟ್ಟಿ ಹಾಗೂ ಶುಕ್ರ ಆಯುರ್ವೇದ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಮತಿ ವಿಶಾಲಕ್ಷಮ್ಮ ಅವರು ಉಪಸ್ಥಿತರಿದ್ದು ಶಿಬಿರಕ್ಕೆ ಶುಭ ಹಾರೈಸಿದರು.

ಶುಭಂ ಹೋಟೆಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗದವರಿಗಾಗಿ ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಈ ಶಿಬಿರವನ್ನು ಆಯೋಜಿಸಲಾಗಿತ್ತು. ಶಿಬಿರದಲ್ಲಿ ನೂರಕ್ಕೂ ಹೆಚ್ಚು ಜನರು ಭಾಗವಹಿಸಿ ಉಚಿತ ಆಯುರ್ವೇದ ತಪಾಸಣೆ ಮತ್ತು ಚಿಕಿತ್ಸೆಯ ಸದುಪಯೋಗ ಪಡೆದುಕೊಂಡರು.

ಶಿಬಿರದಲ್ಲಿ ಆಯುರ್ವೇದ ತಜ್ಞ ವೈದ್ಯರಾದ ಡಾ. ನಾಗೇಂದ್ರ ಆಚಾರ್ಯ (ಎಂ.ಡಿ., ಪಿಹೆಚ್.ಡಿ.), ಡಾ. ಶಶಿಕಲಾ (ಬಿ.ಎ.ಎಂ.ಎಸ್.), ಡಾ. ದೈವಿಕ್ ಹಾಗೂ ಡಾ. ಬಿ.ಬಿ. ಜಾನ್ (ಕಲಿಕಾ ವೈದ್ಯರು) ಅವರು ಭಾಗವಹಿಸಿ ರೋಗಿಗಳಿಗೆ ತಪಾಸಣೆ ಹಾಗೂ ಸೂಕ್ತ ಚಿಕಿತ್ಸಾ ಸಲಹೆಗಳನ್ನು ನೀಡಿದರು. ವಿವಿಧ ಔಷಧಿ ಕಂಪನಿಗಳ ಪ್ರತಿನಿಧಿಗಳೂ ಶಿಬಿರದಲ್ಲಿ ಪಾಲ್ಗೊಂಡಿದ್ದರು.

ವಿಶೇಷವಾಗಿ ಸೊಂಟ ನೋವು, ಬೆನ್ನು ನೋವು, ಕುತ್ತಿಗೆ ನೋವು, ಮಂಡಿ ನೋವು, ಸಂಧಿವಾತ ಹಾಗೂ ನರಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದ ನೂರಕ್ಕೂ ಹೆಚ್ಚು ಜನರು ಶಿಬಿರದಲ್ಲಿ ಉಚಿತ ಚಿಕಿತ್ಸೆ ಪಡೆದುಕೊಂಡರು.

ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಹಾಗೂ ಆಯುರ್ವೇದ ಚಿಕಿತ್ಸೆಯ ಮಹತ್ವವನ್ನು ತಿಳಿಸುವ ನಿಟ್ಟಿನಲ್ಲಿ ಆಯೋಜಿಸಲಾದ ಈ ಶಿಬಿರವು ಯಶಸ್ವಿಯಾಗಿ ನೆರವೇರಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sahachetana Natyaalaya ಮೊದಲ ಅಂತಾರಾಷ್ಟ್ರೀಯ ನೃತ್ಯಪ್ರದರ್ಶನ: ಕಲಾರಸಿಕರ ಮನಸೂರೆಗೈದ ಸಹಚೇತನ ನಾಟ್ಯಾಲಯ

ದುಬೈನಲ್ಲಿ ನಡೆದ ಗಲ್ಫ್ ರಾಷ್ಟ್ರಗಳ ಅತಿದೊಡ್ಡ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಒಂದಾದ 'ದುಬೈ...

ಆಹಾರ ತಯಾರಿಕೆ: ಸಂಸ್ಕರಣೆ ಮತ್ತು ವಿತರಣೆಯಲ್ಲಿ ಸೂಕ್ತ ಸುರಕ್ಷತಾ ಕ್ರಮ ಅಳವಡಿಕೆ ಕಡ್ಡಾಯ- ಡಾ.ಎಚ್.ಪಿ.ಎಸ್.ಮೈತ್ರಿ

Rotary Club Shivamogga ಸುರಕ್ಷಿತ ಆಹಾರ ಪ್ರತಿಯೊಬ್ಬ ಗ್ರಾಹಕನ ಹಕ್ಕಾಗಿದ್ದು, ಆಹಾರದಿಂದ...

D.K. Shivakumar ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್ಲ ಶಾಲೆಗಳಲ್ಲೂ ಸಂವಿಧಾನ ಪಾಠ ಅಳವಡಿಕೆ- ಡಿ.ಕೆ.ಶಿವಕುಮಾರ್.

D.K. Shivakumar ಸಂವಿಧಾನ ಎನ್ನುವುದು ಕೇವಲ ಪುಸ್ತಕವಲ್ಲ, ಅದು ಪ್ರತಿಯೊಬ್ಬ ಭಾರತೀಯನ...