ದಾಸ ಶ್ರೇಷ್ಠ ಶ್ರೀ ಭಕ್ತ ಕನಕದಾಸರ 539ನೇ ಜಯಂತೋತ್ಸವವನ್ನು ನಮ್ಮೂರ ಬಳಗದ ವತಿಯಿಂದ ಅಲ್ಲಮಪ್ರಭು ಮೈದಾನ, ಫ್ರೀಡಂ ಪಾರ್ಕ್ ನಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ , ಸಿಹಿ ವಿತರಿಸಿ ಆಚರಿಸಲಾಯಿತು.
ಕಾರ್ಯಕ್ರಮವನ್ನುದೇಶಿಸಿ ಮಾತನಾಡಿದ ನಮ್ಮೂರ ಬಳಗ ಪ್ರಧಾನ ಸಂಚಾಲಕ ಕೆ. ರಂಗನಾಥ್ ಅವರುತಮ್ಮ ಕೀರ್ತನೆಗಳ ಮೂಲಕ ಜಾತಿ, ಮತ, ವರ್ಣಭೇದಗಳನ್ನು ಮೀರಿ ಭಕ್ತಿ, ಸಮಾನತೆ ಹಾಗೂ ಮಾನವೀಯತೆಯ ಬೆಳಕು ಚೆಲ್ಲಿದ ಮಹಾನ್ ದಾರ್ಶನಿಕರು ಕನಕದಾಸರು.
ಅವರ ಆದರ್ಶಗಳು ಮತ್ತು ನೈತಿಕ ಮೌಲ್ಯಗಳು ಇಂದಿಗೂ ನಮ್ಮೆಲ್ಲರಿಗೂ ದಾರಿ ದೀಪವಾಗಿವೆ. ಕನಕದಾಸರ ತತ್ತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಪ್ರತಿಯೊಬ್ಬರಿಗೂ ನ್ಯಾಯ ಮತ್ತು ಗೌರವ ಸಿಗುವಂತಹ ಸಮಾನತೆಯ ಸಮಾಜವನ್ನು ನಿರ್ಮಿಸಲು ಸಂಕಲ್ಪ ಮಾಡೋಣ ಎಂದರು.
ಈ ಸಂದರ್ಭದಲ್ಲಿ ನಮ್ಮೂರ ಬಳಗದ ಪ್ರಧಾನ ಸಂಚಾಲಕರಾದ ಕೆ .ರಂಗನಾಥ್, ಗೌರವ ಸಂಚಾಲಕರಾದ ಸಿ ರವಿ , ಹೆಚ್ ಪಾಲಾಕ್ಷಿ, ನಾಗರಾಜ್ ಕಂಕರಿ ಸಂಚಾಲಕರುಗಳಾದ ಕೆ ಆರ್ ಸುರೇಶ್, ಹೆಚ್. ಪಿ. ಗಿರೀಶ್, ರಾಜೇಶ್ ಮಂದಾರ, ಜಯಪ್ರಕಾಶ್,ಪ್ರಶಾಂತ್ ರಾಯ್, ಸಿಟಿ ಬ್ಯಾಂಕ್ ಎಂ. ರಾಕೇಶ್, ಎಸ್ ಬಸವರಾಜ್,ಆರ್ ಕಿರಣ್,ಕೆ ಎಲ್ ಪವನ್ ಎಂ.ರಾಕೇಶ್ , ರಾಹುಲ್, ಕೆ.ಜಿ. ಮಿತ್ರಣ್ಣ ಸಿ,ಸುಬ್ರಮಣಿ, ಕೇಬಲ್ ಲೋಕೇಶ್, ಭವಾನಿ ರಾವ್, ದೇವದಾಸ್ , ದಿನೇಶ್ ಹಾಗೂ ನಾಗರಿಕ ಬಂಧುಗಳು ಇದ್ದರು.
