Thursday, November 26, 2026
Thursday, November 26, 2026

District Consumer Disputes Redressal Commission ದೋಷಯುಕ್ತ ಲ್ಯಾಪ್ ಟಾಪ್ ಮಾರಾಟ : ಸೇವಾ ನ್ಯೂನತೆಗೆ ಮಾರಾಟಗಾರರಿಗೆ ದಂಡ

Date:

District Consumer Disputes Redressal Commission ದೋಷಯುಕ್ತ ಲ್ಯಾಪ್‌ಟಾಪ್ ಮಾರಾಟ ಮಾಡಿ, ಸರಿಪಡಿಸಿಕೊಡದೆ ಅಥವಾ ಹಣ ಹಿಂದಿರುಗಿಸದೇ ಸೇವಾನ್ಯೂನ್ಯತೆ ಎಸಗಿದ ಮೆ||ಆಪಲ್ ಇಂಡಿಯಾ ಪ್ರೈ.ಲಿ., ಬೆಂಗಳೂರು ಇವರಿಗೆ ಶೇ. 7ರ ಬಡ್ಡಿ ಯೊಂದಿಗೆ ಲ್ಯಾಪ್‌ಟಾಪ್ ಹಣ ಮರುಪಾವತಿಸುವಂತೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಆದೇಶಿಸಿದೆ.
ಶಿವಮೊಗ್ಗ ತಾಲೂಕು ಹರಿಗೆ ಗ್ರಾಮದ ಶ್ರೀಮತಿ ಸರಬಜಿತ್ ಕೌರ್ ಎಂಬುವವರು 1) ಮೆ|| ಆಪಲ್ ಇಂಡಿಯಾ ಪ್ರೈ.ಲಿ., ಬೆಂಗಳೂರು, 2) ಮಾಲೀಕರು/ ವ್ಯವಸ್ಥಾಪಕರು, ಟೆಕ್ ಸ್ಪಾರ್ಕ ವೆಂಜರ್ಸ್, ಜೈಲ್ ವೃತ್ತ ಶಿವಮೊಗ್ಗ, 3) ಎಫ್-1 ಇನ್ಫೋ ಸಲೂಷನ್ಸ್ ಮತ್ತು ಸರ್ವಿಸಸ್ ಪ್ರೈ.ಲಿ., ವಿದ್ಯಾನಗರ, ಹುಬ್ಬಳ್ಳಿ ಮತ್ತು 4)ಬಪ್ಲಾನೆಟ್ ಕೇರ್, ವಾಣಿವಿಲಾಸ ಮೊಹಲ್ಲಾ, ಮೈಸೂರು ಇವರುಗಳ ವಿರುದ್ಧ ದೂರು ದಾಖಲಿಸಿದ್ದರು.
ದೂರುದಾರು ದಿ: 24/16/2024 ರಂದು 1.80 ಲಕ್ಷ ರೂ.ಗಳನ್ನು ಪಾವತಿಸಿ, ಮ್ಯಾಕ್ ಬುಕ್ ಪ್ರೋ ಲ್ಯಾಪ್‌ಟಾಪ್‌ನ್ನು 1ನೇ ಎದುರುದಾರರಲ್ಲಿ ಖರೀದಿಸಿದ್ದು, ಕೆಲವೇ ತಿಂಗಳುಗಳಲ್ಲಿ ದೋಷ ಕಂಡುಬಂದಿರುತ್ತದೆ. 2ನೇ ಎದುರುದಾರರಲ್ಲಿ ದೋಷಗಳನ್ನು ಸರಿಪಡಿಸಿಕೊಡುವಂತೆ ಕೋರಿದ್ದು, ಅವರು 3ನೇ ಎದುರುದಾರರ ಬಳಿ ಕಳುಹಿಸಿದ್ದು, ಅವರು ಕಿಬೋರ್ಡ್ ನ್ನು ಬದಲಾಯಿಸಿ ಕೊಟ್ಟು ಉಳಿದ ದೋಷಗಳನ್ನು ಸರಿಪಡಿಸದೇ ಹಿಂದಿರುಗಿಸಿರುತ್ತಾರೆ. ಇದಕ್ಕೆ ಸಂಬಂಧಿಸಿದಂತೆ 4ನೇ ಎದುರುದಾರರ ಬಳಿ ಕಳುಹಿಸಿದ್ದು, ಇವರು ಕೆಲವು ದೋಷಗಳನ್ನು ಸರಿಪಡಿಸಿ ಉಳಿದ ದೋಷಗಳನ್ನು ಸರಿಪಡಿಸದೇ ವಾಪಾಸ್ಸು ನೀಡಿದ್ದು, ದೂರುದಾರರು ಹಿಂಪಡೆಯದೇ ಲ್ಯಾಪ್‌ಟಾಪ್ ಸರಿಪಡಿಸಿಕೊಂಡುವಂತೆ ಅವರ ಬಳಿ ಬಿಟ್ಟಿರುತ್ತಾರೆ. ಆದರೆ ಎದುರುದಾರರ ಲ್ಯಾಪ್ ಟಾಪ್ ಸರಿಪಡಿಸಿಕೊಡದೇ ಅಸಮಂಜಸ ಉತ್ತರ ನೀಡಿ ಲ್ಯಾಪ್ ಟಾಪ್ ದೋಷ ಸರಿಪಡಿಸದೇ ಅಥವಾ ಖರೀದಿಸಿದ ಹಣವನ್ನೂ ಹಿಂತಿರುಗಿಸದೇ ಸೇವಾ ನ್ಯೂನ್ಯತೆ ಎಸಗಿರುತ್ತಾರೆ ಎಂದು ಗ್ರಾಹಕ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದು, ಆಯೋಗವು ಎದುರುದಾರರಿಗೆ ನೋಟೀಸ್ ನೀಡಿದ್ದು, ಎಲ್ಲಾ 4 ಎದುರುದಾರರು ವಕೀಲರ ಮೂಲಕ ಹಾಜರಾಗಿ ತಕರಾರು ಸಲ್ಲಿಸಿರುತ್ತಾರೆ.
ತೀರ್ಪು: ದೂರುದಾರರ ಮತ್ತು ಎದುರುದಾರರ ವಾದ ಮತ್ತು ಸಲ್ಲಿಸಿರುವ ಪ್ರಮಾಣ ಪತ್ರ ಹಾಗೂ ದಾಖಲೆಗಳನ್ನು ಪರಿಶೀಲಿಸಿದ ಆಯೋಗವು, ಎದುರುದಾರರು ಲ್ಯಾಪ್‌ಟಾಪ್‌ನ್ನು ಸರಿಯಾಗಿ ಪರಿಶೀಲಿಸಿ ದೋಷವನ್ನು ಸರಿಪಡಿಸದೇ ಸೇವಾನ್ಯೂನ್ಯತೆ ಎಸಗಿರುತ್ತಾರೆ ಎಂದು ತೀರ್ಮಾನಿಸಿ ದೂರನ್ನು ಭಾಗಶಃ ಪರುಸ್ಕರಿಸಿದೆ.
1 ರಿಂದ 4ನೇ ಎದುರುದಾರರು ಜಂಟಿಯಾಗಿ ಹಾಗೂ ಪ್ರತ್ಯೇಕವಾಗಿ, ಖರೀದಿಸಿದ ಮೊತ್ತ ರೂ. 1.80 ಲಕ್ಷಗಳಲ್ಲಿ ಜಿ.ಎಸ್.ಟಿ. ಮೊತ್ತ ರೂ. 27,457-62ಗಳನ್ನು ಕಡಿತಗೊಳಿಸಿ, ಉಳಿದ ರೂ. 1,52,542-37 ಗಳಿಗೆ ದಿನಾಂಕ:10/07/2025 ರಿಂದ ವಾರ್ಷಿಕ ಶೇ.7ರ ಬಡ್ಡಿಯೊಂದಿಗೆ 45 ದಿನಗಳ ಒಳಗಾಗಿ ಪಾವತಿಸಬೇಕು. ತಪ್ಪಿದ್ದಲ್ಲಿ ಶೇ.10ರಂತೆ ಬಡ್ಡಿ ಅನ್ವಯವಾಗಲಿದೆ.
ಮಾನಸಿಕ ಹಿಂಸೆ ಮತ್ತು ದೂರಿನ ವೆಚ್ಚಕ್ಕಾಗಿ ರೂ. 30,000/- ಹಾಗೂ ರೂ. 5,000/- ಗಳನ್ನು ಸಹ 45 ದಿನಗಳೊಳಗೆ ನೀಡಬೇಕು. ತಪ್ಪಿದಲ್ಲಿ ಇದಕ್ಕೆ ವಾರ್ಷಿಕ ಶೇ.10 ರಂತೆ ಬಡ್ಡಿ ವಿಧಿಸಲಾಗುವುದು ಎಂದು ಆಯೋಗದ ಅಧ್ಯಕ್ಷರಾದ ಟಿ. ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ. ಯೋಗಾನಂದ ಭಾಂಡ್ಯ ಅವರು ದಿನಾಂಕ: 21/11/2026 ರಂದು ಆದೇಶ ಹೊರಡಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Club ರಿವರ್ ಸೈಡ್ ರೋಟರಿ ಕ್ಲಬ್ ಗೆ ವಲಯಮಟ್ಟದ ಚಾಂಪಿಯನ್ ಶಿಪ್

Rotary Club ಕ್ರೀಡಾ ಸಂಭ್ರಮ–26 ಕ್ರೀಡಾಕೂಟದಲ್ಲಿ ರೋಟರಿ ಕ್ಲಬ್ ರಿವರ್‌ ಸೈಡ್...

Madhu Bangarappa ಯಾವುದೇ ಕಾರಣಕ್ಕೂ ಕ್ಲಷ್ಟರ್ ಕಿಚನ್ ಕೇಂದ್ರ ಸ್ಥಾಪಿಸುವುದಿಲ್ಲ- ಮಧು ಬಂಗಾರಪ್ಪ

Madhu Bangarappa ರಾಜ್ಯ ಅಕ್ಷರದಾಸೋಹ ಬಿಸಿಯೂಟ ತಯಾರಕರ ಯೂನಿಯನ್‌ನ ಗೌರವಾಧ್ಯಕ್ಷ ಎಸ್....

Klive Special Article ಕುಮಾರ ವ್ಯಾಸ ..ನಾನು ಕಂಡಂತೆ ಲೇ: ಪ್ರಸಾದ್ ಶ್ರೀವತ್ಸ, ದಾವಣಗೆರೆ

“ಕುಮಾರ ವ್ಯಾಸನು ಹಾಡಿದನೆಂದರೆಕಲಿಯುಗ ದ್ವಾಪರವಾಗುವುದುಭಾರತ ಕಣ್ಣಲಿ ಕುಣಿವುದು! ಮೈಯಲಿಮಿಂಚಿನ ಹೊಳೆ ತುಳುಕಾಡುವುದು!“ ಕುಮಾರವ್ಯಾಸನ...