ಶಿವಮೊಗ್ಗ ನಗರದ ಹಳೆಮಂಡ್ಲಿ ವಾಸಿ ವಿನುತಾ ಎಂಬ 32 ವರ್ಷದ ಮಹಿಳೆ ಅ.10 ರಂದು ಮನೆಯಿಂದ ಕೆಲಸಕ್ಕೆಂದು ಹೋಗಿದ್ದು, ಈವರೆಗೂ ಮನೆಗೆ ವಾಪಾಸ್ಸಾಗಿರುವುದಿಲ್ಲ.
ಕಾಣೆಯಾದ ಮಹಿಳೆ 5 ಅಡಿ ಎತ್ತರ, ಗೋಧಿ ಮೈಬಣ್ಣ, ತೆಳುವಾದ ಮೈಕಟ್ಟು ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಕೆಂಪು ಬಣ್ಣದ ಚೂಡಿದಾರ, ಬಿಳಿ ಜಾಕೇಟ್ ಧರಿಸಿರುತ್ತಾರೆ.
ಈ ಮಹಿಳೆಯ ಬಗ್ಗೆ ಸುಳಿವು ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.: 08182-261414, 9480803345, 8105270435 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
ಶಿವಮೊಗ್ಗದ ಹಳೇಮಂಡ್ಲಿಯಿಂದ ಮಹಿಳೆ ನಾಪತ್ತೆ ಪೊಲೀಸ್ ಪ್ರಕಟಣೆ
Date:
