Sunday, November 22, 2026
Sunday, November 22, 2026

ರಕ್ತದಾನ, ನೇತ್ರದಾನ ವಿಷಯಷ ಬಗ್ಗೆ ಕವಿತೆ ಬರೆಯಿರಿ: ಕವಿಗಳಿಗೆ ಶಿವಮೊಗ್ಗ ಫ್ರೆಂಡ್ಸ್ ಸೆಂಟರ್ ಆಮಂತ್ರಣ

Date:

ಕಳೆದ 60 ವರ್ಷಗಳಿಂದ ವಿವಿಧ ಸಮಾಜಮುಖಿ ಸೇವಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಶಿವಮೊಗ್ಗದ ಫ್ರೆಂಡ್ಸ್ ಸೆಂಟರ್ ನೇತ್ರ ಮತ್ತು ರಕ್ತ ಭಂಡಾರ (ರಿ.) ಸಂಸ್ಥೆಯು ತನ್ನ 60ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ಸಾರ್ವಜನಿಕರಿಂದ ಕವನಗಳನ್ನು ಆಹ್ವಾನಿಸಿದೆ.

ನೇತ್ರದಾನ ಮತ್ತು ರಕ್ತದಾನದ ಮಹತ್ವ, ಜಾಗೃತಿ ಹಾಗೂ ಮಾನವೀಯ ಮೌಲ್ಯಗಳನ್ನು ಸಾರುವ ವಿಷಯದ ಕುರಿತು ಆಸಕ್ತ ಕವಿಗಳು ಸ್ವರಚಿತ ಕವನಗಳನ್ನು ಕಳುಹಿಸಬಹುದಾಗಿದೆ. ಕವನಗಳು ಈ ಹಿಂದೆ ಯಾವುದೇ ಪುಸ್ತಕದಲ್ಲಿ ಪ್ರಕಟವಾಗಿರಬಾರದು. ಎ4 ಅಳತೆಯ ಹಾಳೆಯಲ್ಲಿ ಕೈಬರಹದಲ್ಲಿ ಅಥವಾ ಟೈಪ್ ಮಾಡಿ ಕಳುಹಿಸಬೇಕು. ಆಯ್ಕೆಯಾಗುವ ಅತ್ಯುತ್ತಮ ಮೂರು ಕವನಗಳಿಗೆ ನಗದು ಬಹುಮಾನ ನೀಡಲಾಗುವುದು.

ಇದರೊಂದಿಗೆ ಸಂಭ್ರಮಾಚರಣೆಯ ಅಂಗವಾಗಿ ನಡೆಯಲಿರುವ ಕವಿಗೋಷ್ಠಿಯಲ್ಲಿ ಭಾಗವಹಿಸಲು ಆಸಕ್ತ ಕವಿಗಳಿಂದಲೂ ಹೆಸರುಗಳನ್ನು ಆಹ್ವಾನಿಸಲಾಗಿದೆ.

ಕವನಗಳನ್ನು ಹಾಗೂ ಕವಿಗೋಷ್ಠಿಯಲ್ಲಿ ಭಾಗವಹಿಸಲು ಇಚ್ಛಿಸುವವರು ತಮ್ಮ ಹೆಸರು ಮತ್ತು ವಿವರಗಳನ್ನು 2026ರ ನವೆಂಬರ್ 26ರೊಳಗೆ ಅಂಚೆ ಮೂಲಕ ಕಳುಹಿಸಬೇಕು. ಅಂಚೆ ಲಕೋಟೆಯ ಮೇಲೆ ಕವನ ಅಥವಾ ಕವಿಗೋಷ್ಠಿ ಎಂದು ಸ್ಪಷ್ಟವಾಗಿ ನಮೂದಿಸಬೇಕು.

ಕಳುಹಿಸಬೇಕಾದ ವಿಳಾಸ ಅಧ್ಯಕ್ಷರು,
ಫ್ರೆಂಡ್ಸ್ ಸೆಂಟರ್ ನೇತ್ರ ಮತ್ತು ರಕ್ತ ಭಂಡಾರ,
100 ಅಡಿ ರಸ್ತೆ, ಗೋಪಾಲಗೌಡ ಬಡಾವಣೆ,
ಶಿವಮೊಗ್ಗ. ಹೆಚ್ಚಿನ ಮಾಹಿತಿಗಾಗಿ 8217429502 ಅಥವಾ 9448463175 ಸಂಪರ್ಕಿಸಬಹುದು ಎಂದು ಸಂಸ್ಥೆಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಕಾನೂರ್ ಹಾಗೂ ಆಡಳಿತಾಧಿಕಾರಿ ನಾಗರಾಜ್ ವಿ. ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Editorial ಶಿವಮೊಗ್ಗ ಏರ್ ಪೋರ್ಟ್: ಕೇಂದ್ರಕ್ಕೆ ವಹಿಸಿ ಕೈತೊಳೆದು ಕೊಳ್ಳುವುದೇ ಕ್ಷೇಮ

Klive Editorial ಬಹಳ ಪ್ರಮುಖ ವಿಚಾರವೀಗ ಬಿಸಿಬಿಸಿ ಚರ್ಚೆಯ ಬಿಂದುವಾಗಿದೆ.ಶಿವಮೊಗ್ಗೆಗೆ ವಿಮಾನ...

Shivamogga Karnataka Sangha ವಿದ್ವಾನ್ ಜಿ.ಎಸ್. ನಟೇಶ್ ಅವರಿಗೆ ಕರ್ನಾಟಕ ಸಂಘದ ಪ್ರತಿಷ್ಠಿತ “ನವಿಲುಗರಿ” ಪುರಸ್ಕಾರ ನೀಡಿಕೆ ಸಮಾರಂಭ

Shivamogga Karnataka Sangha ಶಿವಮೊಗ್ಗ ಕರ್ನಾಟಕ ಸಂಘವು ಕನ್ನಡ ರಾಜ್ಯೋತ್ಸವದ ಅಂಗವಾಗಿ...

Madhu Bangarappa ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮ ಜಾರಿ- ಮಧು ಬಂಗಾರಪ್ಪ

Madhu Bangarappa ಸರ್ಕಾರಿ ಶಾಲೆಗಳ ಬಲವರ್ಧನೆ ಮತ್ತು ಖಾಸಗಿ ಶಾಲೆಗಳ ಪೈಪೋಟಿಯನ್ನು...