Sunday, November 22, 2026
Sunday, November 22, 2026

ಶಾಸಕ ಡಿ ಎಸ್ ಅರುಣ್ ಜನ್ಮದಿನ: ರಕ್ತದಾನ ಶಿಬಿರ,ಹೊಲಿಗೆ ಯಂತ್ರ ವಿತರಣೆ ಆಚರಣೆಯಲ್ಲಿ ವೈವಿಧ್ಯ

Date:

ವಿಧಾನ ಪರಿಷತ್ ಸದಸ್ಯರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಶ್ರೀ ಡಿ.ಎಸ್. ಅರುಣ್ ಅವರ ಜನ್ಮದಿನದ ಪ್ರಯುಕ್ತ ಅವರ ಸ್ನೇಹಿತರ ಬಳಗದ ವತಿಯಿಂದ ಶಿವಮೊಗ್ಗದ ರೋಟರಿ ಬ್ಲಡ್ ಬ್ಯಾಂಕ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ 107 ಯೂನಿಟ್ ರಕ್ತ ಸಂಗ್ರಹವಾಗಿದ್ದು, ಶಿಬಿರ ಯಶಸ್ವಿಯಾಗಿ ನೆರವೇರಿತು.

ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಈ ರಕ್ತದಾನ ಶಿಬಿರಕ್ಕೆ ಸಾರ್ವಜನಿಕರಿಂದ ಹಾಗೂ ಅಭಿಮಾನಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. 107 ಮಂದಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಹಲವಾರು ಜೀವಗಳ ಉಳಿವಿಗೆ ತಮ್ಮ ಅಮೂಲ್ಯ ಕೊಡುಗೆ ನೀಡಿದರು. ಅಭಿಮಾನಿಗಳ ಉತ್ಸಾಹಭರಿತ ಪಾಲ್ಗೊಳ್ಳುವಿಕೆಯೊಂದಿಗೆ ರಕ್ತದಾನ ಶಿಬಿರ ಗಮನಾರ್ಹ ಯಶಸ್ಸು ಕಂಡಿತು.

ಇದೇ ಸಂದರ್ಭದಲ್ಲಿ ಮಹಿಳೆಯರಿಗೆ ಹೊಲಿಗೆ ಯಂತ್ರಗಳು, ಯುವಕರಿಗೆ ಕ್ರಿಕೆಟ್ ಕಿಟ್‌ಗಳು ಹಾಗೂ ಶ್ರವಣದೋಷವುಳ್ಳ ಫಲಾನುಭವಿಗಳಿಗೆ ಆರ್ಥಿಕ ನೆರವಿನ ಚೆಕ್‌ಗಳನ್ನು ವಿತರಿಸಲಾಯಿತು. ಜೊತೆಗೆ ಗುಡ್‌ಲಕ್ ಹಾರೈಕೆ ಕೇಂದ್ರಕ್ಕೂ ನೆರವು ನೀಡಲಾಯಿತು.

ಜನ್ಮದಿನವನ್ನು ಕೇವಲ ಸಂಭ್ರಮಕ್ಕೆ ಸೀಮಿತಗೊಳಿಸದೆ, ರಕ್ತದಾನದಂತಹ ಜೀವದಾನಿ ಕಾರ್ಯದ ಜೊತೆಗೆ ವಿವಿಧ ಸಮಾಜಮುಖಿ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಕಾರ್ಯಕ್ರಮದ ವಿಶೇಷವಾಗಿತ್ತು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರಾದ ಗಿರೀಶ್ ಕಾರಂತ್, ಟೆಕ್ನೋರಿಂಗ್ಸ್ ಮಾಲೀಕರಾದ ಶಶಿಧರ್ ಭೂಪಾಳಮ್, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕರಾದ ಕೆ.ಬಿ. ಅಶೋಕ್ ನಾಯ್ಕ್, ಕೆಎಸ್‌ಸಿಎ ವಲಯದ ಮಾಜಿ ಸಂಚಾಲಕರಾದ ಡಿ.ಆರ್. ನಾಗರಾಜ್, ಅನಿತ ಪ್ರಕಾಶ್, ರಾಜೇಶ್ ಗೌಡ, ಮೋಹನ್, ದಿನೇಶ್, ಶ್ ಸುರೇಶಬಾಬು ಉಪಸ್ಥಿತರಿದ್ದರು.

ರೋಟರಿ ಮಾಜಿ ಸಹಾಯಕ ಗೌರ್ನರ್ ಜಿ. ವಿಜಯಕುಮಾರ್ ಹಾಗೂ ರೋಟರಿ ಬ್ಲಡ್ ಬ್ಯಾಂಕ್ ಕಾರ್ಯದರ್ಶಿ ಮುರುಳಿ ಎಂ. ಅವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಸಹಕರಿಸಿದರು.

107 ಯೂನಿಟ್ ರಕ್ತ ಸಂಗ್ರಹದ ಮೂಲಕ ಜನ್ಮದಿನವನ್ನು ಜೀವದಾನ ಹಾಗೂ ಸಮಾಜಸೇವೆಯ ಸಾರ್ಥಕ ಸಂಭ್ರಮವನ್ನಾಗಿ ಆಚರಿಸಿದ್ದು ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Editorial ಶಿವಮೊಗ್ಗ ಏರ್ ಪೋರ್ಟ್: ಕೇಂದ್ರಕ್ಕೆ ವಹಿಸಿ ಕೈತೊಳೆದು ಕೊಳ್ಳುವುದೇ ಕ್ಷೇಮ

Klive Editorial ಬಹಳ ಪ್ರಮುಖ ವಿಚಾರವೀಗ ಬಿಸಿಬಿಸಿ ಚರ್ಚೆಯ ಬಿಂದುವಾಗಿದೆ.ಶಿವಮೊಗ್ಗೆಗೆ ವಿಮಾನ...

Shivamogga Karnataka Sangha ವಿದ್ವಾನ್ ಜಿ.ಎಸ್. ನಟೇಶ್ ಅವರಿಗೆ ಕರ್ನಾಟಕ ಸಂಘದ ಪ್ರತಿಷ್ಠಿತ “ನವಿಲುಗರಿ” ಪುರಸ್ಕಾರ ನೀಡಿಕೆ ಸಮಾರಂಭ

Shivamogga Karnataka Sangha ಶಿವಮೊಗ್ಗ ಕರ್ನಾಟಕ ಸಂಘವು ಕನ್ನಡ ರಾಜ್ಯೋತ್ಸವದ ಅಂಗವಾಗಿ...

Madhu Bangarappa ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮ ಜಾರಿ- ಮಧು ಬಂಗಾರಪ್ಪ

Madhu Bangarappa ಸರ್ಕಾರಿ ಶಾಲೆಗಳ ಬಲವರ್ಧನೆ ಮತ್ತು ಖಾಸಗಿ ಶಾಲೆಗಳ ಪೈಪೋಟಿಯನ್ನು...