ಕನ್ನಡ ಸಿನಿಮಾ ಹಾಗೂ ನೆಲದ ಸಂಸ್ಕೃತಿಯನ್ನು ಸಂಭ್ರಮಿಸುವ ಉದ್ದೇಶದಿಂದ ಆಯೋಜಿಸಲಾಗಿರುವ ‘ಗಂಧದಗುಡಿ ಸಿನಿಹಬ್ಬ’ದ ಉದ್ಘಾಟನಾ ಪ್ರದರ್ಶನದಲ್ಲಿ ‘ಶರಾವತಿ ಸಂಗಾತ್ಯ’ ಎಂಬ ವಿಶೇಷ ಸಿನಿಮಾ ಪ್ರದರ್ಶನಗೊಳ್ಳಲಿದೆ.
ಶರಾವತಿ ನದಿಯ ತಿರುವಿನ ಹಿನ್ನೆಲೆಯಲ್ಲಿ ಮಲೆನಾಡಿನ ಜನರ ಬದುಕು, ಹಳೆಯ ಮುಳುಗಡೆಯ ನೋವು, ನೆನಪುಗಳು ಹಾಗೂ ಅಲ್ಲಿನ ಜನಜೀವನದ ಸಂವೇದನೆಗಳನ್ನು ಈ ಚಿತ್ರದಲ್ಲಿ ಮನಮುಟ್ಟುವಂತೆ ಕಟ್ಟಿಕೊಡಲಾಗಿದೆ.
ಮೈಸೂರು ಸಿನಿಮಾ ಸೊಸೈಟಿಯ ನಿರ್ಮಾಣದಲ್ಲಿ, ಯಾಜಿ ಅವರ ಸಾರಥ್ಯದಲ್ಲಿ ಮೂಡಿಬಂದಿರುವ ಈ ಸಿನಿಮಾ ಸಾಗರ ಹಾಗೂ ಮಲೆನಾಡಿನ ನೆಲದ ಸಂಸ್ಕೃತಿ, ಬದುಕಿನ ಹೋರಾಟ ಮತ್ತು ಮುಳುಗಡೆಯ ನೆನಪುಗಳನ್ನು ಮತ್ತೆ ನೆನಪಿಸಲಿದೆ.
ನವೆಂಬರ್ 21ರಂದು ಶನಿವಾರ ಸಂಜೆ 6:45ರಿಂದ 7:45ರವರೆಗೆ ಬೆಂಗಳೂರಿನ ಕೆ.ಜಿ. ರಸ್ತೆಯಲ್ಲಿರುವ ಸರ್ ಎಂ. ವಿಶ್ವೇಶ್ವರಯ್ಯ ಆಡಿಟೋರಿಯಂ (FKCCI)ನಲ್ಲಿ ಚಿತ್ರದ ಪ್ರದರ್ಶನ ನಡೆಯಲಿದೆ.
ಕನ್ನಡ ಸಿನಿಮಾ ಮತ್ತು ಸಾಂಸ್ಕೃತಿಕ ಅಭಿರುಚಿಯನ್ನು ಉತ್ತೇಜಿಸುವ ಈ ಸಿನಿಹಬ್ಬದ ಉದ್ಘಾಟನಾ ಪ್ರದರ್ಶನಕ್ಕೆ ಸಿನಿಮಾ ಪ್ರೇಮಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮೈಸೂರು ಸಿನಿಮಾ ಸೊಸೈಟಿಯ ಆಯೋಜಕ ಸಮಿತಿ ಮನವಿ ಮಾಡಿದೆ.
