ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಿಂದ 2026-27 ನೇ ಸಾಲಿನಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಮಾಹಿತಿ ಶಿಕ್ಷಣ ಸಂವಹನ (ಐ.ಇ.ಸಿ) ಕಾರ್ಯಕ್ರಮದಡಿ ಆರೋಗ್ಯ ಇಲಾಖೆಯ ಕಾರ್ಯಕ್ರಮಗಳು ಮತ್ತು ಯೋಜನೆಗಳ ಬಗ್ಗೆ ಜಾನಪದ ಕಲಾ ಪ್ರಾಕಾರದ ಬೀದಿ ನಾಟಕಗಳ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲು ಅರ್ಹ ಜಾನಪದ ಕಲಾ ತಂಡಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಕಲಾ ತಂಡಗಳು ನಿಗದಿತ ನಿಯಮ ಮತ್ತು ನಿಬಂಧನೆಗಳಿಗೊಳಪಟ್ಟು ದಿನಾಂಕ: 17-11-2026 ರ ಸಂಜೆ 5-00 ಗಂಟೆಯೊಳಗೆ ಈ ಕಚೇರಿಯ ಐ.ಇ.ಸಿ ವಿಭಾಗದಿಂದ ನಿಗದಿತ ಅರ್ಜಿ ನಮೂನೆಗಳನ್ನು ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಬೇಕು.
ಕಲಾ ತಂಡಗಳು/ಕಲಾವಿದರು ಶಿವಮೊಗ್ಗ ಜಿಲ್ಲೆಯವರಾಗಿರಬೇಕು.
ಜಾನಪದ ಕಲಾ ಪ್ರಕಾರದ ಹೆಸರಿನಲ್ಲಿ ಕಲಾ ತಂಡ ನೊಂದಣೆಯಾಗಿರಬೇಕು.
ಕಲಾ ತಂಡದ ನೊಂದಣಿ ನವೀಕರಣ ವರದಿ ಮತ್ತು ಕಲಾ ತಂಡದ ಮುಖ್ಯಸ್ಥರ ಅಧಿಕೃತ ವಿಳಾಸವನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.
ಕಲಾ ತಂಡವು 8 ಜನ ಕಲಾವಿದರನ್ನು ಹೊಂದಿರಬೇಕು ಮತ್ತು ಕಲಾವಿದರು 60 ವರ್ಷದ ಒಳಗಿರಬೇಕು.
ಕಲಾ ಪ್ರಕಾರಕ್ಕೆ ತಕ್ಕಂತೆ ತಮ್ಮದೇ ಆದ ಪ್ರಸಾದನ/ಉಡುಪುಗೊಂಡು ಕಲಾ ಪ್ರದರ್ಶನ ನೀಡಬೇಕು.
ಕಲಾ ತಂಡವು ಹತ್ತು ಪರಿಶಿಷ್ಟ ಜಾತಿ, ಪಂಗಡಗಳು ಹಾಗೂ ಮಹಿಳಾ ಕಲಾವಿದರನ್ನು ಒಳಗೊಂಡಿರಬೇಕು.
ಈ ಕಚೇರಿಯಿಂದ ತಿಳಿಸಲಾಗುವ ದಿನಾಂಕದಂದು ಆಯ್ಕೆ ಸಮಿತಿ ಮುಂದೆ ಕಲಾ ಪ್ರದರ್ಶನ ನೀಡಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯ ಐ.ಇ.ಸಿ ವಿಭಾಗವನ್ನು ಸಂಪರ್ಕಿಸಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಟರಾಜ್ ತಿಳಿಸಿದ್ದಾರೆ.
ಜಾನಪದ ಕಲಾತಂಡಗಳಿಂದ ಅರ್ಜಿ ಸಲ್ಲಿಸಲು ಆಹ್ವಾನ
Date:
