ಕ್ರಿಯಾಶೀಲ ತಾರೆಯರು ಶಿವಮೊಗ್ಗ ತಂಡದ ಅಧ್ಯಕ್ಷರಾದ ಫೌಜಿಯ ಸರವತ್ ಇವರ ನಾಯಕತ್ವದಲ್ಲಿ ಇಂದು ಮಂಗಳವಾರ ಹೊಸನಗರ ತಾಲೂಕಿನ ಕಲ್ಲುಹಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯ್ದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ೧೫ ಸಾವಿರ ಉಚಿತ ನೋಟ್‌ಬುಕ್ ವಿತರಿಸಲಾಯಿತು.
ನೋಟ್‌ಬುಕ್ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕ್ರಿಯಾಶೀಲ ತಾರೆಯರು ಶಿವಮೊಗ್ಗ ತಂಡದ ಅಧ್ಯಕ್ಷೆ, ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತೆ ಫೌಜಿಯ ಸರವತ್ ಮಾತನಾಡಿ ಸರ್ಕಾರಿ ಶಾಲಾ ಮಕ್ಕಳು ಶೈಕ್ಷಣಿಕ ಪ್ರಗತಿ ಸಾಧಿಸಿಸಬೇಕು. ವಿದ್ಯಾರ್ಥಿಗಳು ನೋಟ್‌ಬುಕ್‌ಗಳನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು. ಈ ಪುಸ್ತಕಗಳು ಇಲ್ಲಿಯವರೆಗೂ ತಲುಪಲು ಅದರ ಹಿಂದಿನ ಶ್ರಮ ಹಾಗೂ ದಾನಿಗಳಾದ ಪುರುಷೋತ್ತಮ್ ಅವರ ಸಹಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು.
ಸತತವಾಗಿ ಮೂರು ವರ್ಷಗಳಿಂದ ಜಿಲ್ಲೆಯ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಮಾರುತಿ ಮೆಡಿಕಲ್ಸ್ನ ಮಹೇಂದ್ರ ಮನೋತ್, ಉಪೇಂದ್ರ ಹಾಗೂ ನಯಾಜ್ ಅವರ ಸಹಕಾರದೊಂದಿಗೆ ಉಚಿತ ನೋಟ್ ಪುಸ್ತಕಗಳನ್ನು ನೀಡಲಾಗುತ್ತಿದೆ. ಈ ಶೈಕ್ಷಣಿಕ ವರ್ಷದಲ್ಲಿ ಒಂದೂವರೆ ಲಕ್ಷ ಮೌಲ್ಯದ ೧೫ ಸಾವಿರ ನೋಟ್‌ಬುಕ್‌ಗಳನ್ನು ನೀಡಿರುತ್ತಾರೆ.
ಕಲ್ಲುಹಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಪ್ರಭಾಕರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಮಾಜ ಸೇವಕ ಪುರುಷೋತ್ತಮ್, ಬೆಳ್ಳೂರು ಸಮೂಹ ಸಂಪನ್ಮೂಲ ವ್ಯಕ್ತಿ ಶೀಲಾ, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಗುರುಮೂರ್ತಿ, ಬಸವರಾಜಪ್ಪ, ಶಿವಪ್ಪ, ಮಾಲತೇಶ್ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಬೆಳ್ಳೂರು ಕ್ಲಸ್ಟರ್‌ನ ಎಲ್ಲಾ ಶಿಕ್ಷಕರು, ಗ್ರಾಮಸ್ಥರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಿಕ್ಷಕಿ ವಿನುತ ಸ್ವಾಗತಿಸಿ, ಮಾಲತೇಶ್ ನಿರೂಪಿಸಿ, ಪದ್ಮಾವತಿ ವಂದಿಸಿದರು.
