Sunday, November 1, 2026
Sunday, November 1, 2026

ಕನ್ನಡ ಪ್ರೀತಿ…ಲೇ: ಜಯಭೀಮ ಜೊಯ್ಸ್.ಶಿವಮೊಗ್ಗ.

Date:

ನವೆಂಬರ್ ಒಂದು ಬಂತೆಂದರೆ
ಕ್ಯಾಲೆಂಡರಿನಲ್ಲಿ.
ಕನ್ನಡದ ನಮ್ಮಮ್ಮ
ಹೇಳುವಳು
ಕಂದಾ ಏಳು ರಾಜ್ಯೋತ್ಸವಕ್ಕೆ
ಹೋಗಿ ಕನ್ನಡದ ಹಬ್ಬ
ನೋಡೋಣ ಕರ್ನಾಟಕ
ಸಂಘದಲ್ಲಿ.
ಕನ್ನಡ ರಾಜ್ಯೋತ್ಸವ
ಇದು ಕನ್ನಡಮ್ಮನ ಉತ್ಸವ
ಕುಳಿತಿಹಳು ನಮ್ಮ ಕನ್ನಡಮ್ಮ
ಎಲ್ಲಕನ್ನಡಿಗರ ಮನದಲ್ಲಿ.
ಕೂತಲ್ಲಿ ನಿಂತಲ್ಲಿ
ಕನ್ನಡಮ್ಮನಿರುವಳು
ನಮ್ಮ ಉಸಿರಲ್ಲಿ,
ನಮ್ಮ ಹೃದಯದಲ್ಲಿ.
ಇಂಗ್ಲೀಷು ಉಪಯೋಗಿಸಿ
ಎಲ್ಲಿಬೇಕೋ ಅಲ್ಲಿ.
ಕನ್ನಡದ ಕಂಪು ಹರಡೋಣ
ಎಲ್ಲಕಡೆಯಲ್ಲಿ
ಕನ್ನಡಮ್ಮನ ತೇರು ಎಳೆಯೋಣ
ಕೇರಿ,ಕೇರಿಗಳಲ್ಲಿ
ನಾವು ಕನ್ನಡಮ್ಮನ
ಮಕ್ಕಳು
ಎಂದು ಹೇಳೋಣ
ಎಲ್ಲರ ಕಿವಿಯಲ್ಲಿ
ಬೀಗೋಣ ಹೆಮ್ಮೆಯಲ್ಲಿ.
ಹಸ್ತಲಾಘವ ಬಿಟ್ಟು
ನಮಸ್ತೇ ಹೇಳೋಣ
ಎರಡೂ ಕೈಸೇರಿಸಿ
ಅಚ್ಚ ಕನ್ನಡದಲ್ಲಿ.
ದೇಶ ವಿದೇಶದಲ್ಲಿರುವ ಕನ್ನಡದ
ಬಂಧುಗಳಿಗೆ
ಶುಭಾಶಯ ಹೇಳೋಣ
ಕನ್ನಡಮ್ಮನ
ಪ್ರೀತಿಯಲ್ಲಿ.
ಮನೆಬಾಗಲಿಗೆ ತೋರಣ
ಕಟ್ಟೋಣ” ಅ ಆ
ಇ ಈ” ಅಕ್ಷರಮಾಲಿಕೆಯಲ್ಲಿ.
ಮಕ್ಕಳಿಗೆ ಡ್ಯಾಡಿ ಮಮ್ಮಿ
ಸಂಸ್ಕೃತಿ
ನಿಲ್ಲಿಸಿ ಅಪ್ಪ,ಅಮ್ಮ
ಎಂದು ಕರೆಯಲು
ಕಲಿಸೋಣ ಪ್ರೀತಿಯಲ್ಲಿ.
ಹರಿದಾಸರುಗಳು ಜನರಿಗೆ ಬುದ್ಧಿ
ಮಾತು ಹೇಳಿದರು ಹಾಡಿ ಕನ್ನಡದಲ್ಲಿ.
ಹಾರಿಸೋಣ ಕನ್ನಡಮ್ಮನ ಬಾವುಟ
ಎಲ್ಲರ ಮನೆ ಮನದಲ್ಲಿ.
ಅನ್ನ ಕೊಡುವ ರೈತರಿಗೆ,ಗಡಿ
ಕಾಯುವ ಯೋಧರಿಗೆ
ಶುಭಾಶಯ ಹೇಳೋಣ
ಸಂತೋಷದಲ್ಲಿ
ಎಲ್ಲರಿಗೂ ಸನ್ಮಂಗಳವನ್ನು
ಕರುಣಿಸುವಂತೆ ಬೇಡುವೆವು
ರಾಜ್ಯೋತ್ಸವದಂದು
ಭುವನೇಶ್ವರಿ
ಅಮ್ಮನಲ್ಲಿ.


ಕನ್ನಡ ರಾಜ್ಯೋತ್ಸವದ
ಶುಭಾಶಯಗಳು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kannada Rajyotsava ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50% ರಿಯಾಯಿತಿ

Kannada Rajyotsava ಕನ್ನಡ ರಾಜ್ಯೋತ್ಸವದ ಅಂಗವಾಗಿ 2026ರ ನವೆಂಬರ್ ತಿಂಗಳು ಪೂರ್ತಿ...

Karnataka Media Academy ಕರ್ನಾಟಕ ಮಾಧ್ಯಮ ಆಕಾಡೆಮಿಯಿಂದ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ

Karnataka Media Academy ಕರ್ನಾಟಕ ಮಾಧ್ಯಮ ಅಕಾಡೆಮಿಯು 2026ನೇ ಸಾಲಿನ ವಿವಿಧ...