Friday, October 30, 2026
Friday, October 30, 2026

ಮೈಸೂರು ಒಡಿಸ್ಸಿ ಉತ್ಸವಕ್ಕೆ ಸಜ್ಜು: ನವೆಂಬರ್ 1ರಂದು ಐದನೇ ಆವೃತ್ತಿಯ ನೃತ್ಯ ಸಂಭ್ರಮ

Date:

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಒಡಿಸ್ಸಿ ನೃತ್ಯ ಕಲೆಯ ವೈಭವವನ್ನು ಪರಿಚಯಿಸುವ ಐದನೇ ಆವೃತ್ತಿಯ ಮೈಸೂರು ಒಡಿಸ್ಸಿ ಉತ್ಸವ ನವೆಂಬರ್ 1ರಂದು ನಡೆಯಲಿದೆ.

ನಗರದ ರುದ್ರ ನೃತ್ಯ ಯೋಗ ಶಾಲೆ ಹಾಗೂ ಮೈಸೂರು ಒಡಿಸ್ಸಿ ಕುಟುಂಬಗಳ ಸಹಯೋಗದಲ್ಲಿ ಆದಿಚುಂಚನಗಿರಿ ರಸ್ತೆಯ ಗಾನಭಾರತಿಯ ಸಮೀಪವಿರುವ ರಮಾ ಗೋವಿಂದ ಕಲಾ ವೇದಿಕೆಯಲ್ಲಿ ಸಂಜೆ 5.45ಕ್ಕೆ ಉತ್ಸವ ಆಯೋಜಿಸಲಾಗಿದೆ.

ರಾಜ್ಯ ಹಾಗೂ ದೇಶದ ವಿವಿಧ ಭಾಗಗಳಿಂದ ಆಗಮಿಸುವ ಹೆಸರಾಂತ ಒಡಿಸ್ಸಿ ನೃತ್ಯ ಕಲಾವಿದರು ತಮ್ಮ ಕಲಾ ಪ್ರದರ್ಶನ ನೀಡಲಿದ್ದಾರೆ. ವಿದುಷಿ ಸಿಂಧು ಕಿರಣ್ ಅವರ ನೇತೃತ್ವದಲ್ಲಿ ನಡೆಯುವ ಉತ್ಸವದಲ್ಲಿ ಮೈಸೂರು, ಬೆಂಗಳೂರು, ಕೋಲ್ಕತ್ತಾ, ಭುವನೇಶ್ವರ ಹಾಗೂ ಮುಂಬೈನ ಕಲಾವಿದರು ಭಾಗವಹಿಸಲಿದ್ದಾರೆ.

ಮೈಸೂರಿನ ರುದ್ರ ನೃತ್ಯ ಯೋಗ ಶಾಲೆಯ ಸಂಸ್ಥಾಪಕಿ ಹಾಗೂ ನೃತ್ಯಗುರು ಸಿಂಧು ಕಿರಣ್, ಅವರ ಶಿಷ್ಯವೃಂದ ಸೇರಿದಂತೆ ಜ್ಯೋತಿರ್ಮಯಿ ಪಟ್ನಾಯಕ್, ಶರ್ಮಿಷ್ಟಾ ಜೆನ್ನಾ, ಪ್ರಸೂನ್ ಮೊಂಡಲ್, ಅಮೃತಾ ಮಿಶ್ರಾ, ಪ್ರಹ್ಲಾದ್ ಸಾಹೂ, ಬಸಿಷ್ಠ ಕುಮಾರ್ ಜೆನಾ, ನಮ್ರತಾ ಮೆಹ್ತಾ ಸೇರಿದಂತೆ ಹಲವು ಕಲಾವಿದರು ನೃತ್ಯ ಪ್ರದರ್ಶನ ನೀಡಲಿದ್ದಾರೆ.

ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ಗಾನ ಸಭಾ ಹಾಗೂ ಶ್ರೀ ಕೃಷ್ಣ ಸೇವಾ ಸಮಿತಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಶ್ರೀಧರ್ ರಾಜ ಅರಸ್, ಕಾರ್ಯದರ್ಶಿ ಭಾರತೀ ಅರಸ್, ಮೈಸೂರು ಯೋಗ ಒಕ್ಕೂಟದ ಕಾರ್ಯಾಧ್ಯಕ್ಷ ಡಾ. ಬಿ.ಪಿ. ಮೂರ್ತಿ, ಅರಿಯದನ ಫೌಂಡೇಶನ್‌ನ ಜ್ಯೋತಿರ್ಮಯಿ ಪಟ್ನಾಯಕ್ ಹಾಗೂ ಪತ್ರಕರ್ತ ಮತ್ತು ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವೈದ್ಯನಾಥ್ ಹೆಚ್.ಯು. ಸೇರಿದಂತೆ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನೃತ್ಯಗುರು ಸಿಂಧು ಕಿರಣ್ ಅಧ್ಯಕ್ಷತೆ ವಹಿಸಲಿದ್ದಾರೆ.

2006ರಲ್ಲಿ ಸ್ಥಾಪನೆಯಾದ ರುದ್ರ ನೃತ್ಯ ಯೋಗ ಶಾಲೆಯ ಸಂಸ್ಥಾಪಕಿ ಸಿಂಧು ಕಿರಣ್ ಅವರು ಒಡಿಸ್ಸಿ ಹಾಗೂ ಮೋಹಿನಿಯಾಟ್ಟಂ ನೃತ್ಯ ಪ್ರಕಾರಗಳಲ್ಲಿ ಪರಿಣತಿ ಹೊಂದಿದ್ದಾರೆ. ಪದ್ಮಭೂಷಣ ಪಂಡಿತ್ ಕೇಳು ಚರಣ ಮಹಾಪಾತ್ರ ಸೇರಿದಂತೆ ಹಲವು ಹಿರಿಯ ಗುರುಗಳಿಂದ ನೃತ್ಯಾಭ್ಯಾಸ ಪಡೆದಿರುವ ಅವರು, 1992ರಿಂದ ದೇಶ-ವಿದೇಶಗಳ ಪ್ರತಿಷ್ಠಿತ ವೇದಿಕೆಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಅಲ್ಲದೆ ಭಾರತ, ಯುರೋಪ್, ಮಧ್ಯಪ್ರಾಚ್ಯ ಹಾಗೂ ಆಗ್ನೇಯ ಏಷ್ಯಾದ ವಿವಿಧೆಡೆ ಒಡಿಸ್ಸಿ ನೃತ್ಯದ ಕಾರ್ಯಾಗಾರಗಳನ್ನು ನಡೆಸಿದ್ದಾರೆ.

ಮೈಸೂರಿನಲ್ಲಿ ಅಪರೂಪವಾಗಿರುವ ಒಡಿಸ್ಸಿ ನೃತ್ಯ ಪರಂಪರೆಯನ್ನು ಪರಿಚಯಿಸುವುದು ಹಾಗೂ ಕಲಾಭಿಮಾನಿಗಳಿಗೆ ಈ ಶಾಸ್ತ್ರೀಯ ನೃತ್ಯವನ್ನು ಆಸ್ವಾದಿಸುವ ಅವಕಾಶ ಕಲ್ಪಿಸುವುದು ಉತ್ಸವದ ಮುಖ್ಯ ಉದ್ದೇಶವಾಗಿದೆ.

ಇದೇ ಸಂದರ್ಭದಲ್ಲಿ ಉತ್ಸವದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಪತ್ರಿಕಾಗೋಷ್ಠಿಯಲ್ಲಿ ನೃತ್ಯಗುರು ಸಿಂಧು ಕಿರಣ್, ಇಕ್ಷು ಅನಿಲ್ ಹಾಗೂ ಅವರ ಶಿಷ್ಯೆ ಲಿವಿಯಾ ಲೆಸಿಯಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kannada Rajyotsava ಕನ್ನಡ ರಾಜ್ಯೋತ್ಸವ – ನಮ್ಮ ಹೆಮ್ಮೆಯ ಹಬ್ಬ

Kannada Rajyotsava ಪ್ರತಿಯೊಬ್ಬ ಕನ್ನಡಿಗನಿಗೂ ಕನ್ನಡ ರಾಜ್ಯೋತ್ಸವವು ಹೆಮ್ಮೆ, ಸ್ವಾಭಿಮಾನ ಮತ್ತು...

Kuvempu University ಕುವೆಂಪು ವಿವಿ ಸಂಯೋಜನೆಗೆ ಆನ್‌ಲೈನ್ ಅರ್ಜಿ ಆಹ್ವಾನ

Kuvempu University ಕುವೆಂಪು ವಿಶ್ವವಿದ್ಯಾಲಯದ ವ್ಯಾಪ್ತಿಯ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ...

Radio Shivamogga ಕನ್ನಡ ರಾಜ್ಯೋತ್ಸವಕ್ಕೆ ರೇಡಿಯೋ ಶಿವಮೊಗ್ಗ 90.8 ಎಫ್.ಎಂ.ನಿಂದ 24 ಗಂಟೆಗಳ ನಿರಂತರ ನೇರಪ್ರಸಾರ

‘ರೇಡಿಯೋ ಶಿವಮೊಗ್ಗ ೯೦.೮ಎಫ್.ಎಂ. ಹಾಗೂ ಪರಿಸರ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಕನ್ನಡ...

Breaking News ಪತಿ ಮತ್ತು ಪತಿಮನೆಯವರಿಂದ ಕಿರುಕುಳ: ಗೃಹಿಣಿ ಆತ್ಮಹತ್ಯೆ.

Breaking News ಗಂಡ ಹಾಗೂ ಗಂಡನ ಮನೆಯವರ ಕಿರುಕುಳದಿಂದ ವಿಷ ಸೇವಿಸಿ...