ಸೊರಬದಲ್ಲಿ ನಡೆದ ಜೋನಲ್ ಲೆವೆಲ್ ಸಾಂಸ್ಕೃತಿಕ ಸ್ಪರ್ಧೆ ಜೋನಲ್ ಕಲಾ ವೈಭವದಲ್ಲಿ ಕೋಣಂದೂರು ರೋಟರಿ ಕ್ಲಬ್ನ ಸದಸ್ಯರು, ಕುಟುಂಬದವರು ಹಾಗೂ ಮಕ್ಕಳು ಭಾಗವಹಿಸಿ ಉತ್ತಮ ಸಾಧನೆ ಮಾಡಿದ್ದಾರೆ.
ಸ್ಪರ್ಧೆಯಲ್ಲಿ ಕೋಣಂದೂರು ರೋಟರಿ ಕ್ಲಬ್ನ ಡಾ. ಮುಂಜುನಾಥ್ ಅವರು ಸೋಲೋ ಸಾಂಗ್ನಲ್ಲಿ ಪ್ರಥಮ ಸ್ಥಾನ ಪಡೆದರೆ, ನೃತ್ಯ ಸ್ಪರ್ಧೆಯಲ್ಲಿ ಕೊಣಂದೂರು ರೋಟರಿ ಕ್ಲಬ್ ತಂಡ ದ್ವಿತೀಯ ಸ್ಥಾನ ಹಾಗೂ ನಾಟಕ ಸ್ಪರ್ಧೆಯಲ್ಲಿ ಕ್ಲಬ್ ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ಇದಲ್ಲದೆ, ಕರಾವಳಿ ಭಾಗದ ಪ್ರಸಿದ್ಧ ಯಕ್ಷಗಾನ ಕಲೆಯ ವೇಷಭೂಷಣದೊಂದಿಗೆ ನೃತ್ಯ ಪ್ರದರ್ಶಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದರು.
ಈ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಕೋಣಂದೂರು ರೋಟರಿ ಕ್ಲಬ್ನ 50ಕ್ಕೂ ಹೆಚ್ಚು ಸದಸ್ಯರು ಹಾಗೂ ಕುಟುಂಬದವರು ಉತ್ಸಾಹದಿಂದ ಭಾಗವಹಿಸಿ ಕ್ಲಬ್ನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ವಿವಿಧ ಸ್ಪರ್ಧೆಗಳಲ್ಲಿ ಪ್ರಶಸ್ತಿಗಳನ್ನು ಪಡೆದು ಕ್ಲಬ್ಗೆ ಹೆಮ್ಮೆ ತಂದ ಎಲ್ಲ ಕಲಾವಿದರು ಹಾಗೂ ಸದಸ್ಯರನ್ನು ಕ್ಲಬ್ ಅಭಿನಂದಿಸುತ್ತದೆ.
