‘ರೇಡಿಯೋ ಶಿವಮೊಗ್ಗ ೯೦.೮ಎಫ್.ಎಂ. ಹಾಗೂ ಪರಿಸರ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ೨೪ ಗಂಟೆಗಳ ನಿರಂತರ ನೇರಪ್ರಸಾರ’
ರೇಡಿಯೋ ಶಿವಮೊಗ್ಗ ೯೦.೮ಎಫ್.ಎಂ ವತಿಯಿಂದ ಈ ಬಾರಿಯ ಕನ್ನಡ ರಾಜ್ಯೋತ್ಸವಕ್ಕೆ ವಿಶೇಷ ಕಾರ್ಯಕ್ರಮ ಆಯೋಜಿಸುತ್ತಿದ್ದು ಕನ್ನಡ ಮಾಧ್ಯಮ ಲೋಕದಲ್ಲಿ ಪ್ರಪ್ರಥಮ ಬಾರಿಗೆ ದಿನದ ೨೪ ಗಂಟೆಗಳ ನಿರಂತರ ನೇರಪ್ರಸಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದು, ಕನ್ನಡ ನಾಡು, ನುಡಿ, ಕಲೆ-ವಾಸ್ತುಶಿಲ್ಪ, ಸಾಹಿತ್ಯ ಹೀಗೆ ಕನ್ನಡದ ವಿಚಾರಗಳ ಬಗ್ಗೆ ನಿಲಯದ ಆರ್.ಜೆ ಗಳು ಮಾತನಾಡಲಿದ್ದಾರೆ. ನವಂಬರ್ ೧ ರ ಬೆಳಗ್ಗೆ ೬.೦೦ ರಿಂದ ಮರುದಿನ ಬೆಳಗ್ಗೆ ೬.೦೦ ರ ವರೆಗೆ ನಿರಂತರ ನೇರಪ್ರಸಾರ ನಡೆಯಲಿದೆ. ರಾಜ್ಯ, ರಾಷ್ಟ್ರ ಹಾಗೂ ವಿದೇಶಗಳಿಂದಲೂ ಈ ಕಾರ್ಯಕ್ರಮಕ್ಕೆ ಕೇಳುಗರು ಕಾಲ್ ಮಾಡಿ ರಾಜ್ಯೋತ್ಸವದ ಕುರಿತು ಮಾತನಾಡಲಿದ್ದಾರೆ.
೨೪ ಗಂಟೆಗಳ ಕಾಲ ಚೇತನ್ ಕುಮಾರ್ ಸಿ ಇವರು ನೇರಪ್ರಸಾರದಲ್ಲಿ ಇರಲಿದ್ದಾರೆ ಇವರ ಜೊತೆಗೆ ಬೆಳಗ್ಗೆ ೬ ರಿಂದ ೯ರ ವರೆಗೆ ಆರ್.ಜೆ.ಶ್ವೇತಾ ಇವರು ಕದಂಬ ಸಾಮ್ರಾಜ್ಯದ ಜೊತೆಗೆ ಕನ್ನಡ ನಾಡಿನ ಆರಂಭದ ಸಾಹಿತ್ಯಗಳ ಬಗ್ಗೆ ತಿಳಿಸಲಿದ್ದಾರೆ. ೯ ರಿಂದ ೧೨ ರ ವರೆಗೆ ಆರ್.ಜೆ.ಮಹಾಲಕ್ಷಿಯವರು ಗಂಗ ಸಾಮ್ರಾಜ್ಯದ ಬಗ್ಗೆ ಮತ್ತು ಕನ್ನಡ ನಾಡಿನ ಸಾಹಿತಿಗಳು, ಕಲಾ ಪ್ರಪಂಚಕ್ಕೆ ಕನ್ನಡದ ಕೊಡುಗೆಯ ಬಗ್ಗೆ ತಿಳಿಸಲಿದ್ದಾರೆ. ೧೨ ರಿಂದ ಮಧ್ಯಾಹ್ನ ೩ ರ ವರೆಗೆ ಆರ್.ಜೆ. ಪವಿತ್ರ ದಿನೇಶ್ ರವರು ಬಾದಾಮಿಯ ಚಾಲುಕ್ಯರು, ರಾಷ್ಟ್ರಕೂಟರ ಸಾಮ್ರಾಜ್ಯದ ಬಗ್ಗೆ ಮತ್ತು ವಚನ ಸಾಹಿತ್ಯ, ದಾಸ ಸಾಹಿತ್ಯದ ಬಗ್ಗೆ ತಿಳಿಸಲಿದ್ದಾರೆ. ಮಧ್ಯಾಹ್ನ ೩ ರಿಂದ ಸಂಜೆ ೬ ರ ವರೆಗೆ ಆರ್.ಜೆ. ಅರ್ಪಿತ ಅವರು ವಿಜಯನಗರ ಸಾಮ್ರಾಜ್ಯದ ಬಗ್ಗೆ ಮತ್ತು ಕನ್ನಡ ನಾಡಿನ ಪರಿಸರದ ಬಗ್ಗೆ ಹಾಗೂ ಕನ್ನಡ ಚಲನಚಿತ್ರಗಳ ಬಗ್ಗೆ ಮಾತನಾಡಲಿದ್ದಾರೆ. ಸಂಜೆ ೬ ರಿಂದ ರಾತ್ರಿ ೯ ರ ವರೆಗೆ ಆರ್.ಜೆ. ರಕ್ಷಿತಾರವರು ಹೊಯ್ಸಳರ ಸಾಮ್ರಾಜ್ಯದ ಬಗ್ಗೆ ಮತ್ತು ಕರ್ನಾಟಕದ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಮಾತನಾಡಲಿದ್ದಾರೆ. ರಾತ್ರಿ ೯ ರಿಂದ ೧೨ ರ ವರೆಗೆ ಆರ್.ಜೆ. ಶ್ರೀಧರ್ ರವರು ಮೈಸೂರು ಒಡೆಯರ ಬಗ್ಗೆ ಮತ್ತು ಕರ್ನಾಟಕ ಸರ್ಕಾರದ ವಿವಿಧ ಜನಪರ ಸೇವೆಗಳ ಬಗ್ಗೆ ತಿಳಿಸಿಕೊಡಲಿದ್ದಾರೆ. ರಾತ್ರಿ ೧೨ ರಿಂದ ಬೆಳಗ್ಗೆ ೬ ರ ವರೆಗೆ ಆರ್.ಜೆ.ಚೇತನ್ ಕುಮಾರ್ ರವರು ಕನ್ನಡ ರಂಗಭೂಮಿ, ಸಿನಿಮಾ, ಕನ್ನಡದ ಸಾಧಕರು, ಕನ್ನಡ ಕಲೆ-ವಾಸ್ತುಶಿಲ್ಪ, ಕ್ರೀಡೆ, ಸಮೂಹ ಮಾಧ್ಯಮ ಹೀಗೆ ಹಲವು ವಿಷಯಗಳ ಬಗ್ಗೆ ಮಾತನಾಡಲಿದ್ದಾರೆ. ಮಂಜುನಾಥ್ ಆರ್. ಮತ್ತು ಪರಿಸರ ಅಧ್ಯಯನ ಕೇಂದ್ರದ ಸಂಯೋಜಕರಾದ ದಿನೇಶ್ ಹೊಸನಗರ ರವರು ಕೂಡ, ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಇಡೀ ದಿನದ ಕಾರ್ಯಕ್ರಮದಲ್ಲಿ ಕನ್ನಡದ ಬಗೆಗಿನ ವಿಶೇಷ ಮಾಹಿತಿಗಳು, ಅಚ್ಚರಿಯ ಸಂಗತಿಗಳನ್ನು ತಿಳಿಸಲಿದ್ದಾರೆ. ಕನ್ನಡದ ಬಗೆಗೆ ಪ್ರತೀ ೧ ಗಂಟೆಗೆ ಕೇಳುವ ಪ್ರಶ್ನೆಗೆ ಉತ್ತರ ನೀಡಿ ಆಕರ್ಷಕ ಬಹುಮಾನ ಗೆಲ್ಲಬಹುದು. ದಿನದ ಎಲ್ಲಾ ಪ್ರಶ್ನೆಗಳಿಗೂ ಹೆಚ್ಚು ಉತ್ತರ ನೀಡುವವರಿಗೆ ವಿಶೇಷ ಬಹುಮಾನ ಸಿಗಲಿದೆ.
Radio Shivamogga ಈ ಎಲ್ಲಾ ಕಾರ್ಯಕ್ರಮಗಳಿಗಳು, ನಿಲಯದ ನಿರ್ದೇಶಕರಾದ ಜನಾರ್ಧನ್.ಜಿ.ಎಲ್, ಕರ್ನಾಟಕ ರಾಜ್ಯ ಸಮುದಾಯ ಬಾನುಲಿಗಳ ಸಂಘದ ರಾಜ್ಯಾಧ್ಯಕ್ಷ ಗುರುಪ್ರಸಾದ್, ನಿಲಯದ ಕಾರ್ಯಕ್ರಮ ಅಧಿಕಾರಿ ಮಂಜುನಾಥ್, ಸಂಯೋಜಕರಾದ ದಿನೇಶ್ ಹೊಸನಗರ, ಪತ್ರಕರ್ತ ಹಾಲಸ್ವಾಮಿ.ಆರ್.ಎಸ್ ಇವರ ಮಾರ್ಗದರ್ಶನದಲ್ಲಿ ಮೂಡಿಬರಲಿದೆ.
ಈ ಕಾರ್ಯಕ್ರಮದಲ್ಲಿ, 96860 96279 ಸಂಖ್ಯೆಗೆ ಕರೆ ಮಾಡಿ, ಹೆಚ್ಚಿನ ಸಂಖ್ಯೆಯ ಕೇಳುಗರು ಭಾಗವಹಿಸುವಂತೆ, ನಿಲಯದ ನಿರ್ದೇಶಕರಾದ ಜನಾರ್ಧನ್.ಜಿ.ಎಲ್. ರವರು ಕೋರಿದ್ದಾರೆ.
ರೇಡಿಯೋ ಶಿವಮೊಗ್ಗವು ಸಾಮಾನ್ಯ ರೇಡಿಯೋಗಳ ಜೊತೆಗೆ, ಮೊಬೈಲ್ನಲ್ಲಿರುವ ಇನ್-ಬಿಲ್ಟ್ ಎಫ್.ಎಂ. ಗಳಲ್ಲಿ ಪ್ರಸಾರವಾಗಲಿದೆ. ಇದರ ಜೊತೆಗೆ ಸ್ವಂತದ್ದೇ ಆಪ್ ಸಹಾ ಹೊಂದಿದ್ದು, ಅದನ್ನು ಗೂಗಲ್ ಪ್ಲೇಸ್ಟೋರ್ನಲ್ಲಿ ಡೌನ್ಲೋಡ್ ಮಾಡಬಹುದಾಗಿದೆ. ಅದರ ಕೊಂಡಿ ಹೀಗಿದೆ:
https://play.google.com/store/apps/details?id=com.atclabs.radioshivmogga
ಹೆಚ್ಚಿನ ಮಾಹಿತಿಗೆ 72591 76279 ಸಂಪರ್ಕಿಸಬಹುದು.
