Sunday, October 25, 2026
Sunday, October 25, 2026

Hartalu Halappa ರಾಜ್ಯದಲ್ಲಿ ವಿದ್ಯುತ್ ಕೊರತೆ: ಸರ್ಕಾರದ ಅಸಮರ್ಥತೆ- ಮಾಜಿ ಸಚಿವ ಹರತಾಳು ಹಾಲಪ್ಪ ಗಂಭೀರ ಪ್ರಶ್ನೆ.

Date:

Hartalu Halappa ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ತೀವ್ರವಾಗಿದ್ದು, ರೈತರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಹರತಾಳು ಹಾಲಪ್ಪ ಆರೋಪಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಮೆಸ್ಕಾಂ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ, ಖಾಲಿ ಹುದ್ದೆಗಳು ಹಾಗೂ ವರ್ಗಾವಣೆಯಲ್ಲಿ ಹಣದ ವ್ಯವಹಾರ ನಡೆಯುತ್ತಿದೆ ಎಂದು ಆರೋಪಿಸಿ, ರಾಜ್ಯ ಸರ್ಕಾರ ಮತ್ತು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಾಗರ, ಹೊಸನಗರ ಹಾಗೂ ಶಿವಮೊಗ್ಗ ಗ್ರಾಮಾಂತರ ಭಾಗಗಳಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಏಳು ಗಂಟೆ ವಿದ್ಯುತ್ ನೀಡುವುದಾಗಿ ಹೇಳಿ, ಹಗಲು ಮೂರು ಗಂಟೆ ಹಾಗೂ ರಾತ್ರಿ ಮೂರು ಗಂಟೆ ಮಾತ್ರ ವಿದ್ಯುತ್ ನೀಡಲಾಗುತ್ತಿದೆ. ಇದರಿಂದ ಅಡಿಕೆ ತೋಟಗಳಿಗೆ ನೀರು ಹಾಯಿಸಲು ಸಾಧ್ಯವಾಗದೆ ಬೆಳೆಗಳು ಒಣಗುತ್ತಿವೆ ಎಂದು ಹರತಾಳು ಹಾಲಪ್ಪ ದೂರಿದ್ದಾರೆ.

ಮೆಸ್ಕಾಂ ಇಲಾಖೆಯಲ್ಲಿ ಶೇಕಡಾ 50ರಷ್ಟು ಲೈನ್‌ಮ್ಯಾನ್‌ಗಳ ಕೊರತೆಯಿದೆ. ರಿಪ್ಪನ್‌ಪೇಟೆಯಲ್ಲಿ 28 ಮಂದಿ ಇರಬೇಕಾದ ಜಾಗದಲ್ಲಿ ಕೇವಲ 17 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಿಕಾರಿಪುರ ಮತ್ತು ಸಾಗರ ವಿಭಾಗಗಳಲ್ಲಿ ಎಇಇಗಳಿಲ್ಲ. ಈ ಸಮಸ್ಯೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ಗಮನಹರಿಸುತ್ತಿಲ್ಲ ಎಂದು ಟೀಕಿಸಿದ್ದಾರೆ.

ಇಂಧನ ಇಲಾಖೆಯಲ್ಲಿ ಅಧಿಕಾರಿಗಳ ಹುದ್ದೆ ಹಾಗೂ ವರ್ಗಾವಣೆಗೆ ಹಣ ಪಡೆಯುವ ವ್ಯವಸ್ಥೆ ಆರಂಭವಾಗಿದ್ದೇ ಡಿ.ಕೆ. ಶಿವಕುಮಾರ್ ಇಂಧನ ಸಚಿವರಾಗಿದ್ದ ಅವಧಿಯಲ್ಲಿ ಎಂದು ಆರೋಪಿಸಿದ್ದಾರೆ. ವಿದ್ಯುತ್ ಹೆಚ್ಚುವರಿಯಾಗಿ ಲಭ್ಯವಿದೆ ಎಂದು ಹೇಳುತ್ತಿದ್ದ ಸರ್ಕಾರ, ಈಗ ರೈತರಿಗೆ ವಿದ್ಯುತ್ ನೀಡಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

Hartalu Halappa ಇದೇ ವೇಳೆ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ವಿರುದ್ಧವೂ ವಾಗ್ದಾಳಿ ನಡೆಸಿದ ಹಾಲಪ್ಪ, ಸಾಗರ ದಸರಾ ಸಂದರ್ಭದಲ್ಲಿ ಅಂಬು ಕಡಿಯುವ ಸಂಪ್ರದಾಯಕ್ಕೆ ತಹಸೀಲ್ದಾರ್‌ಗೆ ಅವಕಾಶ ನೀಡದ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಶಾಸಕರಿಗೆ ಸ್ಥಳೀಯ ಸಂಪ್ರದಾಯಗಳ ಅರಿವಿಲ್ಲ ಎಂದು ಟೀಕಿಸಿದ್ದಾರೆ.

ಶಾಲಾ ಅಭಿವೃದ್ಧಿ ಸಮಿತಿಯ ಹಣವನ್ನು ಪಾರ್ಟಿಗೆ ಬಳಸಲಾಗಿದೆ ಎಂದೂ ಆರೋಪಿಸಿರುವ ಅವರು, ಸಾಗರ ನಗರಸಭೆಯಲ್ಲಿ ಕಮಿಷನರ್ ಹಾಗೂ ತಾಲೂಕು ಪಂಚಾಯಿತಿಯಲ್ಲಿ ಇಒ ಇಲ್ಲದಿರುವುದರ ಜೊತೆಗೆ ಎಂಟು ಸಬ್‌ಇನ್ಸ್‌ಪೆಕ್ಟರ್‌ಗಳ ಹುದ್ದೆಗಳು ಖಾಲಿಯಿವೆ ಎಂದು ಹೇಳಿದ್ದಾರೆ.

ಆನಂದಪುರದ ಕಲ್ಲು ಕ್ವಾರಿ ಹಾಗೂ ಹೊಸನಗರದ ಮರಳು ವ್ಯವಹಾರದ ಕಾರಣಕ್ಕೆ ಪೊಲೀಸ್ ಅಧಿಕಾರಿಗಳು ಈ ಭಾಗಕ್ಕೆ ಬರಲು ಪೈಪೋಟಿ ನಡೆಸುತ್ತಾರೆ. ಹಣ ನೀಡಿಯೇ ವರ್ಗಾವಣೆ ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದ ಹಾಲಪ್ಪ, ತಮ್ಮ ಅವಧಿಯಲ್ಲಿ ವರ್ಗಾವಣೆಗೆ ಹಣ ಪಡೆದಿಲ್ಲ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ವಿಚಾರವಾಗಿ ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ತಡೆಯಾಜ್ಞೆ ಪಡೆಯಲಾಗುತ್ತಿದೆ ಎಂದು ಹೇಳಿದ ಅವರು, ಪಂಪ್ಡ್ ಸ್ಟೋರೇಜ್ ಯೋಜನೆಗೆ ವಿದ್ಯುತ್ ಲಭ್ಯವಿದೆ ಎಂದು ಹೇಳುತ್ತಿದ್ದ ಸರ್ಕಾರದ ಬಳಿ ಈಗ ವಿದ್ಯುತ್ ಎಲ್ಲಿಗೆ ಹೋಯಿತು ಎಂದು ಪ್ರಶ್ನಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ಪತಿ ಮತ್ತು ಪತಿಮನೆಯವರಿಂದ ಕಿರುಕುಳ: ಗೃಹಿಣಿ ಆತ್ಮಹತ್ಯೆ.

Breaking News ಗಂಡ ಹಾಗೂ ಗಂಡನ ಮನೆಯವರ ಕಿರುಕುಳದಿಂದ ವಿಷ ಸೇವಿಸಿ...

Shimoga Pes College ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಶೋಧನಾ ಪ್ರಬಂಧ ಮಂಡನೆ: ಎಂಬಿಎ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ.

Shimoga Pes College ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ ಪಿಇಎಸ್‌ಐಟಿ‌ಎಂ...

Rain In Shivamogga ಮಲೆನಾಡಿನ ಕಡೆ ಮಳೆ : ಹವಾಮಾನ ಸಾರಾಂಶ

Rain In Shivamogga ರಾಜ್ಯದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಹಲವು...