Saturday, October 24, 2026
Saturday, October 24, 2026

ಹೊಳೆಹೊನ್ನೂರಿನಲ್ಲಿ ‘ಕೃತಕ ಬುದ್ಧಿಮತ್ತೆ ಮತ್ತು ಸಮಾಜ’ ಕುರಿತು ಅಂತರರಾಷ್ಟ್ರೀಯ ಸಮ್ಮೇಳನ

Date:

ಹೊಳೆಹೊನ್ನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶದ (ಐಕ್ಯುಎಸಿ) ವತಿಯಿಂದ “ಕೃತಕ ಬುದ್ಧಿಮತ್ತೆ ಮತ್ತು ಸಮಾಜ: ಅವಕಾಶಗಳು, ಸವಾಲುಗಳು ಮತ್ತು ಜವಾಬ್ದಾರಿಯುತ ನಾವೀನ್ಯತೆ” ಎಂಬ ವಿಷಯದ ಕುರಿತು ಹೊಳೆಹೊನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಕ್ಟೋಬರ್ 28 ರಂದು ಒಂದು ದಿನದ ಅಂತರರಾಷ್ಟ್ರೀಯ ಬಹುಶಿಸ್ತೀಯ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ.
ಸ್ವಯಂ ಹಣಕಾಸು ಮಾದರಿಯಲ್ಲಿ ನಡೆಯಲಿರುವ ಈ ಸಮ್ಮೇಳನದಲ್ಲಿ ದೇಶ-ವಿದೇಶಗಳ ವಿದ್ವಾಂಸರು, ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ಉದ್ಯಮ ತಜ್ಞರು ಭಾಗವಹಿಸಲಿದ್ದಾರೆ.
ಶಾಸಕರು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ಶಾರದ ಪೂೂರ್ಯ ನಾಯ್ಕ್ ಕಾರ್ಯಕ್ರಮ ಉದ್ಘಾಟಿಸುವರು.
ಡಾ. ಪ್ರವೀಣ್ ಜಿ ಸಪ್ತರ್ಷಿ , ಸಂದರ್ಶಕ ಪ್ರಾಧ್ಯಾಪಕರು, ಸಾಲ್ಸ್‌ಬರಿ ವಿಶ್ವವಿದ್ಯಾಲಯ, ಅಮೆರಿಕ ಇವರು ಮುಖ್ಯ ಭಾಷಣ ಮಾಡುವರು.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ
ಕುಲಪತಿಗಳಾದ ಡಾ. ಎಂ. ವಿ. ಧನಂಜಯ , ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ. ಕೇಶವ ಹೆಚ್, ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕ
ಡಾ. ಬಸವರಾಜ್ ಎನ್. ಜಗದಲೆ ಮತ್ತು ಯುಎಸ್ಎ, ಕಮ್ವಾಲ್ಟ್ ಹಿರಿಯ ಆರ್ಕಿಟೆಕ್ಟ್ ಪ್ರಶಾಂತ್ ಜಯರಾಂ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಹೊಳೆಹೊನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ
ಡಾ. ಪ್ರತಿಭಾ ಕೆ. ಆರ್. ಅಧ್ಯಕ್ಷತೆ ವಹಿಸುವರು.
ತಾಂತ್ರಿಕ ಗೋಷ್ಠಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳು:
ಪ್ರೊ. ಎ. ಜಿ. ಅಮರಸಿಂಘೆ, ಹಿರಿಯ ಉಪನ್ಯಾಸಕರು, ಕೆಲನಿಯಾ ವಿಶ್ವವಿದ್ಯಾಲಯ, ಶ್ರೀಲಂಕಾ ಇವರು “ಕೃತಕ ಬುದ್ಧಿಮತ್ತೆ ಮತ್ತು ಸಮಾಜದ ಭವಿಷ್ಯ” ಕುರಿತು ಮಾತನಾಡಲಿದ್ದಾರೆ.
ಡಾ. ಶಿಲುಜಾಸ್ ಎಂ, ಸಹ ಪ್ರಾಧ್ಯಾಪಕರು, ಫಾರೂಕ್ ಕಾಲೇಜು, ಕೇರಳ ಇವರು “ಕೃತಕ ಬುದ್ಧಿಮತ್ತೆ ಮತ್ತು ಸಾಮಾಜಿಕ ಜವಾಬ್ದಾರಿ” ಕುರಿತು ಉಪನ್ಯಾಸ ನೀಡಲಿದ್ದಾರೆ.
ಇದಲ್ಲದೆ, ಪ್ರತಿನಿಧಿಗಳಿಂದ ಪ್ರಬಂಧ ಮಂಡನೆ ಹಾಗೂ ಸಮಾರೋಪ ಸಮಾರಂಭ ಜರುಗಲಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

L.B. College Sagara ಸಾಗರದ ಎಲ್ ಬಿ ಕಾಲೇಜಿನಲ್ಲಿ ರಕ್ತದಾನ ಮತ್ತು ನೇತ್ರ,ಆರೋಗ್ಯ ತಪಾಸಣ ಶಿಬಿರ

L.B. College Sagara ಸಾಗರದ ಎಲ್.ಬಿ. ಕಾಲೇಜಿನಲ್ಲಿ ರಕ್ತದಾನ, ನೇತ್ರ ತಪಾಸಣೆ...

S. N. Channabasappa ಕಿತ್ತೂರು ರಾಣಿ ಚೆನ್ನಮ್ಮನ ಸ್ವಾಭಿಮಾನ,ಶೌರ್ಯಗಳು ನಿತ್ಯ ಪ್ರೇರಣದಾಯಕ- ಶಾಸಕ ಚನ್ನಬಸಪ್ಪ

S. N. Channabasappa "ಮಾತೃಭೂಮಿಯ ರಕ್ಷಣೆಗಾಗಿ ಬ್ರಿಟಿಷ್ ಆಡಳಿತದ ವಿರುದ್ಧ ಕೆಚ್ಚೆದೆಯಿಂದ...

B.Y. Raghavendra ಭಕ್ತಿ,ಜ್ಞಾನ ಮತ್ತು ಧರ್ಮನಿಷ್ಠೆಗಳಿಗೆ ಶ್ರೀಮಧ್ವಾಚಾರ್ಯರು ಒತ್ತು ನೀಡಿದ್ದರು- ಬಿ.ವೈ.ರಾಘವೇಂದ್ರ

ಜಗದ್ಗುರು ಶ್ರೀ ಮಧ್ವಾಚಾರ್ಯರು ಭಕ್ತಿ, ಜ್ಞಾನ ಮತ್ತು ಧರ್ಮನಿಷ್ಠೆಗೆ ವಿಶೇಷ ಮಹತ್ವ...

K. S. Eshwarappa ಜೀವ ಬೆದರಿಕೆ ಕರೆ: ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ದೂರು ದಾಖಲು

K. S. Eshwarappa ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರಿಗೆ ಜೀವ...