Wednesday, October 21, 2026
Wednesday, October 21, 2026

ಅಲ್ಲಮ ಪ್ರಭು ಮೈದಾನದಲ್ಲಿ ದಸರಾ ಅದ್ಧೂರಿ ಆಚರಣೆ, ಶಾಸಕ ಚೆನ್ನಿ ಮೆಚ್ಚುಗೆ

Date:

​ಶಿವಮೊಗ್ಗ ಮಹಾನಗರ ಪಾಲಿಕೆಯ ವತಿಯಿಂದ ವೈಭವೋಪೇತವಾಗಿ ಜರುಗುತ್ತಿರುವ ‘ಶಿವಮೊಗ್ಗ ನಾಡಹಬ್ಬ ದಸರಾ – 2026’ ಮಹೋತ್ಸವದ ಅಂಗವಾಗಿ, ನಗರದ ಅಲ್ಲಮಪ್ರಭು ಮೈದಾನದಲ್ಲಿ (ಫ್ರೀಡಂ ಪಾರ್ಕ್) ನಿನ್ನೆ ಸಂಜೆ ಹಮ್ಮಿಕೊಳ್ಳಲಾಗಿದ್ದ ಅದ್ಧೂರಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಗೌರವಪೂರ್ವಕವಾಗಿ ಪಾಲ್ಗೊಳ್ಳಲಾಯಿತು.

​ಈ ಸುಸಂದರ್ಭದಲ್ಲಿ, ನಮ್ಮ ಶಿವಮೊಗ್ಗ ನಗರದ 100 ಪ್ರತಿಭಾವಂತ ಕಲಾವಿದರು ಸತತ 2 ಗಂಟೆಗಳ ಕಾಲ ವೇದಿಕೆಯಲ್ಲಿ ಪ್ರಸ್ತುತಪಡಿಸಿದ ನಯನಮನೋಹರ ‘ನಾಟ್ಯ ವೈಭವ’ ಹಾಗೂ ಕರ್ನಾಟಕದ ವಿವಿಧ ಮೂಲೆಗಳಿಂದ ಆಗಮಿಸಿದ್ದ ಖ್ಯಾತ ಕಲಾವಿದರ ಕಲಾತಂಡಗಳು ನಡೆಸಿಕೊಟ್ಟ ವರ್ಣರಂಜಿತ ‘ಜಾನಪದ ವೈಭವ’ ಕಲಾಪ್ರದರ್ಶನಗಳು ನೆರೆದಿದ್ದ ಸಹಸ್ರಾರು ಕಲಾಪ್ರೇಮಿಗಳ ಕಣ್ಮನ ಸೆಳೆದು, ಮನಸ್ಸಿಗೆ ಅಪಾರ ಆನಂದ ಮತ್ತು ಧನ್ಯತೆಯನ್ನು ನೀಡಿದವು.

​ನಮ್ಮ ಸ್ಥಳೀಯ ಕಲಾ ಪ್ರತಿಭೆಗಳ ಪರಿಶ್ರಮ ಹಾಗೂ ರಾಜ್ಯದ ಸಮಗ್ರ ಜಾನಪದ ಸೊಗಡನ್ನು ಒಂದೇ ವೇದಿಕೆಯಲ್ಲಿ ಅದ್ಭುತವಾಗಿ ಅನಾವರಣಗೊಳಿಸಿದ ಸಮಸ್ತ ಕಲಾವಿದರಿಗೆ, ಗುರುಗಳಿಗೆ ಹಾಗೂ ಸಾಂಸ್ಕೃತಿಕ ತಂಡಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.

ಕಾರ್ಯಕ್ರಮದಲ್ಲಿ ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿಎಸ್ ಯಡಿಯೂರಪ್ಪನವರು, ಸಂಸದರಾದ ಶ್ರೀ ಬಿ.ವೈ ರಾಘವೇಂದ್ರ, ಖ್ಯಾತ ಚಲನಚಿತ್ರ ನಟರಾದ ಶ್ರೀ ಪೃಥ್ವಿ ಅಂಬಾರ್, ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಜಗದೀಶ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಭಕ್ತಿ,ಜ್ಞಾನ ಮತ್ತು ಧರ್ಮನಿಷ್ಠೆಗಳಿಗೆ ಶ್ರೀಮಧ್ವಾಚಾರ್ಯರು ಒತ್ತು ನೀಡಿದ್ದರು- ಬಿ.ವೈ.ರಾಘವೇಂದ್ರ

ಜಗದ್ಗುರು ಶ್ರೀ ಮಧ್ವಾಚಾರ್ಯರು ಭಕ್ತಿ, ಜ್ಞಾನ ಮತ್ತು ಧರ್ಮನಿಷ್ಠೆಗೆ ವಿಶೇಷ ಮಹತ್ವ...

K. S. Eshwarappa ಜೀವ ಬೆದರಿಕೆ ಕರೆ: ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ದೂರು ದಾಖಲು

K. S. Eshwarappa ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರಿಗೆ ಜೀವ...

Klive Special Article ಶರನ್ನರಾತ್ರಿ…-೯.ಸಿದ್ಧಿಧಾತ್ರಿ ದೇವಿ ಆರಾಧನೆ. ಲೇ: ಜಯಭೀಮ ಜೊಯ್ಸ್. ಶಿವಮೊಗ್ಗ

Klive Special Article "ಸಿದ್ಧಗಂಧರ್ವ ಯಕ್ಷಾದ್ಯೈಃ ಅಸುರೈರಮರೈರಪಿ/ಸೇವ್ಯಮಾನಾ ಸದಾ ಭೂಯಾತ್ ಸಿದ್ಧಿದಾ...