ಕರ್ನಾಟಕ ಹೈಕೋರ್ಟ್ ಪೀಠವನ್ನು ಶಿವಮೊಗ್ಗದಲ್ಲಿ ಸ್ಥಾಪಿಸಬೇಕೆಂಬ ವಕೀಲರ ನ್ಯಾಯಯುತ ಬೇಡಿಕೆಗೆ ಕರುನಾಡು ಸಂರಕ್ಷಣಾ ವೇದಿಕೆ ತನ್ನ ಬೆಂಬಲ ನೀಡಲಿದೆ ಎಂದು ಜಿಲ್ಲಾ ಅಧ್ಯಕ್ಷ ಶಿವಮೂರ್ತಿ ತಿಳಿಸಿದರು.
ಅವರು ಇಂದು ನಗರದ ವಕೀಲರ ಭವನದ ಸಮೀಪ ಶಿವಮೊಗ್ಗ ವಕೀಲರ ಸಂಘದ ವತಿಯಿಂದ ಹೈಕೋರ್ಟ್ ಪೀಠ ಸ್ಥಾಪನೆಗೆ ಒತ್ತಾಯಿಸಿ ನಡೆಯುತ್ತಿರುವ ಎರಡನೇ ಹಂತದ ಧರಣಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಿವಮೊಗ್ಗದಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಿದರೆ ಈ ಭಾಗದ ಜನರಿಗೆ ನ್ಯಾಯದಾನ ವ್ಯವಸ್ಥೆ ಮತ್ತಷ್ಟು ಸುಲಭವಾಗಿ ತಲುಪಬೇಕು ಎಂಬ ದೃಷ್ಟಿಯಿಂದ ಶಿವಮೊಗ್ಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾಗುವುದು ಅಗತ್ಯವಾಗಿದೆ ಎಂದರು.
ಧರಣಿಯಲ್ಲಿ ಕರುನಾಡು ಸಂರಕ್ಷಣಾ ವೇದಿಕೆಯ ಶ್ರೀಧರ್, ಸತೀಶ್, ಓಂಕಾರಪ್ಪ, ಉಮೇಶ್, ರಾಜು, ಲಾರೆನ್ಸ್, ಡಿಸೋಜ ಹಾಗೂ ಕಾರ್ಯಕರ್ತರು ಹಾಜರಿದ್ದರು.
