ಶಿವಮೊಗ್ಗ ನಗರದ ಹಿರಿಯ ಅಡಿಕೆ ಮಂಡಿ ವರ್ತಕರು ಹಾಗೂ ಸಮಾಜಮುಖಿಯಾಗಿದ್ದ ಶ್ರೀಧರ್ ಬಿ.ಎಸ್. (75) ಅವರು ಹೃದಯಾಘಾತದಿಂದ ಇಂದು ನಿಧನರಾದರು.
ಮೃತರು ಪತ್ನಿ ಭಾರತಿ ಶ್ರೀಧರ್, ಪುತ್ರ ಸಹದೇವ್ ಹಾಗೂ ಪುತ್ರಿ ಶ್ರಾವ್ಯ ಅವರನ್ನು ಅಗಲಿದ್ದಾರೆ.
ಶ್ರೀಧರ್ ಅವರು ಸಿಟಿ ಕ್ಲಬ್ ಮತ್ತು ಕಂಟ್ರಿ ಕ್ಲಬ್ನ ಸದಸ್ಯರಾಗಿ ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಅಡಿಕೆ ಮಂಡಿ ವರ್ತಕರಾಗಿ ಗುರುತಿಸಿಕೊಂಡಿದ್ದ ಅವರು, ಸಮಾಜಮುಖಿ ಕಾರ್ಯಗಳಲ್ಲಿಯೂ ಸಕ್ರಿಯರಾಗಿದ್ದರು.
ಅವರ ನಿಧನಕ್ಕೆ ಸಿಟಿ ಕ್ಲಬ್ ಹಾಗೂ ಕಂಟ್ರಿ ಕ್ಲಬ್ನ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸದಸ್ಯರು ಸಂತಾಪ ಸೂಚಿಸಿ, ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಅವರ ಅಂತ್ಯಕ್ರಿಯೆ ಇಂದು ರೋಟರಿ ಚಿತಾಗಾರದಲ್ಲಿ ನೆರವೇರಿತು.
