ದೇಶದ ವಿವಿಧ ಬ್ಯಾಂಕಿಂಗ್, ಎಸ್ಎಸ್ಸಿ ಹಾಗೂ ಆರ್ಆರ್ಬಿ ಹುದ್ದೆಗಳ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ಆಕಾಂಕ್ಷಿಗಳಿಗೆ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಅರ್ಹ ಅಭ್ಯರ್ಥಿಗಳಿಗೆ 45 ದಿನಗಳ ಕಾಲ ವಿಶೇಷ ತರಬೇತಿಯನ್ನು ನೀಡಲು ನಿರ್ಧರಿಸಲಾಗಿದೆ.
ತರಬೇತಿ ನೊಂದಾವಣೆಗೆ 17.10.2026 ಕೊನೆಯ ದಿನಾಂಕವಾಗಿದ್ದು ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 4:00 ಗಂಟೆಯವರೆಗೆ ನೋಂದಾಯಿಸಿಕೊಳ್ಳಬೇಕು.
ಆಸಕ್ತರು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ಹಾಗೂ ಹೆಚ್ಚಿನ ಮಾಹಿತಿಗಾಗಿ 0821-2515944 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ. ಎಂ.ಪಿ. ಸದಾಶಿವ ತಿಳಿಸಿದ್ದಾರೆ
ಆರ್ಆರ್ಬಿ ಪರೀಕ್ಷೆಗಳಿಗೆ 45 ದಿನಗಳ ಉಚಿತ ವಿಶೇಷ ತರಬೇತಿ
Date:
