ದೇಶದಲ್ಲಿಯೇ ದಸರಾವನ್ನು ನಾಡ ಹಬ್ಬವೆಂದು ರಾಜ್ಯದಲ್ಲಿ ಆಚರಿಸುವುದು ವಿಶೇಷವಾಗಿದೆ ಎಂದು ಸೊರಬ ರೋಟರಿ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಡಾ. ಎಚ್.ಇ. ಜ್ಞಾನೇಶ್ ಹೇಳಿದರು.
ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದ ಆವರಣದಲ್ಲಿ ದಸರಾ ಉತ್ಸವ ಸಮಿತಿ ವತಿಯಿಂದ ತಾಲೂಕು ಆಡಳಿತ ಹಾಗೂ ಪುರಸಭೆ ಸಹಕಾರದೊಂದಿಗೆ ಮಂಗಳವಾರ ಹಮ್ಮಿಕೊಂಡ ೧೮ನೇ ವರ್ಷದ ಸಾರ್ವಜನಿಕ ದಸರಾ ಉತ್ಸವದ ಮೂರನೇ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜಾಡಳಿತದ ಕಾಲದಲ್ಲಿ ರಾಜರು ಸಹ ಸುಖವಾಗಿರಲಿಲ್ಲ. ಪ್ರಸ್ತುತ ದಿನಗಳಲ್ಲಿ ಸಾಮಾನ್ಯ ವ್ಯಕ್ತಿಯೂ ಸಹ ಸೌಖ್ಯವಾಗಿರಲು ಅವಕಾಶವಿದೆ. ಸಾರಿಗೆ ಸಂಪರ್ಕ ಸೇರಿದಂತೆ ಮೂಲ ಸೌಲಭ್ಯಗಳು ದೊರೆಯುತ್ತಿವೆ. ಆಡಳಿತದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಆದರೆ, ನಾಡಿನ ಇತಿಹಾಸ, ಪರಂಪರೆಯ ಉಳಿವಿನ ಅಗತ್ಯವಿದೆ. ಹಬ್ಬಗಳ ಆಚರಣೆಯ ಹಿಂದೆ ಎಲ್ಲರೂ ಒಗ್ಗೂಡುವ ಜೊತೆಗೆ ವೈಜ್ಞಾನಿಕವಾದ ಕಾರಣವೂ ಇದೆ ಎಂದು ಅಭಿಪ್ರಾಯಿಸಿದ ಅವರು, ಪಟ್ಟಣದಲ್ಲಿ ದಸರಾ ಉತ್ಸವವು ಅತ್ಯಂತ ವಿಜೃಂಭಣೆಯಿAದ ಜರುಗುತ್ತಿದೆ. ಸೊರಬ ದಸರಾ ತಂಡದವರು ದಿನ ನಿತ್ಯದ ಕಾರ್ಯಕ್ರಮವನ್ನು ಸಾಮಾಜಿಕ ಜಾಲತಾಣ ಬಳಸಿಕೊಂಡು ಅಂಗೈಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪಟ್ಟಣದಲ್ಲಿಯೂ ಅಂಬಾರಿ ಮೆರವಣಿಗೆ ನಡೆಸುವ ಶಕ್ತಿ ದೊರೆಯಲಿ. ತಾವು ಸಹ ಕೈಲಾದ ಸಹಕಾರ ಮಾಡುವುದಾಗಿ ತಿಳಿಸಿದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಜಿ. ಕುಮಾರ್ ಮಾತನಾಡಿ, ಸನಾತನ ಹಿಂದೂ ಧರ್ಮದಲ್ಲಿ ಸಾಕಷ್ಟು ವಿಚಾರಗಳನ್ನು ಕಾಣುತ್ತೇವೆ. ಶ್ರಾವಣ ಮಾಸದಲ್ಲಿ ಆರಂಭವಾಗುವ ಹಬ್ಬಗಳಲ್ಲಿ ಬಳಸುವ ಆಹಾರ ಪದ್ಧತಿಯಲ್ಲಿ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಆಕಾಶವಾಣಿ ಕಲಾವಿದ ಎಚ್. ಗುರುಮೂರ್ತಿ ಅವರಿಗೆ ದಸರಾ ಉತ್ಸವ ಸಾಧಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಡಾ. ಎಚ್.ಇ. ಜ್ಞಾನೇಶ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಜಿ. ಕುಮಾರ್ ಪ್ರಾಯೋಜಕರಾದ ಉದ್ಯಮಿ ಹೇಮರಾಜ ಪಾಟೀಲ್, ಗುತ್ತಿಗೆದಾರ ಮಂಜು ತವನಂದಿ, ಶ್ರೀ ರಂಗನಾಥ ಜ್ಯುವೆಲರಿಯ ಶ್ರೀಕಾಂತ್ ಶೇಟ್ ಅವರಿಗೆ ಗೌರವಿಸಲಾಯಿತು.
ದಸರಾ ಉತ್ಸವ ಸಮಿತಿ ಅಧ್ಯಕ್ಷ ಜಿ. ಪ್ರಶಾಂತ್ ಮೇಸ್ತಿç ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಪರಶುರಾಮ ಸಣ್ಣಬೈಲ್, ಮಹಿಳಾ ಅಧ್ಯಕ್ಷೆ ಸುಜಾತಾ ಜೋತಾಡಿ, ಗೋ ಸಂರಕ್ಷಣಾ ಹೋರಾಟ ಸವಿತಿ ಅಧ್ಯಕ್ಷ ಜೆ.ಎಸ್. ಚಿದಾನಂದ ಗೌಡ, ಪ್ರಮುಖರಾದ ಗುರುಮೂರ್ತಿ ಗುಡಿಗಾರ್, ಡಿ. ಶಿವಯೋಗಿ, ಬಸವರಾಜಪ್ಪ ಗುರ್ಕಿ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿ. ತೋಟಪ್ಪ, ಮಂಜು ತುರುವೆಕೆರೆ ಸೇರಿದಂತೆ ಇತರರಿದ್ದರು. ವೀಣಾ ಶ್ರೀಧರ್ ಪ್ರಾರ್ಥಿಸಿದರು. ಮಾಲತೇಶ ಮಾಸ್ತರ್ ಸ್ವಾಗತಿಸಿ, ಜಿ. ಕೆರಿಯಪ್ಪ ವಂದಿಸಿದರು. ಎಸ್. ರಾಘವೇಂದ್ರ ನಿರೂಪಿಸಿದರು.
ಸೊರಬದಲ್ಲಿ ವಿಜೃಂಭಣೆಯಿಂದ ಸಾರ್ವಜನಿಕ ದಸರಾ ಉತ್ಸವ: ಡಾ. ಎಚ್.ಇ. ಜ್ಞಾನೇಶ್
Date:
