Sunday, October 11, 2026
Sunday, October 11, 2026

ಭಾರತೀಯ ಮೂಲದ ನವಿ ಪಿಳ್ಳೈ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ

Date:

ಭಾರತೀಯ ಮೂಲದ ಮಹಿಳೆ ನವಿ ಪಿಳ್ಳೆ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ ಲಭಿಸಿದೆ.

ಬಸ್ ಚಾಲಕರೊಬ್ಬರ ಮಗಳಾಗಿದ್ದ ನವಿ ಅವರು ಸ್ವಂತ ಮನೋಸಂಕಲ್ಪದಿಂದಲೇ ‌ಬದುಕು ರೂಪಿಸಿಕೊಂಡವರು. ನೊಬೆಲ್ ಶಾಂತಿ ಪ್ರಶಸ್ತಿ ಅವರನ್ನ ಅರಸಿಕೊಂಡು ಬಂದಿದೆ..

ಅಕ್ಟೋಬರ್ 9, 2026 ರಂದು, ಓಸ್ಲೋದಲ್ಲಿರುವ ನಾರ್ವೇಜಿಯನ್ ನೊಬೆಲ್ ಸಮಿತಿಯು ನವಿ ಪಿಳ್ಳೈ ಅವರನ್ನು ವಿಜೇತೆಯೆಂದು ಘೋಷಿಸಿತು. ಇವರು ದಕ್ಷಿಣ ಆಫ್ರಿಕಾದ ನ್ಯಾಯಾಧೀಶರಾಗಿದ್ದು, 85 ವರ್ಷ ವಯಸ್ಸಿನವರಾಗಿದ್ದಾರೆ.

ನವಿ ಪಿಳ್ಳೈ ಅವರು ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿ ಭಾರತೀಯ ತಮಿಳು ಮೂಲದ ಕುಟುಂಬವೊಂದರಲ್ಲಿ ಜನ್ಮತಾಳಿದರು.
ಅವರ ಅಜ್ಜ-ಅಜ್ಜಿ ಭಾರತದಿಂದ ಅಲ್ಲಿಗೆ ಹೋಗಿ ನೆಲೆಸಿದ್ದವರು.
ಮತ್ತು ಅವರ ತಂದೆ ಬಸ್ ಚಾಲಕರಾಗಿದ್ದರು.
ನವಿ ಪಿಳ್ಳೆ ಅವರು ವಕೀಲರಾಗುವ ಕನಸು ಕಂಡಾಗ, ಅದು ಶ್ರೀಮಂತ ಕುಟುಂಬಗಳಿಗೆ ಮಾತ್ರ ಮೀಸಲಾದ ವೃತ್ತಿ ಎಂದು ಶಿಕ್ಷಕರೊಬ್ಬರು ಅವರಿಗೆ ಹೇಳಿದ್ದರಂತೆ. ಅವರ ಓದಿನ ಉತ್ಸಾಹ,ಆಸಕ್ತಿ ಕಂಡು ನೆರೆಹೊರೆಯವರು ಹಣವನ್ನು ಸಂಗ್ರಹಿಸಿ ನೆರವು ನೀಡಿದ್ದರು.

ನಟಾಲ್ ಪ್ರಾಂತ್ಯದಲ್ಲಿ ತಮ್ಮದೇ ಆದ ಕಾನೂನು ಸಂಸ್ಥೆಯನ್ನು (law firm) ಪ್ರಾರಂಭಿಸಿದ ಮೊದಲ ಮಹಿಳೆ ನವಿ ಪಿಳ್ಳೆ. ವರ್ಣಭೇದ ನೀತಿಯ ವಿರುದ್ಧ ಹೋರಾಡಿದ ಕಾರ್ಯಕರ್ತರ ಪರವಾಗಿ ಅವರು ವಾದಿಸಿದರು.

1973 ರಲ್ಲಿ, ನೆಲ್ಸನ್ ಮಂಡೇಲಾ ಅವರನ್ನು ಬಂಧಿಸಲಾಗಿದ್ದ ರಾಬ್ಬೆನ್ ದ್ವೀಪದ ರಾಜಕೀಯ ಕೈದಿಗಳಿಗೆ ಮೂಲಭೂತ ಹಕ್ಕುಗಳನ್ನು ಪಡೆಯಲು ಸಹಾಯ ಮಾಡಿದ ಪ್ರಕರಣವೊಂದನ್ನು ಅವರು ಕೈಗೆತ್ತಿಕೊಂಡರು.

ನಂತರ ಅವರು ದಕ್ಷಿಣ ಆಫ್ರಿಕಾದ ಹೈಕೋರ್ಟ್‌ನಲ್ಲಿ (ಉಚ್ಚ ನ್ಯಾಯಾಲಯ) ಸೇವೆ ಸಲ್ಲಿಸಿದ ಮೊದಲ ಅಶ್ವೇತ( Non white) ಮಹಿಳೆಯಾದರು ಮತ್ತು ರುವಾಂಡಾ ದಲ್ಲಿನ ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಮಂಡಳಿಯ ಅಧ್ಯಕ್ಷರಾಗಿದ್ದರು. 2008 ರಿಂದ 2014 ರವರೆಗೆ, ಅವರು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಉನ್ನತ ಆಯುಕ್ತರಾಗಿದ್ದರು. , ಅವರು ಪ್ರಸ್ತುತ ಅಂತರರಾಷ್ಟ್ರೀಯ ನ್ಯಾಯಾಲಯದ (International Court of Justice) ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ನೊಬೆಲ್ ಸಮಿತಿಯು ಅವರ ಧೈರ್ಯವನ್ನು ಶ್ಲಾಘಿಸಿದೆ ಮತ್ತು ಲೈಂಗಿಕ ದೌರ್ಜನ್ಯವು ಮಾನವೀಯತೆಯ ವಿರುದ್ಧದ ಅಪರಾಧ ಹಾಗೂ ನರಮೇಧವಾಗಬಲ್ಲದು ಎಂಬುದನ್ನು ಸ್ಥಾಪಿಸಲು ಅವರ ಸೇವಾಕಾರ್ಯ ಸಹಾಯ ಮಾಡಿದೆ ಎಂದು ಹೇಳಿದೆ. ಅವರು ಈ ಪ್ರಶಸ್ತಿಯನ್ನು ಅಂತರರಾಷ್ಟ್ರೀಯ ಅಪರಾಧಗಳಿಂದ ಬದುಕುಳಿದ ಎಲ್ಲರಿಗೂ ಅರ್ಪಿಸಿದ್ದಾರೆ

ಅಂತೂ ಡರ್ಬನ್‌ನ ಸಾಮಾನ್ಯ ಜನರ ಬಡಾವಣೆಯಿಂದ ವಿಶ್ವದ ಅತ್ಯುನ್ನತ ಶಾಂತಿ ಗೌರವದವರೆಗೆ ನವಿ ಅವರ ಖ್ಯಾತಿಯ ಪಯಣ ರೋಚಕವಾಗಿದೆ.
ನವಿ‌ ಅವರಿಗೆ ಅಭಿನಂದನೆಗಳು.
ನೊಬೆಲ್ ಪಾರಿತೋಷಿಕವನ್ನ ಅವರಿಗೆ ನೀಡಿರುವ ಬಗ್ಗೆ ಪ್ರಕಟಿಸಿದಾಗ ನವಿ ಪಿಳ್ಳೈ ಅವರ ಮೊದಲ ಪ್ರತಿಕ್ರಿಯೆ ಅವಿಶ್ವಾಸದಿಂದ ಕೂಡಿತ್ತು:
ತಮಗೆ 2026ರ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿದೆ ಎಂದು ತಿಳಿಸಿದಾಗ, “ಇದು ಯಾರಾದರೂ ಮಾಡುತ್ತಿರುವ ತಮಾಷೆಯಾಗಿರಬೇಕು” ಎಂದು ತಾವು ಭಾವಿಸಿದ್ದಾಗಿ ಅವರು ಹೇಳಿದರು;

ಜೊತೆಗೆ, “ಒಬ್ಬ ವಕೀಲೆ ಮತ್ತು ನ್ಯಾಯಾಧೀಶೆಯಾಗಿರುವುದರಿಂದ, ನಾನು ಇದನ್ನು ಖಚಿತಪಡಿಸಿಕೊಳ್ಳಲು ಬಯಸುತ್ತೇನೆ” ಎಂದೂ ಅವರು ನುಡಿದರು.

ಜರ್ಮನಿಯ ನ್ಯೂರೆಂಬರ್ಗ್‌ನಲ್ಲಿರುವ ‘ಪ್ಯಾಲೇಸ್ ಆಫ್ ಜಸ್ಟಿಸ್’ನಲ್ಲಿ (ನ್ಯಾಯಾಲಯದ ಭವನ) ಸಹೋದ್ಯೋಗಿಗಳ ನಡುವೆ ಇದ್ದಾಗ ಅವರು ಈ ಪ್ರತಿಕ್ರಿಯೆ ನೀಡಿದರು ಮತ್ತು ಅಲ್ಲಿ ಅವರಿಗೆ ಎದ್ದು ನಿಂತು ಗೌರವ ಸೂಚಿಸಲಾಯಿತು (ಸ್ಟ್ಯಾಂಡಿಂಗ್ ಓವೇಶನ್). ಅದೇ ಸಂದರ್ಭದಲ್ಲಿ ಸಹಜವಾಗಿ ಮಾತನಾಡುತ್ತಾ ಅವರು ತಮಾಷೆಯಾಗಿ ಹೀಗೆಂದರು: “ನೀವು ಇನ್ನೂ ಸ್ವಲ್ಪ ಜೋರಾಗಿ ಚಪ್ಪಾಳೆ ತಟ್ಟಿದರೆ, ನಾನು ಈ ಪ್ರಶಸ್ತಿಯನ್ನು ಟ್ರಂಪ್ ಅವರೊಂದಿಗೆ ಹಂಚಿಕೊಳ್ಳಬೇಕಾಗಬಹುದು. ಹೀಗಿತ್ತು ಲಘುಧಾಟಿಯ ಮಾತು.ಆಗ ತಕ್ಷಣ
ಇಡೀ ಗುಂಪೇ ಕರತಾಡನಮಾಡಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...