ಶಿವಮೊಗ್ಗ ನಗರ ಉಪವಿಭಾಗ-1 ಹಾಗೂ ಶಿವಮೊಗ್ಗ ಗ್ರಾಮೀಣ ಉಪವಿಭಾಗ ವ್ಯಾಪ್ತಿಯಲ್ಲಿ ದಿನಾಂಕ: 13.10.2026 ರಿಂದ 15.10.2026 ರ ರವರೆಗೆ ಶಿವಮೊಗ್ಗ ನಗರ ಉಪವಿಭಾಗ-1, ಮ.ವಿ.ಸ.ಕಂ. ಬಾಲ್ರಾಜ್ ಅರಸ್ ರಸ್ತೆ, ಕಛೇರಿಯ ಆವರಣದಲ್ಲಿ ಪಿಎಮ್ ಸೂರ್ಯಘರ್ ಯೋಜನೆಯಡಿಯಲ್ಲಿ ಮನೆಯ ಮೇಲ್ಯಾವಣೆಗೆ ಸೋಲಾರ್ ರೂಫ್ಟಾಪ್ ಅಳವಡಿಸಿಕೊಳ್ಳಲು 03 ದಿನದ ಶಿಬಿರವನ್ನು ಮೆಸ್ಕಾಂ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.
ಈ ಶಿಬಿರದಲ್ಲಿ ಬ್ಯಾಂಕ್ ಪ್ರತಿನಿಧಿಗಳು ಮತ್ತು ಸೋಲಾರ್ ರೂಫ್ ಟಾಪ್ನ ಅಧಿಕೃತ ಮಾರಾಟಗಾರರು ಉಪಸ್ಥಿತರಿದ್ದು, ಪಿಎಮ್ ಸೂರ್ಯಘರ್ ಯೋಜನೆಯಡಿ ಸಂಪೂರ್ಣ ಮಾಹಿತಿಯನ್ನು ಗ್ರಾಹಕರಿಗೆ ನೀಡಲಾಗುವುದು. ಪಿಎಮ್ ಸೂರ್ಯಘರ್ ಯೋಜನೆಯಡಿಯಲ್ಲಿ ಸೋಲಾರ್ ರೂಫ್ ಟಾಪ್ ಅಳವಡಿಸಿಕೊಳ್ಳಲು ಇಚ್ಛಿಸುವ ಗ್ರಾಹಕರಿಗೆ ಯೋಜನೆಯ ಕುರಿತು ಮಾಹಿತಿ, ಅರ್ಜಿ ನೋಂದಣಿ ಸರ್ಕಾರದ ಸಹಾಯಧನದ ಮತ್ತು ಬ್ಯಾಂಕ್ ಸಾಲ ಸೌಲಭ್ಯದ ಕುರಿತು ಸ್ಥಳದಲ್ಲೇ ಮಾಹಿತಿ ನೀಡಲಾಗುವುದು.
ಅರ್ಜಿ ಸಲ್ಲಿಸಲು ಇತ್ತೀಚಿನ ವಿದ್ಯುತ್ ಬಿಲ್, ಅರ್ಜಿದಾರರ ಆಧಾರ್ ಕಾರ್ಡ್ ಬ್ಯಾಂಕ್ ನ ವಿವರಗಳು ಅಗತ್ಯವಿದ್ದು, ಸಾರ್ವಜನಿಕರು ವಿಶೇಷ ಕೌಂಟರ್ ನ ಸದುಪಯೋಗ ಪಡೆದುಕೊಳ್ಳಲು ಮೆಸ್ಕಾಂ ಪ್ರಕಟಣೆ ಕೋರಿದೆ.
ಶಿವಮೊಗ್ಗ ನಗರ ಉಪವಿಭಾಗ-1 ಹಾಗೂ ಶಿವಮೊಗ್ಗ ಗ್ರಾಮೀಣ ಉಪವಿಭಾಗ ಸೋಲಾರ್ ರೂಫ್ ಟಾಪ್ ಅಳವಡಿಸಲು ಅರ್ಜಿ ಆಹ್ವಾನ
Date:
