Friday, October 2, 2026
Friday, October 2, 2026

ಕೃಷ್ಣಪ್ಪ ರಂಗಮ್ಮ ಶಿಕ್ಷಣ ದತ್ತಿ ಪ್ರಶಸ್ತಿಗೆ ಗಾಯತ್ರಿ ಯಲ್ಲಪ್ಪ ಗೌಡ ಭಾಜನ

Date:

ಅಖಿಲ ಭಾರತ ಒಕ್ಕಲಿಗರ ಮಹಾಸಭಾ (ರಿ.), ಒಕ್ಕಲಿಗರ ಪರಿಷತ್ತು ಹಾಗೂ ಕೃಷ್ಣಪ್ಪ ರಂಗಮ್ಮ ಸಮಾಜಸೇವಾ ಪ್ರತಿಷ್ಠಾನ, ಬೆಂಗಳೂರು ಇವರ ವತಿಯಿಂದ ಆಯೋಜಿಸಿದ್ದ ವಿಜೃಂಭಣೆಯ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಒಕ್ಕಲಿಗ ಸಮಾಜದ ಸಾಧಕರನ್ನು ಹಾಗೂ ಹೆಚ್ಚಿನ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಕೃಷಿಕ ಸಮಾಜ, ನವದೆಹಲಿಯ ಮಹಿಳಾ ರಾಜ್ಯಾಧ್ಯಕ್ಷೆ ಗಾಯತ್ರಿ ಯಲ್ಲಪ್ಪ ಗೌಡ ಅವರನ್ನು ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆ ಹಾಗೂ ಸಾಧನೆಯನ್ನು ಗುರುತಿಸಿ “ಕೃಷ್ಣಪ್ಪ ರಂಗಮ್ಮ ಶಿಕ್ಷಣ ದತ್ತಿ ಪ್ರಶಸ್ತಿ–2026” ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಪೂಜ್ಯ ಸ್ವಾಮೀಜಿಗಳು, ಗಣ್ಯರು ಹಾಗೂ ಒಕ್ಕಲಿಗ ಸಮಾಜದ ವಿವಿಧ ಕ್ಷೇತ್ರಗಳ ಸಾಧಕರು ಉಪಸ್ಥಿತರಿದ್ದು, ಸಮಾಜದ ಏಳಿಗೆಗೆ ಶಿಕ್ಷಣ, ಸೇವೆ ಮತ್ತು ಸಾಧನೆಯ ಮಹತ್ವವನ್ನು ತಿಳಿಸಿದರು.

ತಮ್ಮನ್ನು ಗುರುತಿಸಿ ಗೌರವಿಸಿದ ಡಾ. ವಿ. ಆಂಜನಪ್ಪ, ಡಾ. ಅಪ್ಪಾಜಿಗೌಡ, ನೇಗಿಲ ಯೋಗಿ ಕೆ. ಗಿರಿಯಪ್ಪ, ರಮೇಶ್ ಆರ್., ಚಿಕ್ಕಣ್ಣ, ಈಶ್ವರ್ ಕೆಎಎಸ್, ಸಿ.ವಿ. ಚಂದ್ರಶೇಖರ್, ಟಿ.ಎಂ. ಹುಚ್ಚಪ್ಪ, ರಾಮಲಿಂಗಯ್ಯ, ಶೋಭಾ ಶಿವಣ್ಣ, ಮಾಣಿಕ್ಯ ಚಿಲ್ಲೂರ ಹಾಗೂ ಕೃಷ್ಣಪ್ಪ ರಂಗಮ್ಮ ಸಮಾಜಸೇವಾ ಪ್ರತಿಷ್ಠಾನದ ಎಲ್ಲಾ ಪದಾಧಿಕಾರಿಗಳಿಗೆ ಅವರು ಕೃತಜ್ಞತೆ ಸಲ್ಲಿಸಿದರು.

ಅದೇ ರೀತಿ ತಮ್ಮನ್ನು ಅಭಿನಂದಿಸಿದ ಬೆಂಗಳೂರಿನ ಕೆ. ಸೋಮಶೇಖರ್, ವಿಜಯಕುಮಾರ್, ಪುಷ್ಪ ಶ್ರೀರಾಮ್, ಶಿವಮೊಗ್ಗದ ಜೆ.ಸಿ.ಐ. ಸೆನೆಟರ್ ಎಸ್.ವಿ. ಶಾಸ್ತ್ರಿ, ಎನ್.ವಿ.ಪಿ. ಸೆನ್. ಶಶಿಕಲಾ, ಎಸ್.ಸಿ.ಐ. ಅದಿತಿ ಫೌಂಡರ್ ಅಧ್ಯಕ್ಷೆ ಪ್ರೊ. ಆರ್. ಅನುರಾಧ ಪಟೇಲ್ ಹಾಗೂ ಪದಾಧಿಕಾರಿಗಳು, ಎಸ್.ಸಿ.ಐ. ಭಾವನಾ ಅಧ್ಯಕ್ಷೆ ಭಾರತಿ ರಾಮಕೃಷ್ಣ, ಶಿವಮೊಗ್ಗ ಶಾರದಾ ಗೆಳತಿಯರು, ಮಲ್ನಾಡ್ ಒಕ್ಕಲಿಗರ ಮಹಿಳಾ ವೇದಿಕೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಅಂಬ್ರಣಿ ಸಾಂಸ್ಕೃತಿಕ ವೇದಿಕೆಯ ಪದಾಧಿಕಾರಿಗಳು, ಪ್ರಶಾಂತಿ ರೆಸಾರ್ಟ್, ಚಿಕ್ಕಮಗಳೂರಿನ ಕೃಷ್ಣವೇಣಿ ರಮೇಶ್ ಸೇರಿದಂತೆ ಎಲ್ಲ ಸ್ನೇಹಿತರು ಹಾಗೂ ಸ್ನೇಹಿತೆಯರಿಗೆ ಗಾಯತ್ರಿ ಯಲ್ಲಪ್ಪ ಗೌಡ ಅವರು ಧನ್ಯವಾದಗಳನ್ನು ಸಲ್ಲಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

JCI Shivamogga ಕುಟುಂಬ ಮಿಲನದಿಂದ ಬಾಂಧವ್ಯ ವೃದ್ಧಿ, ಪ್ರತಿಭೆ ಅನಾವರಣ: ವಿಜಯಲಕ್ಷ್ಮಿ ಕಡಂಬ

JCI Shivamogga ಜೆಸಿಐ ಶಿವಮೊಗ್ಗ ವಿವೇಕ್ ಸಂಸ್ಥೆಯ ವತಿಯಿಂದ ಸ್ನೇಹ ಮಿಲನ...

B.Y. Raghavendra ಮಾನವ ದೀರ್ಘಕಾಲ ಸಮತೋಲನದಿಂದ ಬದುಲು ಆಯುರ್ವೇದ ಸಹಕಾರಿ : ಬಿ.ವೈ.ರಾಘವೇಂದ್ರ

B.Y. Raghavendra ಆಯುರ್ವೇದ ಭಾರತದ ಅತ್ಯಂತ ಪ್ರಾಚೀನ ಮತ್ತು ಸಾಂಪ್ರದಾಯಿಕ ವೈದ್ಯಕೀಯ...

B.Y. Raghavendra ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ: ವಿದ್ಯಾರ್ಥಿಗಳೊಂದಿಗೆ ಸಂವಾದ

B.Y. Raghavendra ​ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ...