Tuesday, September 22, 2026
Tuesday, September 22, 2026

ಕುರುವಳ್ಳಿಯಲ್ಲಿ ಸುವರ್ಣ ಗಣೇಶೋತ್ಸವ: ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಮಾದರಿಯಾದ ದಸ್ತಗಿರಿ ಕುಟುಂಬ

Date:

ತೀರ್ಥಹಳ್ಳಿ ತಾಲೂಕಿನ ಕುರುವಳ್ಳಿ ಗ್ರಾಮದಲ್ಲಿ 50ನೇ ವರ್ಷದ ಸುವರ್ಣ ಗಣೇಶೋತ್ಸವ ವಿಶೇಷವಾಗಿ ಗಮನ ಸೆಳೆಯಿತು.

ಕುರುವಳ್ಳಿ ಯುವಕ ಸಂಘದ ವತಿಯಿಂದ ಆಯೋಜಿಸಿದ್ದ ಗಣೇಶೋತ್ಸವದಲ್ಲಿ ಧಾರ್ಮಿಕ ಸಾಮರಸ್ಯದ ಅಪರೂಪದ ದೃಶ್ಯ ಕಂಡುಬಂತು.

ಉದ್ಯಮಿ ದಸ್ತಗಿರಿ ಹಾಗೂ ಅವರ ಸಹೋದರರು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಂಪೂರ್ಣ ಪ್ರಾಯೋಜಕತ್ವ ನೀಡುವ ಮೂಲಕ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂದೇಶ ಸಾರಿದರು.

ಕಾರ್ಯಕ್ರಮದಲ್ಲಿ ವಿಜಯ್ ಕೊಡ್ಯಾಲ್‌ಬೈಲ್ ತಂಡದಿಂದ ‘ಶಿವದೂತ ಗುಳಿಗ’ ನಾಟಕ ಪ್ರದರ್ಶನ ನಡೆಯಿತು. ಐದು ಸಾವಿರಕ್ಕೂ ಹೆಚ್ಚು ಮಂದಿ ನಾಟಕವನ್ನು ವೀಕ್ಷಿಸಿದರು.

ಈ ಸಂದರ್ಭದಲ್ಲಿ ದಸ್ತಗಿರಿ ಕುಟುಂಬದ ಸೌಹಾರ್ದತೆಯ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಕುರುವಳ್ಳಿ ಯುವಕ ಸಂಘ, ಕುಟುಂಬದ ಸದಸ್ಯರನ್ನು ವಿಶೇಷವಾಗಿ ಸನ್ಮಾನಿಸಿತು.

ಧರ್ಮದ ಎಲ್ಲೆಗಳನ್ನು ಮೀರಿ ಪರಸ್ಪರ ಗೌರವ, ಸಹಕಾರ ಮತ್ತು ಸಹಬಾಳ್ವೆಗೆ ಮಾದರಿಯಾದ ಈ ಕಾರ್ಯಕ್ರಮ, ಕುರುವಳ್ಳಿಯ ಸೌಹಾರ್ದ ಪರಂಪರೆಗೆ ಮತ್ತೊಂದು ಅಧ್ಯಾಯ ಸೇರಿಸಿತು.

ಹಬ್ಬಗಳು ಭಿನ್ನತೆಗಳನ್ನು ಮರೆಸಿ, ಎಲ್ಲರನ್ನು ಒಂದಾಗಿಸಲಿ…
ಸಹಬಾಳ್ವೆ ಮತ್ತು ಸಾಮರಸ್ಯ ಸಮಾಜದ ಶಕ್ತಿಯಾಗಲಿ ಎಂಬ ಸಂದೇಶವನ್ನು ಈ ಸುವರ್ಣ ಗಣೇಶೋತ್ಸವ ಸಾರಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ: ವಿದ್ಯಾರ್ಥಿಗಳೊಂದಿಗೆ ಸಂವಾದ

B.Y. Raghavendra ​ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ...

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ವಾರ್ಷಿಕ ಮಹಾಸಭೆ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ...

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...