ಶಿವಮೊಗ್ಗ ರಂಗಾಯಣವು ರೆಪರ್ಟರಿಗೆ ಮುಂದಿನ ಒಂದು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಆಯ್ಕೆಗೊಂಡಿರುವ 12 ಕಲಾವಿದ/ತಂತ್ರಜ್ಞರ ಪಟ್ಟಿಯನ್ನು ಪ್ರಕಟಗೊಳಿಸಿದೆ.
ರಂಗಸಜ್ಜಿಕೆ/ವಸ್ತ್ರ-ಮೈಸೂರಿನ ಮಧುಸೂದನ್ ಬಿ.ಆರ್., ಬೆಳಕು/ಧ್ವನಿ-ಶಿವಮೊಗ್ಗದ ಮಹಾಬಲೇಶ್ವರ ಬಿ.ಕೆ, ಕಲಾವಿದರು- ಬೆಳಗಾವಿಯ ಸೌರವ್ ಸನದಿ, ಶಿವಮೊಗ್ಗದ ಸಚಿನ್ ಕೆ.ಎನ್., ದರ್ಶನ್ ಎಸ್., ಸೈಯದ್ ಆಲಿ, ಕಲಬುರಗಿಯ ಶ್ರೀಕಾಂತ್, ಸುಜನ್ ಕುಮಾರ್ ಪಾಟೀಲ್, ಅಂಬಿಕಾ ಸಾಯಿಬಣ್ಣ, ಭಾಗ್ಯಶ್ರೀ ಭೀಮರಾಯ, ರಾಯಚೂರಿನ ಭೀಮೇಶ ಹಾಗೂ ಧಾರವಾಡದ ಪೂಜಾ ಗಜಾಕೋಶ ಆಯ್ಕೆಯಾಗಿರುತ್ತಾರೆ ಎಂದು ರಂಗಾಯಣದ ಆಡಳಿತಾಧಿಕಾರಿ ಡಾ. ಶೈಲಜಾ ಎ.ಸಿ. ತಿಳಿಸಿರುತ್ತಾರೆ.
ಶಿವಮೊಗ್ಗ ರಂಗಾಯಣ : ರೆಪರ್ಟರಿಗೆ ಆಯ್ಕೆಯಾದವರ ಪಟ್ಟಿ ಪ್ರಕಟ
Date:
