ಕಾಂಗ್ರೆಸ್ ಮುಖಂಡ ಗುಲಾಮ್ ನಬಿ ಆಜಾದ್ ಅವರಿಗೆ ಪ್ರತಿಷ್ಠಿತ ” ಪದ್ಮಭೂಷಣ” ಪ್ರಶಸ್ತಿ ಲಭಿಸಿದ ವಿಷಯದಲ್ಲಿ ಕಾಂಗ್ರೆಸ್ ಒಳಗೆ ಎದ್ದಿರುವ ವಿವಾದ ಕುರಿತು ಕಾಂಗ್ರೆಸ್ ಮತ್ತೊಬ್ಬ ಹಿರಿಯ ನಾಯಕ ಕರಣ್ ಸಿಂಗ್ ಅವರು ಸಾಂತ್ವನ ಹೇಳಿದ್ದಾರೆ.
ರಾಷ್ಟ್ರೀಯ ಪ್ರಶಸ್ತಿಗಳು ಯಾರಿಗೆ ಲಭಿಸಿದರೂ ಗೌರವಾರ್ಹ. ನಮ್ಮ ಪಕ್ಷದ ಮುಖಂಡನಿಗೆ ಈಗ ಅಗೌರವ ಬಂದಿರುವುದರಿಂದ ಅವರನ್ನು ಅಭಿನಂದಿಸಬೇಕು ಎಂದು ಹೇಳಿದ್ದಾರೆ. ಆಜಾದ್ ಗೆ ಪದ್ಮ ಪ್ರಶಸ್ತಿ ಪಕ್ಷದೊಳಗೆ ಭಾರೀ ವಿವಾದವನ್ನು ಸೃಷ್ಟಿಸಿದೆ. ಪಶ್ಚಿಮ ಬಂಗಾಳದ ಮಾಜಿ ಸಿಎಂ ಬುದ್ಧದೇವ್ ಭಟ್ಟಾಚಾರ್ಜಿ ಪದ್ಮ ಪ್ರಶಸ್ತಿ ತಿರಸ್ಕರಿಸುವುದನ್ನು ಉಲ್ಲೇಖಿಸಿದ್ದ ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್, ಬುದ್ಧದೇವ್ ಅಜಾದಿ ಬಯಸಿದ್ದರು. ಗುಲಾಮಿತನವನ್ನಲ್ಲ ಎಂದು ಟಾಂಗ್ ನೀಡಿದ್ದರು. ಇದಕ್ಕೆ ಉತ್ತರಿಸಿರುವ ಕರಣ್ ಸಿಂಗ್, ಇಂತಹ ಕುಹಕ ಗಳಿಂದ ಪಕ್ಷ ಬೆಳೆಯುವುದಿಲ್ಲ. ಪ್ರಶಸ್ತಿ ಯಾರಿಗೆ ಸಂದರೂ ಸರಿಯೇ ಅದನ್ನು ಗೌರವಿಸುವುದು ಕಲಿಯಬೇಕು. ರಾಷ್ಟ್ರಪ್ರಶಸ್ತಿಗಳು ವಿಷಯದಲ್ಲಿ ರಾಜಕೀಯ ಬೆರೆಸಬಾರದು ಎಂದು ತಿಳಿಸಿದ್ದಾರೆ.