ಶಿವಮೊಗ್ಗ :- ನಗರದ ಸಾಗರ ರಸ್ತೆಯ ಡಾ. ಪುಂಡಿತ ಪುಟ್ಟರಾಜ ಕವಿ ಗವಾಯಿಗಳವರ ಸಂಗೀತ ವಿದ್ಯಾಲಯ ಮತ್ತು ಶ್ರೀ ವೀರೇಶ್ವರ ಪುಣ್ಯಾಶ್ರಮ ಉಚಿತ ಸಂಸ್ಕೃತ ಪಾಠ ಶಾಲೆಯಲ್ಲಿ ಗಾನಲಹರಿ ೧೨೩ನೇ ಅಮಾವಾಸ್ಯೆಯ ಸಂಗೀತ ಸಂಜೆ ಕಾರ್ಯಕ್ರಮವನ್ನು ಸೆ. ೧೧ರ ಸಂಜೆ ೬.೩೦ಕ್ಕೆ ಆಯೋಜಿಸಲಾಗಿದೆ.
ರಾಜ್ಯ ಪ್ರಶಸ್ತಿ ಪುgಸ್ಕತ ಆರ್.ಬಿ. ಸಂಗಮೇಶ್ವರ ಗವಾಯಿಗಳೂ ಅಧ್ಯಕ್ಷತೆ ವಹಿಸುವರು. ನಗರದ ಮಹೇಶ್ವರಿ ಭಜನಾ ಮಂಡಳಿಯಿಂದ ಭಜನಾ ಸೇವೆ ಮತ್ತು ಆಶ್ರಮದ ಅಂಧ ಮಕ್ಕಳು ಪ್ರಾರ್ಥಿಸಲಿದ್ದಾರೆ. ಕಡೂರಿನ ಹಿಂದೂಸ್ಥಾನಿ ಗಾಯಕರಾದ ಸುರೇಶ್ ಜಮ್ಮಲದಿನ್ನಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ರಾಜ್ಯ ಪ್ರಶಸ್ತಿ ಪುರಸ್ಕತ ರಾಮಣ್ಣ ಭಜಂತ್ರಿ, ವೀರಭದ್ರಶಾಸ್ತ್ರಿ ವೇದ ಘೋಷ, ತುಕಾರಾಂ ರಂಗದೋಳ್, ವಿನಾಯಕ ಭಟ್ ತಬಲ, ಸಿದ್ದಣ್ಣ ಬಡಿಗೇರ್ ಹಾರ್ಮೋನಿಯಂ ಜೊತೆ ಸಾಥ್ ನೀಡಲಿದ್ದಾರೆ. ರೇವಣ್ಣ ಸಿದ್ದಯ್ಯ ಶಾಸ್ತ್ರಿಗಳು ನಿರೂಪಿಸಲಿದ್ದಾರೆ.
ಶಿವಮೊಗ್ಗ ಶ್ರೀವೀರೇಶ್ವರ ಪುಣ್ಯಾಶ್ರಮದಲ್ಲಿ ಸುರೇಶ್ ಜಮ್ಮಲದಿನ್ನಿ ಅವರ ಹಿಂದೂಸ್ತಾನಿ ಹಾಡುಗಾರಿಕೆ
Date:
