ಭಾರತ ಸ್ವಾತಂತ್ರ್ಯ ಪಡೆಯಲು ಅದೆಷ್ಟು ಜನ ಜೀವವನ್ನೇ ಬಿಟ್ಟರು, ಆಸ್ತಿಪಾಸ್ತಿಗಳನ್ನು ಕಳೆದುಕೊಂಡರು, ತೊಂದರೆ ಅನುಭವಿಸಿದರು, ಇವೆಲ್ಲವುಗಳ ಅರಿವು ಇಂದಿನ ಜನರಿಗೆ ಮನ ಮುಟ್ಟುವಂತೆ ತಿಳಿಸಿ ಹೇಳುವ ಅವಶ್ಯಕತೆ ಇದೆ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಡಾಕ್ಟರ್ ಚಿಕ್ಕ ಸ್ವಾಮಿ ತಿಳಿಸಿದ್ದಾರೆ.
ಅವರ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಹೆಲ್ಪಿಂಗ್ ಹ್ಯಾಂಡ್ಸ್ ಮತ್ತು ಚಿಂತಕರ ಚಾವಡಿ ಜಂಟಿಯಾಗಿ ಏರ್ಪಡಿಸಿದ್ದ “ನಮ್ಮ ಸ್ವಾತಂತ್ರ್ಯಎತ್ತ ಸಾಗಿದೆ” ವಿಷಯದ ಬಗ್ಗೆ ಏರ್ಪಡಿಸಿದ್ದ ಚಿಂತನ ಮಂಥನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಇಂದಿನ ಯುವಕರಿಗೆ ಸ್ವಾತಂತ್ರ್ಯದ ಮಹತ್ವವೇ ತಿಳಿಯದಾಗಿದೆ ಎಂದು ವಿಷಾಧ ವ್ಯಕ್ತಪಡಿಸಿದರು.
ಆಶಯ ನುಡಿಗಳನ್ನಾಡಿದ ಸಾಹಿತಿ ಎಂ ಎನ್ ಸುಂದರರಾಜ್ ಅವರು ಮಾತನಾಡಿ, ಇಂದು ದೇಶದಲ್ಲಿ ಉಚಿತವಾಗಿ ನೀಡಬೇಕಾಗಿದ್ದ ಶಿಕ್ಷಣ ಮತ್ತು ಆರೋಗ್ಯ ಒಂದು ದಂಧೆಯಾಗಿ ಬಡಜನತೆಗೆ ಹೊರೆಯಾಗಿದೆ ಎಂದು ವಿಷಾದಿಸಿದರು. ಸರ್ಕಾರಗಳು ಈ ಎರಡು ಸೌಲಭ್ಯಗಳನ್ನು ಉಚಿತವಾಗಿ ನೀಡಿದ್ರೆ ಸಾಕು ಬೇರೆ ಯಾವ ಉಚಿತ ಕಾರ್ಯಕ್ರಮಗಳೂ ಬೇಡ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹೆಚ್ಆರ್ ಬಸವರಾಜಪ್ಪನವರು ಮಾತನಾಡಿ ಇಂದಿನ ಅಧಿಕಾರ ವ್ಯವಸ್ಥೆ ಬ್ರಷ್ಟಾಚಾರದಿಂದ ಕೂಡಿದ್ದು ಅದರ ನಿರ್ಮೂಲನೆ ಹೊರತು ಸ್ವಾತಂತ್ರ್ಯಕ್ಕೆ ಯಾವುದೇ ಬೆಲೆ ಇಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದ ಮತ್ತೋರ್ವ ಅತಿಥಿಗಳಾಗಿ ಭಾಗವಹಿಸಿದ್ದ ಡಾ. ಹಸಿನಾ ವಿಜಯ ಶ್ರೀಧರ್ ಮತ್ತು ಚಿದಾನಂದ ಮಾತನಾಡಿ ಸ್ವಾತಂತ್ರದ ಆಶಯಗಳು ಈಡೇರಬೇಕಾದರೆ ಸಂವಿಧಾನ ಬದ್ಧ ಹಕ್ಕುಗಳನ್ನು ಯಶಸ್ವಿಯಾಗಿ ಬಳಕೆ ಮಾಡಿಕೊಳ್ಳುವುದು ಮತ್ತು ಜಾತೀಯತೆಯ ಪಿಡುಗನ್ನು ತೊಲಗಿಸುವುದು ಅತ್ಯಂತ ಅವಶ್ಯಕ ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಡಾ. ಕೃಷ್ಣ ಎಸ್ ಭಟ್ ಹಿರಿಯ ಸಮಾಜವಾದಿ ಪಿ ಪುಟ್ಟಯ್ಯ ಪರಿಸರ ನಾಗರಾಜ್ ಮುಂತಾದವರು ಇದ್ದರು ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಕಾರ್ಯಕ್ರಮವನ್ನು ನಿರೂಪಿಸಿ ಎಲ್ಲರನ್ನೂ ಸ್ವಾಗತಿಸಿದರು. ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮುಖ್ಯಸ್ಥರಾದ ಕೆ ಸಿ ಬಸವರಾಜ್ ಅವರು ಈ ಚಿಂತನ ಮಂಥನದ ಉದ್ದೇಶಗಳನ್ನು ತಿಳಿಸಿ ಇದೊಂದು ಸಮಾಜಕ್ಕೆ ನೀಡುವ ದಿಕ್ಸೂಚಿ ಎಂದು ಹೇಳಿದರು ಮುಂದೆಯೂ ಸಹ ಈ ರೀತಿಯ ಸಮಾಜದ ಸಮಸ್ಯೆಗಳ ಬಗ್ಗೆ ಅರೋಗ್ಯ ಚಿಂತನ ಮಂಥನ ಕಾರ್ಯಕ್ರಮಗಳನ್ನು ನಡೆಸಲಾಗುವುದೆಂದು ಪ್ರಕಟಿಸಿದರು.
ಕಾನೂನು ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ದೀಪ ಅವ್ರು ಮಾತನಾಡಿ ಇಂತಹ ಕಾರ್ಯಕ್ರಮಗಳಲ್ಲಿ ಯುವಕರು ಹೆಚ್ಚಾಗಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.
ಶಿವಮೊಗ್ಗ ಕೆ ಲೈ ವ್ ನ್ಯೂಸ್ ಪ್ರಧಾನ ಸಂಪಾದಕ ಡಾ.ಸುಧೀಂದ್ರ ಅವರು ಮಾತನಾಡಿ
ಸ್ವಾತಂತ್ರ್ಯದ ಅವಕಾಶಗಳು ಮತ್ತು ಪಡೆಯಬೇಕಾದ ಹಕ್ಕಿನ ಜಾರಿಗೆ ಬಗ್ಗೆ ನಾಗರಿಕರಾದ ನಮಗೆ ಸೂಕ್ತ ಬಳಕೆಮಾಡಿಕೊಳ್ಳುತ್ತಿಲ್ಲ. ಮಾಧ್ಯಮಗಳ ಮೂಲಕ ಈ ಬಗ್ಗೆ ಜಾಗೃತಿ ಆಗುತ್ತಿದೆ. ಅದನ್ನು ಕೇವಲ ಸರ್ಕಾರದ ಮಾಧ್ಯಮಗಳ ಮೂಲಕ ಆದರೆ ಸಾಲದು. ಖಾಸಗಿ ಮಾಧ್ಯಮಗಳು ಈ ದಿಸೆಯಲ್ಲಿ ಪರಿಣಾಮಕಾರಿ ಪಾತ್ರ ವಹಿಸುತ್ತಿಲ್ಲ. ನಾಗರಿಕರೂ ಜಾಣಮೌನ ತಾಳಿರುವುದು ಸರಿಯಲ್ಲ. ಮಾಧ್ಯಮಗಳು ನಮಗೇನು ನೀಡಬೇಕು ಎಂಬುದನ್ನ ಪ್ರತಿಯಾಗಿ ಪ್ರಶ್ನಿಸುವ ಸ್ವಾತಂತ್ರ್ಯ ಸಾರ್ಥಕಪಡಿಸಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಸರ್ವೋದಯ ಮಂಡಳಿ ಅಧ್ಯಕ್ಷರಾದ ಆರ್ ಮನೋಹರ್ ಮತ್ತು ಕಾರ್ಯದರ್ಶಿ ಜಿ ವಿಜಯಕುಮಾರ್ ಅವರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು ವೇದಿಕೆಯಲ್ಲಿ ಬಿಎಸ್ ಸಿಮೋಲಿ ಅವರು ಸಹ ಉಪಸ್ಥಿತರಿದ್ದರು.
ಈ ವಿಚಾರ ಸಂಕಿರಣದಲ್ಲಿ ನಗರದ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಆಸಕ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪರಿಸರವಾದಿ ಬಿಎಂ ಕುಮಾರಸ್ವಾಮಿ ಅವರು ಮಾತನಾಡಿ ದೇಶದ ಬಹುತೇಕ ಜನರು ಭ್ರಷ್ಟಾಚಾರದ ಸುಲಿಗೆ ಸಿಲುಕಿದ್ದಾರೆ ಸಾಮಾಜಿಕ ಜವಾಬ್ದಾರಿ ಮರೆಯಾಗಿದೆ ಶಿಕ್ಷಣ ಕ್ಷೇತ್ರ ಕುಲುಷಿತವಾಗಿದೆ ಹಣ ಮಾಡುವುದೇ ಮುಖ್ಯ ಉದ್ದೇಶ ಎಂಬ ತೀರ್ಮಾನಕ್ಕೆ ಬರಲಾಗಿದೆ ಇವೆಲ್ಲವುಗಳನ್ನು ತೊಡೆದು ಹಾಕಲು ಆಗಾಗ್ಗೆ ಇಂತಹ ವಿಚಾರ ಸಂಕೀರ್ಣಗಳು ಜನರ ಮನಸ್ಸನ್ನು ಪರಿವರ್ತಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
