Sunday, August 23, 2026
Sunday, August 23, 2026

ದೇಶದ ಜಿ ಡಿ ಪಿ ಯಲ್ಲಿ ಆಹಾರೋತ್ಪಾದನಾ ರಂಗದ ಕೊಡುಗೆ ಗಣನೀಯ- ಡಾ.ಹೆಚ್.ಬಿ.ಮಂಜುನಾಥ್

Date:

ದೇಶದ ಜಿಡಿಪಿ ಅಂದರೆ ನಿವ್ವಳ ಆಂತರಿಕ ಉತ್ಪಾದನೆಯಲ್ಲಿ ಆಹಾರೋತ್ಪಾದನಾ ರಂಗದ ಕೊಡುಗೆ ಮಹತ್ತರವಾಗಿದೆ ಎಂದು ಹಿರಿಯ ಪತ್ರಕರ್ತ ಡಾ. ಎಚ್.ಬಿ. ಮಂಜುನಾಥ ಹೇಳಿದರು.

ಅವರಿಂದು ನಗರದ ಸುಪ್ರಸಿದ್ಧ ಮೋತೀಸ್ ಬೇಕರಿ ಉತ್ಪಾದನಾ ಘಟಕದಲ್ಲಿ ಏರ್ಪಾಡಾಗಿದ್ದ ಭಾರತದ 80ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ನಮ್ಮ ದೇಶದ ಜಿಡಿಪಿ ಅಭಿವೃದ್ಧಿ ದರವು 6.8 ರಿಂದ 7.2 ರವರೆಗೆ ಇದ್ದು ಇದು ಅಮೆರಿಕಾ ಚೀನಾಗಳಿಗಿಂತ ಮುಂದಿದೆ, ದೇಶದ ಕೈಗಾರಿಕಾ ರಂಗದ ಸಾಧನೆಯಲ್ಲಿ ಉದ್ಯಮಿಗಳ ಪಾತ್ರ ಎಷ್ಟು ದೊಡ್ಡದೋ ಅಷ್ಟೇ ಕಾರ್ಮಿಕರ ಪಾತ್ರವೂ ಮುಖ್ಯವಾಗಿದೆ ಎಂದರಲ್ಲದೆ ಕಾರ್ಮಿಕ ಬಂಧುಗಳ ಹಾಗೂ ಅವರ ಕುಟುಂಬ ವರ್ಗದವರಿಗೂ ಸ್ವಾತಂತ್ರೋತ್ಸವದ ಶುಭಾಶಯ ಹೇಳಿದರು. ಮೋತಿ ಗುರುಪ್ರಸಾದ್, ಸನತ್ ಕುಮಾರ್, ಉತ್ಪಾದನಾ ಘಟಕದ ಹಿರಿಯ ನೌಕರ ತಿಮಣ್ಣ, ಬಸವರಾಜ್ ಲೆಕ್ಕದ್, ಷಣ್ಮುಖ್ ಮುಂತಾದವರು ಉಪಸ್ಥಿತರಿದ್ದು ದಿವ್ಯಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಮಿಕರು ರಾಷ್ಟ್ರ ಪ್ರೇಮದೊಂದಿಗೆ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Karnataka Nataka Academy 2026-27 ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ‌ ಪ್ರಶಸ್ತಿ‌ ಘೋಷಣೆ

Karnataka Nataka Academy ಕರ್ನಾಟಕ ನಾಟಕ ಅಕಾಡೆಮಿಯ 2026-27ನೇ ಸಾಲಿನ ಜೀವಮಾನ...

Paripurna Educational Charitable Trust ನಿತ್ಯ ದೇಹಕ್ಕೆ ಅಗತ್ಯವಿರುವಷ್ಟು ನೀರು ಸೇವಿಸಿ. ಸದೃಢ ಆರೋಗ್ಯ ಸಾಧಿಸಿ- ಸತೀಶ್ ಚಂದ್ರ

ಮಕ್ಕಳು ಪ್ರತಿ ದಿನ ದೇಹಕ್ಕೆ ಅಗತ್ಯ ಇರುವಷ್ಟು ನೀರು ಕುಡಿಯಬೇಕು. ಅಗತ್ಯವಿರುವಷ್ಟು...