Wednesday, September 23, 2026
Wednesday, September 23, 2026

ಕಾರಣಗಿರಿಯಲ್ಲಿ ಒಂಭತ್ತು ಮಾಧ್ಯಮ ಸಾಧಕರಿಗೆ ನಾರದ ಪುರಸ್ಕಾರ 2026 ಪ್ರಶಸ್ತಿ ಪ್ರದಾನ‌

Date:

ಪತ್ರಿಕೆಗಳು ದೇಶ ಮೊದಲು ಎಂಬ ಧ್ಯೇಯವುಳ್ಳವಾಗಿರಬೇಕು. ಎಂತಹ ಕಠಿಣ ಪ್ರಸಂಗ ಬಂದರೂ ದೇಶಾಭಿಮಾನ ಬಿಟ್ಟುಕೊಡಬಾರದು. ಸಾಮಾಜಿಕ ಪಿಡುಗುಗಳನ್ನ ನಿಷ್ಠುರವಾಗಿ ಬಯಲಿಗೆಳೆಯಬೇಕು. ಎಂದು ಕಾರಣಗಿರಿ ಕಲಾದರ್ಶನ ಪತ್ರಿಕೆಯ ಪ್ರಧಾನ ಸಂಪಾದಕ ಡಾ.ಹಾದಿಗಲ್ಲು ಲಕ್ಮೀನಾರಾಯಣ ಹೇಳಿದ್ದಾರೆ. ಹೊಸನಗರ ತಾಲ್ಲೂಕಿನ ಕಾರಣಗಿರಿಯಲ್ಲಿ ಗಾಮಭಾರತಿ ಟ್ರಸ್ಟ್, ರಾಷ್ಟ್ರೋತ್ಥಾನ ಬಳಗ ಹಾಗೂ ಕಾರಣಗಿರಿ ಕಲಾದರ್ಶನ ಪತ್ರಿಕೆಯು ಸಂಯುಕ್ತವಾಗಿ ಏರ್ಪಡಿಸಿದ್ದ ಮಹರ್ಷಿ ನಾರದ ಪುರಸ್ಕಾರ-2026 ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥ ಹಾಗೂ ಕೆ ಲೈವ್.ನ್ಯೂಸ್ ಪೋರ್ಟಲ್ ನ ಪ್ರಧಾನ ಸಂಪಾದಕಡಾ.ಸುಧೀಂದ್ರ,
, ಶಿವಮೊಗ್ಗ ” ಹೊಸ ದಿಗಂತ” ಸ್ಥಾನಿಕ ಸಂಪಾದಕ ವಾದಿರಾಜ ಕಮರೂರು, ಶಿರಸಿಯ ಕನ್ನಡ ನ್ಯೂಸ್ ಅಂತರ್ಜಾಲ
ಸಂಪಾದಕ ರಘುಪತಿ ಯಾಜಿ, ಖ್ಯಾತ ಅಂಕಣಕಾರ ಡಾ.ಗುರುರಾಜ ಪೋಶೆಟ್ಟಿಹಳ್ಳಿ,
ಸಂಪೆಕಟ್ಟೆಯ ಹಿರಿಯ ಪತ್ರಿಕಾ ವರದಿಗಾರ ಗಣಪತಿ ಪಂಡಿತ್, ಟಿ.ವಿ.ವರದಿಗಾರ್ತಿ ಶೈಲಜಾ ಗೊರ್ನಮನೆ, ಪರಿಸರ ಪತ್ರಕರ್ತರಾದ ಬನವಾಸಿಯ ರಘುನಂದನ ಭಟ್ ನರೂರು. ವರದಹಳ್ಳಿಯ ಶ್ರೀಧರ ಸಂದೇಶ ಪತ್ರಿಕೆಯ ಸಂಪಾದಕ ಗಜಾನನ ಭಟ್ ರೇವಣಕಟ್ಟಾ, ಮಂಗಳೂರಿನ ಹೊಸದಿಗಂತ ಪ್ರಧಾನ ವರದಿಗಾರ ಸುರೇಶ್ ಡಿ ಪಳ್ಳಿ ಇವರುಗಳು ನಾರದ ಪುರಸ್ಕಾರ – 2026 ಪ್ರಶಸ್ತಿಗೆ ಭಾಜನರಾಗಿ
ಸನ್ಮಾನ ಸ್ವೀಕರಿಸಿದರು.

ಮಲೆನಾಡಿನ ಹೊದಿಕೆಯಲ್ಲಿ ಹುದುಗಿರುವ ಕಾರಣಗಿರಿ, ಸೋನೆಮಳೆಯ ತಂಪಿನಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಅಭಿಮಾನಿಗಳಿಗೆ ವಿಶೇಷ ಕಾರ್ಯಕ್ರಮ ಮನಸೆಳೆಯಿತು. ಶ್ರೀಸಿದ್ಧಿವಿನಾಯಕ ದೇಗುಲದ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ
ಕಾರಣಗಿರಿ ಕಲಾದರ್ಶನ ಪತ್ರಿಕೆಯ ಸಂಪಾದಕ ಹನಿಯ ರವಿ ಮಾತನಾಡಿದರು.
ಕಲಾದರ್ಶನ ಪತ್ರಿಕೆ ನಿಲ್ಲುವ ಸ್ಥಿತಿ ಬಂದಾಗ ಕಾರಣಗಿರಿಯ ಅಭಿಮಾನಿಗಳು ತುಂಬು ಮನಸ್ಸಿನಿಂದ ಅದನ್ನ ಬೆಳೆಸಿ ಪೋಷಿಸಿದ್ದೇವೆ.
ಲಾಭದ ಪ್ರತಿಫಲಾಪೇಕ್ಷೆಯಿಲ್ಲದೇ ನಡೆಯುತ್ತಿರುವ ಅಪರೂಪದ ಪತ್ರಿಕೋದ್ಯಮ ಇಲ್ಲಿ ರೂಪುಗೊಂಡಿದೆ. ಸಹೃದಯರು ಚಂದಾದಾರರಾಗಿ ಈ ಕಲಾದರ್ಶನ ಪತ್ರಿಕೆಗೆ ಬೆಂಬಲ ನೀಡಬೇಕೆಂದು ಕೋರಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಪ್ರಾಂತ್ಯ ಪ್ರಚಾರ ಪ್ರಮುಖರಾದ ಅರುಣ್ ಕುಮಾರ್ ಮುಖ್ಯ ಅಭ್ಯಾಗತರಾಗಿ ಆಗಮಿಸಿದ್ದರು. ಮಹರ್ಷಿ ನಾರದರು ,ಪ್ರಥಮ ಸುದ್ದಿ ವಾಹಕರಾಗಿ ನಮ್ಮ ಪೌರಾಣಿಕ ಜಗತ್ತಿನಲ್ಲಿನಲ್ಲಿದ್ದ ಒಂದು ಆಧ್ಯಾತ್ಮಿಕ ಶಕ್ತಿ. ಅವರ ಹೆಸರಲ್ಲಿ ಪುರಸ್ಕಾರ ನೀಡುವ ಸಂಪ್ರದಾಯ ಬಹಳ ಉಚಿತವಾಗಿದೆ ಎಂದು ಅರುಣ್ ಕುಮಾರ್ ನುಡಿದರು.

ನಾರದ ಪುರಸ್ಕಾರ ಪಡೆದ ಮಹನೀಯರೆಲ್ಲರೂ ತಮ್ಮ ಅನಿಸಿಕೆ ಹಂಚಿಕೊಂಡರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ: ವಿದ್ಯಾರ್ಥಿಗಳೊಂದಿಗೆ ಸಂವಾದ

B.Y. Raghavendra ​ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ...

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ವಾರ್ಷಿಕ ಮಹಾಸಭೆ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ...

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...