Sunday, October 18, 2026
Sunday, October 18, 2026

ಅಮೇಜಾನ್ ನಿಂದ ಭಾರತಕ್ಕೆ ಅಗೌರವ: ಟ್ವಿಟ್ಟಿಗರ ಆಕ್ರೋಶ

Date:

ದೇಶದ ಅತ್ಯಂತ ದೊಡ್ಡ ಆನ್ಲೈನ್ ಶಾಪಿಂಗ್ ಸಂಸ್ಥೆಯಾದ ಅಮೇಜಾನ್ ತ್ರಿವರ್ಣ ಧ್ವಜದ ಮಾದರಿಯಲ್ಲಿರುವ ಮಾಸ್ಕ್ ಸೇರಿದಂತೆ ರಾಷ್ಟ್ರಧ್ವಜ ಇರುವಂತಹ ಅನೇಕ ಅನೇಕ ಉತ್ಪನ್ನಗಳನ್ನು ಆನ್ಲೈನ್ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಅವಕಾಶ ನೀಡಿರುವುದರಿಂದ ಮತ್ತೊಮ್ಮೆ ವಿವಾದಕ್ಕೆ ಗುರಿಯಾಗಿದೆ.

ಧ್ವಜದ ಚಿತ್ರ ಮುದ್ರಿಸಲಾದ ಟೀಶರ್ಟಗಳು, ಮಾಸ್ಕ್ ಗಳು, ಕೀ ಚೈನ್ ಗಳು, ಚಾಕ್ಲೆಟ್ ಕವರ್ ಗಳು, ಸಿರಾಮಿಕ್ ಮಗ್ ಗಳನ್ನು ಮಾರಾಟಕ್ಕೆ ಇಡಲಾಗಿದೆ. ಇದು ರಾಷ್ಟ್ರಧ್ವಜಕ್ಕೆ ಮಾಡುವ ಅವಮಾನ ಎಂದು ನೆಟ್ಟಿಗರೊಬ್ಬರು ಟ್ವಿಟರ್ ಮೂಲಕ ರಾಷ್ಟ್ರಧ್ವಜದ ಚಿತ್ರವಿರುವ ಎಲ್ಲಾ ಉತ್ಪನ್ನಗಳನ್ನು ಅಮೆಜಾನ್ ಹಿಂಪಡೆಯಬೇಕು. ಬೇಷರತ್ತು ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದಾರೆ.

ಅಮೇಜಾನ್ ಹೀಗೆ ವಿವಾದ ಸೃಷ್ಟಿಸುತ್ತಿರುವುದು ಇದೇ ಮೊದಲ ಬಾರಿಯಲ್ಲ. 2019ರಲ್ಲಿ ಇಂಥದ್ದೇ ಒಂದು ಕೆಲಸ ಮಾಡಿತ್ತು. ಹಿಂದು ದೇವತೆಗಳು, ದೇವರ ಚಿತ್ರ ಮುದ್ರಿಸಲಾದ ಟಾಯ್ಲೆಟ್​ ಸೀಟ್​ ಕವರ್​ಗಳು, ಬಾಗಿಲು ಮ್ಯಾಟ್​​ಗಳನ್ನು ಮಾರಾಟಕ್ಕಿಟ್ಟಿತ್ತು. ಆಗಲೂ ಸಹ ಅಮೇಜಾನ್​ ಬಹಿಷ್ಕರಿಸಿ ಎಂಬ ಅಭಿಯಾನ ಇಂಟರ್​​ನೆಟ್​​ನಲ್ಲಿ ನಡೆದಿತ್ತು. ಅಮೇಜಾನ್​ ಕ್ಷಮೆ ಕೋರಿತ್ತು. ಅದಕ್ಕೂ ಮೊದಲು 2017ರಲ್ಲಿ ಭಾರತದ ರಾಷ್ಟ್ರಧ್ವಜದ ಚಿತ್ರವಿರುವ ಬಾಗಿಲಿಗೆ ಹಾಕುವ ಮ್ಯಾಟ್​ಗಳು ಅಮೇಜಾನ್​​ನ ಕೆನಡಾ ವಿಭಾಗದ ವೆಬ್​ಸೈಟ್​​ನಲ್ಲಿ ಮಾರಾಟಕ್ಕೆ ಇದ್ದವು. ಆಗಲೂ ಸಹ ಬಹಿಷ್ಕಾರ ಅಭಿಯಾನ ನಡೆದಿತ್ತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

World Mental Health Day ಶಿವಮೊಗ್ಗದಲ್ಲಿ ವಿಶ್ವ ಮಾನಸಿಕ ದಿನಾಚರಣೆ ಜಾಗೃತಿ ಜಾಥಾ

World Mental Health Day ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಅಂಗವಾಗಿ...

Mysuru Dasara ದಸರಾ ಪುಸ್ತಕ ಮೇಳ: ಪುಸ್ತಕಗಳ ವೀಕ್ಷಿಸಿದ ಅಭಿನವ ಗವಿ ಸಿದ್ದೇಶ್ವರ ಸ್ವಾಮೀಜಿ

Mysuru Dasara ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ರ ಉದ್ಘಾಟನೆಮಾಡಿದ...

Mysuru Dasara ಮೈಸೂರು ದಸರಾ ವಿದ್ಯುತ್ ದೀಪಾಲಂಕಾರಕ್ಕೆ ಸಚಿವ ಜಾರ್ಜ್ ಚಾಲನೆ

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ವಿದ್ಯುತ್‌ ದೀಪಾಲಂಕಾರಕ್ಕೆ...