ರಾಯಲ್ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಗುರುಪೂರ್ಣಿಮೆಯನ್ನು ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಯಿತು, ಈ ಕಾರ್ಯಕ್ರಮದಲ್ಲಿ ಎಲ್ಲ ವಿದ್ಯಾರ್ಥಿಗಳು ಗೌರವದಿಂದ ತಮ್ಮ ಪೋಷಕರ ಪಾದ ಪೂಜೆಯನ್ನು ಮಾಡಿದರು. ಪ್ರತಿಯೊಂದು ಮಗುವಿಗೂ ತಂದೆ ತಾಯಿಯಂದಿರೆ ಮೊದಲ ಗುರುಗಳು,ಗುರುವಿನ ಆಶೀರ್ವಾದದೊಂದಿಗೆ ತಮ್ಮ ತಂದೆ ತಾಯಿಯರ ಆಶೀರ್ವಾದವು ಬಹುಮುಖ್ಯ, ಜೊತೆಗೆ ಸಂಸ್ಕೃತಿ ಸಂಪ್ರದಾಯದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ, ಪ್ರತಿ ವರ್ಷವೂ ಶಾಲೆಯಲ್ಲಿ ಗುರುಪೂರ್ಣಿಮೆಯೆಂದು ಪೋಷಕರ ಪಾದ ಪೂಜೆಯನ್ನು ಮಕ್ಕಳಿಂದ ಮಾಡಿಸಲಾಗುತ್ತದೆ.
ಈ ಕಾರ್ಯಕ್ರಮದಲ್ಲಿ ಶಾಲೆಯ ಕಾರ್ಯದರ್ಶಿಗಳಾದ ಪೂಜಾ ನಾಗರಾಜ್ ಪರಿಸರ ಮೇಡಂ ಮತ್ತು ಶಾಲೆಯ ಪ್ರಾಂಶುಪಾಲರಾದ ಮಂಜುನಾಥ್ ಎಲ್ ಎನ್, ಹಾಗೂ ಶಿಕ್ಷಕ ವೃಂದದವರು, ಪೋಷಕರು, ಉಪಸ್ಥಿತರಿದ್ದರು.
