Monday, July 27, 2026
Monday, July 27, 2026

ಶಿವಮೊಗ್ಗದಲ್ಲಿ ನಾಗರಿಕ ಸೌಲಭ್ಯಗಳ ನಿರ್ಲಕ್ಷ್ಯ: ಹಿತರಕ್ಷಣಾ ವೇದಿಕೆಯಿಂದ ಶಾಸಕರಿಗೆ ಮನವಿ ಪತ್ರ

Date:

ಶಿವಮೊಗ್ಗ ನಗರದ ವಿವಿಧ ನಾಗರಿಕ ಸಮಸ್ಯೆಗಳ ಕುರಿತು ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟವು ಸರ್ಕಾರ ಮತ್ತು ಜಿಲ್ಲಾಡಳಿತದ ಗಮನವನ್ನು ಮತ್ತೊಮ್ಮೆ ಸೆಳೆದಿದೆ. ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಒಕ್ಕೂಟ ಆರೋಪಿಸಿದೆ.

ಈ ಹಿಂದೆ ಸಭೆ ನಡೆಸುವುದಾಗಿ ಭರವಸೆ ನೀಡಿದ್ದರೂ, ಇದುವರೆಗೆ ಯಾವುದೇ ಸಭೆ ನಿಗದಿಯಾಗಿಲ್ಲ ಎಂದು ಒಕ್ಕೂಟ ಅಸಮಾಧಾನ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಲಿಖಿತ ಮನವಿ ಸಲ್ಲಿಸಿ, ನಗರದ ಹಲವು ಪ್ರಮುಖ ಸಮಸ್ಯೆಗಳ ಪಟ್ಟಿಯನ್ನು ಜಿಲ್ಲಾಡಳಿತದ ಗಮನಕ್ಕೆ ತಂದಿದೆ.

ಒಕ್ಕೂಟವು ಪ್ರಸ್ತಾಪಿಸಿರುವ ಪ್ರಮುಖ ಸಮಸ್ಯೆಗಳೆಂದರೆ, ನಗರದ ಅಗತ್ಯಕ್ಕೆ ತಕ್ಕ ಹೆಚ್ಚಿನ ಸಾಮರ್ಥ್ಯದ ನೀರು ಶುದ್ಧೀಕರಣ ಘಟಕಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸದಿರುವುದು, ₹300 ಕೋಟಿಗೂ ಅಧಿಕ ವೆಚ್ಚದಲ್ಲಿ ಕಾಮಗಾರಿ ನಡೆದಿದ್ದರೂ ಹಳೆಯ ವಿದ್ಯುತ್ ಕಂಬಗಳನ್ನು ತೆರವುಗೊಳಿಸದಿರುವುದು, ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಲಾದ ಸ್ಮಾರ್ಟ್ ಶೌಚಾಲಯಗಳು ಬಳಕೆಗೆ ಬಾರದಿರುವುದು, ಪಾಲಿಕೆಯಲ್ಲಿ ‘ಖಾತೆ ಬದಲಾವಣೆ ಶುಲ್ಕ’ ಹೆಸರಿನಲ್ಲಿ ನಾಗರಿಕರಿಂದ ಅನಗತ್ಯ ಶುಲ್ಕ ವಸೂಲಿ ನಡೆಯುತ್ತಿರುವುದು, ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳ ಸಮರ್ಪಕ ನಿರ್ವಹಣೆ ಇಲ್ಲದಿರುವುದು ಹಾಗೂ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರವು ರಸ್ತೆಯಲ್ಲಿ ನಿರ್ಮಿಸಿರುವ ಶೆಡ್‌ಗಳ ಕುರಿತು ಕ್ರಮ ಕೈಗೊಳ್ಳದಿರುವುದು ಸೇರಿವೆ.

ಈ ಎಲ್ಲ ವಿಚಾರಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಿ, ಸಮಸ್ಯೆಗಳ ಪರಿಹಾರಕ್ಕೆ ಕೈಗೊಳ್ಳುವ ಕ್ರಮಗಳು ಹಾಗೂ ಅವುಗಳಿಗೆ ನಿಗದಿಪಡಿಸುವ ಕಾಲಮಿತಿಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಒಕ್ಕೂಟ ಆಗ್ರಹಿಸಿದೆ.

ಸಮಸ್ಯೆಗಳಿಗೆ ಶೀಘ್ರ ಪರಿಹಾರ ನೀಡಬೇಕು. ಇಲ್ಲವಾದರೆ ಸಂಬಂಧಪಟ್ಟ ಅಧಿಕಾರಿಗಳ ವೈಫಲ್ಯಕ್ಕೆ ಹೊಣೆಗಾರಿಕೆಯನ್ನು ನಿಗದಿಪಡಿಸಬೇಕು ಎಂದು ಒತ್ತಾಯಿಸಿರುವ ಒಕ್ಕೂಟ, ಒಂದು ವಾರದೊಳಗೆ ಸರ್ಕಾರದಿಂದ ಸ್ಪಷ್ಟ ಭರವಸೆ ಸಿಗದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಈ ಮನವಿಗೆ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಸಂತಕುಮಾರ್ ಸಹಿ ಹಾಕಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Club of Shivamogga ವೈದ್ಯರು ಉಚಿತವಾಗಿ ನೀಡುವ ಸಲಹಾ ಸೌಲಭ್ಯ ಬಳಸಿಕೊಳ್ಳಿ- ಎನ್.ಗೋಪಿನಾಥ್

Rotary Club of Shivamogga ವೈದ್ಯರು ಉಚಿತವಾಗಿ ನೀಡುತ್ತಿರುವ ಸಲಹೆಗಳನ್ನು ಬಳಸಿಕೊಳ್ಳಿ...

Klive Special Article ತೆರಿಗೆಯು ಜೇನ್ನೊಣವು ಹೂವಿನಿಂದ ಜೇನು ಸಂಗ್ರಹಿಸುವಂತೆ ಇರಬೇಕು

ವಿಶೇಷ ಲೇಖನ: ಆರ್.ಮನೋಹರ್.ತೆರಿಗೆ ಸಲಹೆಗಾರ. ಶಿವಮೊಗ್ಗ. Klive Special Article ಆದಾಯ ತೆರಿಗೆ...

S.N. Channabasappa ನೀಟ್ ಹೆಸರಿನಲ್ಲಿನ ಕಾನೂನು ಭಂಜಕರನ್ನ ಜೈಲಿಗಟ್ಟುವ ಧೈರ್ಯವಿಲ್ಲದ ಗೃಹಸಚಿವ ಪ್ರಿಯಾಂಕ ಖರ್ಗೆ- ಶಾಸಕ ಚೆನ್ನಿ ಆಕ್ರೋಶ

S.N. Channabasappa "ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದುಬಿದ್ದಿದೆ. ನೀಟ್...