Tuesday, July 21, 2026
Tuesday, July 21, 2026

ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಶ್ರೀಮತಿ ಚನ್ನಮ್ಮ ನಿಧನ

Date:

ಮಾಜಿ ಪ್ರಧಾನಿ ,ರಾಜ್ಯದ ಹಿರಿಯ ರಾಜಕಾರಣಿ ಎಚ್.ಡಿ.ದೇವೇಗೌಡರ ಧರ್ಮಪತ್ನಿ ಶ್ರೀಮತಿ ಚನ್ನಮ್ಮನವರು ನಿಧನರಾಗಿದ್ದಾರೆ.
ವಯೋಸಹಜ ಉಸಿರಾಟದ ತೊಂದರೆಯಿಂದಾಗಿ ಅವರನ್ನ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು . ವೈದ್ಯಕೀಯ ನೆರವಿಗೆ ಪ್ರತಿಸ್ಪಂದಿಸದೆ ಶ್ರೀಮತಿ ಚನ್ನಮ್ಮನವರು ಅಸು ನೀಗಿದರು.
ಅವರಿಗೆ 89 ವರ್ಷ ವಯಸ್ಸಾಗಿತ್ತು.

ಕರ್ನಾಟಕದ ಪ್ರಥಮ ರಾಜಕಾರಣಿ ಹಿರಿಯ ದೇವೇಗೌಡರು ಯಾವುದೇ ಅಧಿಕಾರ,
ಪ್ರತಿಷ್ಠಿತ ಸ್ಥಾಮಾನಗಳನ್ನ ಹೊಂದಿದ್ದರೂ ಶ್ರೀಮತಿ ಚನ್ನಮ್ಮನವರು ತಮ್ಮ ಸರಳತನದಿಂದಲೇ ಬಾಳುವೆ ಮಾಡಿದವರಾಗಿದ್ದರು.
ಉನ್ನತ ಹುದ್ದೆಗೆ ಬರುವ ಮುಂಚಿನದಿನಗಳಲ್ಲಿ
ಗುತ್ತಿಗೆದಾರರರಾಗಿದ್ದ ದೇವೇಗೌಡರಿಗೆ ನೈತಿಕ ಬೆಂಬಲವಾಗಿ ನಿಂತಿದ್ದರು. ಆರು ಮಕ್ಕಳತಾಯಿ, ತುಂಬು ಕುಟುಂಬದಲ್ಲಿ ಮಕ್ಕಳೆಲ್ಲರಿಗೂ ಸಮನಾದ ಮಮತೆ ತೋರಿಸಿ ಬೆಳೆಸಿದರು.
ಸಾಮಾಜಿಕವಾಗಿ ಎಲ್ಲೂ ಪ್ರತಿಷ್ಠೆ ಪ್ರದರ್ಶನಗೈಯದೇ ಎಲೆಮರೆಯಕಾಯಂತಿದ್ದರು. ರಾಜ್ಯದ ಹಲವಾರು ರಾಜಕಾರಣಿಗಳಿಗೆ ಅವರು ಉಣ್ಣಲಿಕ್ಕಿದ “ತಾಯಿ” ಯೂ ಆಗಿದ್ದರು.ಮನೆಗೆ ಬಂದವರಿಗೆ ಆಶನವಿಕ್ಕುವ ಅವರ ಸ್ವಭಾವ ಮಾದರಿಯಾಗಿತ್ತು.

ಚನ್ನಮ್ಮನವರ ನಿಧನದ ಸುದ್ದಿ ತಿಳಿದ ಕೂಡಲೇ ದೇವೇಗೌಡರ ಮತ್ತು ಚನ್ನಮ್ಮನವರ ಅಭಿಮಾನಿಗಳು ಅವರ ಅಂತಿಮ ದರ್ಶನಕ್ಕೆ ಆಗಮಿಸಿ ಶ್ರದ್ಧಾಂಜಲಿ‌ ಅರ್ಪಿಸಿದರು.
ಕೈಲಾಸವಾಸಿಗಳಾದ ಚನ್ನಮ್ಮನವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಜುಲೈ20 ರಂದು ನಡೆಯಲಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಬರದ ನೆರಳಿನಲ್ಲಿ ಬದುಕು ...

Klive Special Article ಇತ್ತೀಚಿನ ದಿನಗಳಲ್ಲಿ ನಮ್ಮ ರಾಜ್ಯದಲ್ಲಿ ತೀವ್ರವಾದ...

Kuvempu University ಉಪನ್ಯಾಸಕ ಹೆಚ್.ಟಿ.ಕರಿಬಸಪ್ಪನವರಿಗೆ ಕುವೆಂಪು ವಿವಿಯಿಂದ ಪಿಎಚ್.ಡಿ ಪದವಿ ಘೋಷಣೆ

Kuvempu University ಕರಿಬಸಪ್ಪ. ಹೆಚ್. ಟಿ ಕನ್ನಡ ಉಪನ್ಯಾಸಕರು ಸರ್ಕಾರಿ ಪದವಿ...