ತೀರ್ಥಹಳ್ಳಿ ತಾಲೂಕು, ಮಳಲೂರು ಗ್ರಾಮ, ಕೇಳೂರು ವಾಸಿ ಕೆ.ಪಿ.ರಾಮಪ್ಪ ಎಂಬ 73 ವರ್ಷದ ವ್ಯಕ್ತಿ ಜು.05 ರಂದು ಮಧ್ಯಾಹ್ನ 1.30 ಗಂಟೆಯ ಸಮಯದಲ್ಲಿ ಮನೆಯಲ್ಲಿ ಯಾರಿಗೂ ಹೇಳದೇ ಹೋಗಿದ್ದು, ಈವರೆಗೂ ಮನೆಗೆ ವಾಪಾಸ್ಸಾಗಿರುವುದಿಲ್ಲ.
ಕಾಣೆಯಾದ ರಾಮಪ್ಪ 5. 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದು, ಎಡಭಾಗದ ಕಿವಿಯಲ್ಲಿ ರಿಂಗು ಹಾಕಿದ ಸಣ್ಣ ತೂತು ಗುರುತು ಇರುತ್ತದೆ. ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಟಿಶರ್ಟ್ ಮತ್ತು ನೀಲಿ ಚಡ್ಡಿ ಧರಿಸಿರುತ್ತಾರೆ.
ಈ ವ್ಯಕ್ತಿಯ ಬಗ್ಗೆ ಸುಳಿವು ಪತ್ತೆಯಾದಲ್ಲಿ ಶಿವಮೊಗ್ಗ ಎಸ್‌ಪಿ ಕಚೇರಿ -08182-261400, ತೀರ್ಥಹಳ್ಳಿ – 08181 – 220388, ಮಾಳೂರು – 9480803333, ಆಗುಂಬೆ – 9480803314 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ತಿಳಿಸಿದೆ.
ಮಳಲೂರು ಗ್ರಾಮದಿಂದ ಕೆ.ಪಿ.ರಾಮಪ್ಪ ಎಂಬುವರು ನಾಪತ್ತ, ಪೊಲೀಸ್ ಪ್ರಕಟಣೆ
Date:
