Monday, July 13, 2026
Monday, July 13, 2026

ಎಟಿಎಮ್ ವಾಹನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ, ಸಿಬ್ಬಂದಿಗೆ ಸಣ್ಣಪುಟ್ಟ ಗಾಯ

Date:

ಶಿವಮೊಗ್ಗದ ಹೊನ್ನಾಳಿ ಮುಖ್ಯರಸ್ತೆಯಲ್ಲಿ ಸಂಚರಿಸುತ್ತಿದ್ದ ಎಟಿಎಂ ಹಣ ಸಾಗಣೆ ವಾಹನ ಏಕಾಏಕಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ವಾಹನದ ಚಾಲಕ ಸತೀಶ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ.

ಘಟನೆಯ ಮಾಹಿತಿ ತಿಳಿದು 112 ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಆದರೆ, ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಗಾಯಗೊಂಡಿದ್ದ ಚಾಲಕ ಸತೀಶ್ ಅಲ್ಲಿಂದ ಪರಾರಿಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಅಪಘಾತಕ್ಕೀಡಾದ ಎಟಿಎಂ ಕ್ಯಾಶ್ ವ್ಯಾನ್‌ನಲ್ಲಿ ಹಣ ಇತ್ತೇ ಅಥವಾ ಇಲ್ಲವೇ ಎಂಬುದರ ಕುರಿತು ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ಜೊತೆಗೆ, ಚಾಲಕ ಗಾಯದ ನಡುವೆಯೂ ಏಕೆ ಪರಾರಿಯಾದ ಎಂಬುದರ ಹಿಂದಿನ ಕಾರಣವನ್ನು ಪತ್ತೆಹಚ್ಚಲು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಅರ್ಹ ಯುವ ಮತದಾರರು ನೋಂದಣಿ ಪ್ರಕ್ರಿಯೆಯಿಂದ ವಂಚಿತರಾಗದಂತೆ ಜಾಗ್ರತೆವಹಿಸಿ- ಬಿ.ವೈ.ರಾಘವೇಂದ್ರ

B.Y. Raghavendra ಹೊಸೂರು ಮಹಾಶಕ್ತಿಕೇಂದ್ರ ವ್ಯಾಪ್ತಿಯಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ನಿರಂತರ ಜನಸಂಪರ್ಕ...

B. Y. Raghavendra ಕೆರೆ ತುಂಬಿಸಿದ ಏತ ನೀರಾವರಿ: ಉಡುಗಣಿ- ತಾಳಗುಂದ- ಹೊಸೂರು ಗ್ರಾಮಸ್ಥರ ಕಣ್ಣಲ್ಲಿ ಆನಂದ ಭಾಷ್ಪ

B. Y. Raghavendra ಶಿಕಾರಿಪುರ ತಾಲೂಕಿನ ಕೃಷಿ ರಂಗದ ಇತಿಹಾಸದಲ್ಲೇ ಅತ್ಯಂತ...

U.T. Khader ತೀರ್ಥಹಳ್ಳಿ ಸಾರ್ವಜನಿಕ ಆಸ್ಪತ್ರೆಗೆ ಆರೋಗ್ಯ ಸಚಿವ ಖಾದರ್ ಭೇಟಿ: ಪ್ರತೀ ವಾರ್ಡಿನ ರೋಗಿಗಳೊಂದಿಗೆ ಕ್ಷೇಮ ವಿಚಾರಣೆ

U.T. Khader ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಜಯಚಾಮರಾಜೇಂದ್ರ ಸರ್ಕಾರಿ ಆಸ್ಪತ್ರೆಗೆ ಆರೋಗ್ಯ...