Monday, September 21, 2026
Monday, September 21, 2026

ಶಿವಪ್ಪನಾಯಕ ವಾಣಿಜ್ಯ ಸಂಕೀರ್ಣ ಮಳಿಗೆ ಹರಾಜು ಪ್ರಕ್ರಿಯೆ: 34 ವರ್ತಕರಿಗೆ ಮರು ಮಂಜೂರು ಮಾಡಿ- ಕೆ.ಎಸ್ .ಈಶ್ವರಪ್ಪ

Date:

ಶುಭಂ ಹೋಟೆಲ್ ಆವರಣದ ಸಭಾಂಗಣದಲ್ಲಿ ಶಿವಪ್ಪ ನಾಯಕ ಸಂಕೀರ್ಣದ ೩೪ ವರ್ತಕರು ಮಳಿಗೆ ವಿಚಾರವಾಗಿ ಸಭೆ ನಡೆಸಿದರು. ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪನವರ ನೇತೃತ್ವದಲ್ಲಿ ಸಭೆ ನಡೆಯಿತು. ಎಲ್‌ಎಲ್‌ಆರ್ ರಸ್ತೆಯಲ್ಲಿ ಮಹಾನಗರ ಪಾಲಿಕೆ ಯಿಂದ ನಿರ್ಮಿಸಿರುವ ಎರಡು ಅಂತಸ್ತಿನ ಬಿಲ್ಡಿಂಗ್ ಹರಾಜಿಗೆ ಕರೆದಿರುವುದು ವರ್ತಕರಿಗೆ ತಿಳಿದು ಬಂದಿರುವುದರಿಂದ ವರ್ತಕರಿಗೆ ಮೋಸ ಮಾಡಿದಂತಾಗುತ್ತದೆ. ಈ ವಿಚಾರವಾಗಿ 2008ರಲ್ಲಿ ಶಿವಪ್ಪ ನಾಯಕ ಸಂಕೀರ್ಣವನ್ನ ಒಡೆಯುವಾಗ ಆಗಿನ ಆಯುಕ್ತರ ಸಮ್ಮುಖದಲ್ಲಿ ಮುಂದಿನ ದಿನಗಳಲ್ಲಿ ಬೇರೆ ಕಡೆ ಎಲ್ಲೇ ಕಟ್ಟಡ ಕಟ್ಟಿದರೂ ಕೊಡಲು ಒಪ್ಪಿದ್ದರು ಆನಂತರದಲ್ಲಿ ಮತ್ತೊಂದು ಬಾರಿ ನಗರಪಾಲಿಕೆಯಲ್ಲಿ ಶಿವಪ್ಪ ನಾಯಕ ಸಂಕೀರ್ಣದ ವರ್ತಕರಿಗೆ ಕೊಡಲು ತೀರ್ಮಾನಿಸಿದ್ದರು. ಆದರೆ ಇದೀಗ ವರ್ತಕರಿಗೆ ಗೊತ್ತಿಲ್ಲದೆ ಹರಾಜು ಮಾಡುತ್ತಿರುವುದು ಸರಿಯಾದದ್ದಲ್ಲ ಎಂದರು. ಕೆ.ಎಸ್. ಈಶ್ವರಪ್ಪ ನವರು ಮಾತನಾಡಿ ನೆಲಮಳಿಗೆಯಲ್ಲಿ ೩೪ ವರ್ತಕರಿಗೂ ಅವಕಾಶವಿದ್ದು ನಾವೆಲ್ಲರೂ ಸೇರಿ ಯಾವುದೇ ಕಾರಣಕ್ಕೂ ಹರಾಜು ಮಾಡಲು ಅವಕಾಶ ಕೊಡಬಾರದು, ಜೊತೆಗೆ ಆಯುಕ್ತರಿಗೆ ಮುಂದಿನ ದಿನಗಳಲ್ಲಿ ಮುಂಚೆ ಇದ್ದ ೩೪ ವರ್ತಕರಿಗೂ ನೆಲಮಾಳಿಗೆಯ ಮಳಿಗೆಗಳನ್ನು ಕೊಡಿಸಲು ಪ್ರಯತ್ನ ಪಡ್ತೀನಿ ಎಂದು ತಿಳಿಸಿ,ಇದಕ್ಕೆ ನಿಮ್ಮೆಲ್ಲರ ಸಹಕಾರ ಬೇಕೆಂದು ವಿನಂತಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ: ವಿದ್ಯಾರ್ಥಿಗಳೊಂದಿಗೆ ಸಂವಾದ

B.Y. Raghavendra ​ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ...

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ವಾರ್ಷಿಕ ಮಹಾಸಭೆ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ...

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...