Wednesday, June 17, 2026
Wednesday, June 17, 2026

“ಪ್ರಧಾನಿ ಮೋದಿ ಜನಸೇವೆಯ 12 ವರ್ಷ” ಶಾಸಕ ಚೆನ್ನಿ ಅವರ ನೇತೃತ್ವದಲ್ಲಿ “ಬೂತ್ ವಾಸ್ತವ್ಯ” ಅಭಿಯಾನ

Date:

“ಗೌರವಾನ್ವಿತ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿ ಅವರ ನೇತೃತ್ವದ ಕೇಂದ್ರ ಸರ್ಕಾರವು ‘ಜನಸೇವೆ ಮತ್ತು ಪ್ರಗತಿ’ಯ ಭವ್ಯ 12 ವರ್ಷಗಳನ್ನು ಪೂರೈಸಿರುವುದು ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಸಂದರ್ಭವಾಗಿದೆ.

ಸರ್ಕಾರದ ಈ ಜನಕಲ್ಯಾಣ ಯೋಜನೆಗಳನ್ನು ಪ್ರತಿ ಮನೆ ಮನೆಗೆ ತಲುಪಿಸುವುದೇ ನಮ್ಮ ಸಂಘಟನೆಯ ಮೂಲ ಆಶಯವಾಗಿದೆ,” ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಅವರು ತಿಳಿಸಿದ್ದಾರೆ.

ಮೋದಿ ಸರ್ಕಾರದ ಸಾಧನೆಗಳ ಹಿನ್ನೆಲೆಯಲ್ಲಿ ಬಿಜೆಪಿ ಶಿವಮೊಗ್ಗ ನಗರ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿರುವ ವಿಶ್ವಾಸ, ಅಭಿವೃದ್ಧಿ ಹಾಗೂ ಜನಕಲ್ಯಾಣದ ಸಂಭ್ರಮಾಚರಣೆಯ “ಎರಡು ದಿನಗಳ ವಿಶೇಷ ಬೂತ್ ವಾಸ್ತವ್ಯ” ಅಭಿಯಾನದ ಮೊದಲ ದಿನದ ನಿಮಿತ್ತ ನಿನ್ನೆ ಶಾಸಕರು ವಾರ್ಡ್ ನಂಬರ್ 01ರ ಬೂತ್ ಸಂಖ್ಯೆ 26ರ ಅಧ್ಯಕ್ಷರಾದ ಶ್ರೀಮತಿ ಶಾಂತಮ್ಮ ಅವರ ನಿವಾಸದಲ್ಲಿ ಕುಟುಂಬ ಸದಸ್ಯರು ಹಾಗೂ ಕಾರ್ಯಕರ್ತರೊಂದಿಗೆ ವಾಸ್ತವ್ಯ ಹೂಡಿದರು.

ವಿಶೇಷ ಪೂಜೆ ಹಾಗೂ ಸಂವಾದ:
ವಾಸ್ತವ್ಯದ ಆರಂಭಕ್ಕೂ ಮುನ್ನ ಶಾಸಕರು ವಾರ್ಡ್ ನಂಬರ್ 01ರ ಪ್ರಸಿದ್ಧ ಶ್ರೀ ಓಂ ಶಕ್ತಿ ಮತ್ತು ಮುತ್ತು ಮಾರಮ್ಮ ದೇವಸ್ಥಾನಗಳಿಗೆ ಭೇಟಿ ನೀಡಿ, ದೇಶ ಮತ್ತು ನಾಡಿನ ಒಳಿತಿಗಾಗಿ ಕಾರ್ಯಕರ್ತರೊಂದಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ತದನಂತರ ಭವ್ಯ ಮೆರವಣಿಗೆಯ ಮೂಲಕ ವಾಸ್ತವ್ಯದ ಮನೆಗೆ ಭೇಟಿ ನೀಡಿದ ಅವರು, ಆಶ್ರಯ ಬಡಾವಣೆಯ ಮಹಿಳಾ ಪ್ರಮುಖರು ಹಾಗೂ ವಿವಿಧ ಜನಪರ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿ ಕುಂದುಕೊರತೆಗಳನ್ನು ಆಲಿಸಿದರು.

ಬಳಿಕ, ಆಶ್ರಯ ಬಡಾವಣೆಯ ಪ್ರಮುಖರಾದ ಶ್ರೀ ಮಂಜುನಾಥ್ ಅವರ ನಿವಾಸದಲ್ಲಿ ಕ್ಷೇತ್ರದ ವಿಶೇಷ ಗಣ್ಯರು ಹಾಗೂ ಕೀ-ವೋಟರ್ಸ್ (Key Voters) ಜೊತೆ ಶಿವಮೊಗ್ಗ ನಗರದ ಮುಂದಿನ ಸಮಗ್ರ ಪ್ರಗತಿ ಹಾಗೂ ಸಂಘಟನೆಯ ಬಲವರ್ಧನೆ ಕುರಿತು ಮಹತ್ವದ ಸಮಾಲೋಚನೆ ನಡೆಸಲಾಯಿತು.

ಬೂತ್ ಮಟ್ಟದ ಸಂಘಟನಾ ಚರ್ಚೆ:
ಅಭಿಯಾನದ ಮುಂದುವರಿದ ಭಾಗವಾಗಿ ವಾರ್ಡ್ ನಂಬರ್ 02ರ ಬೂತ್ ಸಂಖ್ಯೆ 27ರ ಬೂತ್ ಅಧ್ಯಕ್ಷರಾದ ಶ್ರೀ ಶಿವಶಂಕರ್ ಅವರ ನಿವಾಸಕ್ಕೂ ಭೇಟಿ ನೀಡಿದ ಶಾಸಕರು, ಮುಂಬರುವ ದಿನಗಳಲ್ಲಿ ತಳಮಟ್ಟದಲ್ಲಿ ಪಕ್ಷವನ್ನು ಮತ್ತಷ್ಟು ಸಂಘಟಿಸುವ ನಿಟ್ಟಿನಲ್ಲಿ ಪ್ರಮುಖ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದರು.

ದಿನದ ಕೊನೆಯ ಹಂತವಾಗಿ ಬೂತ್ ಅಧ್ಯಕ್ಷರಾದ ಶ್ರೀಮತಿ ಶಾಂತಮ್ಮ ಅವರ ನಿವಾಸದಲ್ಲಿ ಕುಟುಂಬದ ಸದಸ್ಯರು ಹಾಗೂ ಕಾರ್ಯಕರ್ತರೊಂದಿಗೆ ಶಾಸಕರು ಪ್ರೀತಿಯ ಸಹಭೋಜನ ಸವಿದರು.

ಈ ವಿಶೇಷ ಬೂತ್ ವಾಸ್ತವ್ಯ ಅಭಿಯಾನದಲ್ಲಿ ಭಾಜಪ ಜಿಲ್ಲಾಧ್ಯಕ್ಷರಾದ ಶ್ರೀ ಎನ್.ಕೆ. ಜಗದೀಶ್, ನಗರಾಧ್ಯಕ್ಷರಾದ ಶ್ರೀ ಮೋಹನ್ ರೆಡ್ಡಿ, ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಜ್ಞಾನೇಶ್ವರ್, ಶ್ರೀ ನಾಗರಾಜ್, ಶ್ರೀ ಪ್ರಭಾಕರ್, ಶ್ರೀ ಮಂಜುನಾಥ ನವಲೆ, ಶ್ರೀ ಪ್ರದೀಪ್ ಹೊನ್ನಪ್ಪ, ಶ್ರೀ ದೀನ್ ದಯಾಳ್, ಶ್ರೀಮತಿ ಆಶಾ ಚಂದ್ರಪ್ಪ, ಶ್ರೀ ಚಂದ್ರಪ್ಪ, ಶ್ರೀ ಲಕ್ಷ್ಮಿಕಾಂತ್ ಭಟ್, ಶ್ರೀ ಕುಮಾರ್ ಗಾಡಿಕೊಪ್ಪ, ಶ್ರೀ ರವೀಂದ್ರ ಸೇರಿದಂತೆ ಪಕ್ಷದ ವಿವಿಧ ಸ್ತರದ ಪದಾಧಿಕಾರಿಗಳು ಹಾಗೂ ನೂರಾರು ಸಂಖ್ಯೆಯ ಉತ್ಸಾಹಿ ಕಾರ್ಯಕರ್ತ ಬಂಧುಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Karnataka Media Academy ಛಾಯಾಚಿತ್ರಗ್ರಾಹಕರಿಗೆ ರಾಷ್ಟ್ರಮಟ್ಟದ ” ಫೋಕಸ್ ಆನ್ ನ್ಯೂಸ್” ಶೀರ್ಷಿಕೆ ಛಾಯಾಚಿತ್ರ ಸ್ಪರ್ಧೆ

Karnataka Media Academy ಕರ್ನಾಟಕ ಮಾಧ್ಯಮ ಅಕಾಡೆಮಿಯು ಸುದ್ದಿ ಛಾಯಾಚಿತ್ರಗ್ರಾಹಕರಿಗಾಗಿ “Focus...

Shivaganga Yoga Center ಉನ್ನತ ಸಾಧನೆಗೆ ಯೋಗ , ಧ್ಯಾನ ಹಾಗೂ ಕಠಿಣ ಪರಿಶ್ರಮ ರಹದಾರಿ- ಸಿ.ಎಸ್.ಷಡಾಕ್ಷರಿ

Shivaganga Yoga Center ಉತ್ತಮ ಆರೋಗ್ಯ ಮನುಷ್ಯನಿಗೆ ಅಮೂಲ್ಯ ಆಸ್ತಿ. ಉನ್ನತ...