Sunday, August 2, 2026
Sunday, August 2, 2026

Shivamogga Narayana Super Specialty Clinic ನಾರಾಯಣ ಸೂಪರ್ ಸ್ಪೆಷಾಲಿಟಿ ಕ್ಲಿನಿಕ್‌ನಲ್ಲಿ ಎಂಡೋಸ್ಕೋಪಿ ಮತ್ತು ಕೀಮೋಥೆರಪಿ ಸೇವೆಗಳಿಗೆ ಸಂಸದರಿಂದ ಚಾಲನೆ – ರೋಗಿಗಳಿಗೆ ಮಾನಸಿಕ ಧೈರ್ಯ ತುಂಬುವಂತೆ ವೈದ್ಯರಿಗೆ ಕಿವಿಮಾತು

Date:

Shivamogga Narayana Super Specialty Clinic ಶಿವಮೊಗ್ಗ ನಗರದ ನಾರಾಯಣ ಸೂಪರ್ ಸ್ಪೆಷಾಲಿಟಿ ಕ್ಲಿನಿಕ್‌ನಲ್ಲಿ ನೂತನವಾಗಿ ಆರಂಭಿಸಲಾದ ಎಂಡೋಸ್ಕೋಪಿ ಮತ್ತು ಕೀಮೋಥೆರಪಿ ಡೇ-ಕೇರ್ ಸೇವೆಗಳಿಗೆ ಶಿವಮೊಗ್ಗ ಸಂಸದರಾದ ಶ್ರೀ ಬಿ ವೈ ರಾಘವೇಂದ್ರ ಅವರು ಅಧಿಕೃತವಾಗಿ ಚಾಲನೆ ನೀಡಿದರು. ಈ ನೂತನ ಸೇವೆಗಳ ಸೇರ್ಪಡೆಯಿಂದ ಶಿವಮೊಗ್ಗದ ವೈದ್ಯಕೀಯ ಕ್ಷೇತ್ರಕ್ಕೆ ಮತ್ತೊಂದು ಗರಿಮೆ ಒದಗಿದಂತಾಗಿದೆ ಎಂದು ಅವರು ಬಣ್ಣಿಸಿದರು.

ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಸಂಸದರು, ಪ್ರಸ್ತುತ ದಿನಗಳಲ್ಲಿ ದೇಶದಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸರಾಸರಿ ಪ್ರತಿ ಕುಟುಂಬದಲ್ಲೂ ಇಂತಹ ಸಮಸ್ಯೆಗಳು ಕಂಡುಬರುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು. ಕೀಮೋಥೆರಪಿ ಚಿಕಿತ್ಸೆ ಪಡೆಯುವ ರೋಗಿಗಳು ನಿಯಮಿತವಾಗಿ ಆಸ್ಪತ್ರೆಗೆ ಭೇಟಿ ನೀಡಬೇಕಿರುವುದರಿಂದ, ನಗರದ ಮಧ್ಯಭಾಗದಲ್ಲಿಯೇ ಡೇ-ಕೇರ್ ಸೆಂಟರ್ ಆರಂಭಿಸಿರುವುದು ರೋಗಿಗಳಿಗೆ ತ್ವರಿತ ಹಾಗೂ ಸುಲಭ ಚಿಕಿತ್ಸೆ ಪಡೆಯಲು ಹೆಚ್ಚು ಅನುಕೂಲಕರವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕ್ಯಾನ್ಸರ್ ರೋಗಿಗಳಿಗೆ ಕೇವಲ ವೈದ್ಯಕೀಯ ಚಿಕಿತ್ಸೆ ನೀಡುವುದು ಮಾತ್ರವಲ್ಲದೆ, ಅವರಲ್ಲಿ ಮಾನಸಿಕ ಧೈರ್ಯ ಮತ್ತು ಜೀವನದ ಬಗ್ಗೆ ವಿಶ್ವಾಸ ತುಂಬುವ ಕೆಲಸವನ್ನು ವೈದ್ಯರು ಮಾಡಬೇಕು.

ಸಾರ್ವಜನಿಕರು ವೈದ್ಯರನ್ನು ತಮ್ಮ ಮನೆಗಳಲ್ಲಿ ದೇವರಂತೆ ಕಾಣುತ್ತಾರೆ; ಆ ಪವಿತ್ರ ನಂಬಿಕೆ ಮತ್ತು ಸ್ಥಾನಮಾನವನ್ನು ಉಳಿಸಿಕೊಂಡು ಹೋಗುವ ದೊಡ್ಡ ಜವಾಬ್ದಾರಿ ವೈದ್ಯಕೀಯ ತಂಡದ ಮೇಲಿದೆ.

ನಾರಾಯಣ ಹೆಲ್ತ್ ಸಂಸ್ಥಾಪಕ ಡಾ. ದೇವಿ ಶೆಟ್ಟಿ ಅವರ ಸೇವೆಯನ್ನು ಶ್ಲಾಘಿಸಿದ ಸಂಸದರು, ಕೋವಿಡ್ ಸಂಕಷ್ಟದ ಸಮಯದಲ್ಲಿ ಇಡೀ ದೇಶಕ್ಕೆ ಮತ್ತು ಸರ್ಕಾರಕ್ಕೆ ಅವರು ನೀಡಿದ ಮಾರ್ಗದರ್ಶನವನ್ನು ಸ್ಮರಿಸಿದರು. ಇದೇ ವೇಳೆ, ಈ ಹೊಸ ಸೇವೆಗಳ ವಿಸ್ತರಣೆಗೆ ಕಾರಣರಾದ ಕರ್ನಾಟಕ ಕ್ಲಸ್ಟರ್‌ನ ನಿರ್ದೇಶಕ ಡಾ. ವಿಜಯ್ ಸಿಂಗ್ ಮತ್ತು ಫೆಸಿಲಿಟಿ ನಿರ್ದೇಶಕ ಡಾ. ಉತ್ತಮ ಶರ್ಮ ಅವರನ್ನು ಸಂಸದರು ಅಭಿನಂದಿಸಿದರು.

ಮಧ್ಯ ಕರ್ನಾಟಕದ ವೈದ್ಯಕೀಯ ಕೇಂದ್ರವಾಗಿ ಶಿವಮೊಗ್ಗ:
“ಹಿಂದೆಲ್ಲಾ ಯಾವುದೇ ಗಂಭೀರ ಆರೋಗ್ಯ ಸಮಸ್ಯೆಗಳಿದ್ದರೂ ಚಿಕಿತ್ಸೆಗಾಗಿ ಬೆಂಗಳೂರು ಅಥವಾ ಮಣಿಪಾಲಕ್ಕೆ ಹೋಗಬೇಕಾದ ಅನಿವಾರ್ಯತೆ ಇತ್ತು. ಆದರೆ, ಇಂದು ಗುಣಮಟ್ಟದ ಯುವ ವೈದ್ಯರ ದಕ್ಷತೆಯಿಂದಾಗಿ ಶಿವಮೊಗ್ಗವು ಇಡೀ ಮಧ್ಯ ಕರ್ನಾಟಕದ ಜನರನ್ನು ಆಕರ್ಷಿಸುವ ಪ್ರಮುಖ ಹೆಲ್ತ್‌ಕೇರ್ ಕೇಂದ್ರವಾಗಿ ಬೆಳೆಯುತ್ತಿದೆ” ಎಂದು ರಾಘವೇಂದ್ರ ಅವರು ಹರ್ಷ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿ ಅವರಿಗೆ ನೂತನ ಸೇವೆ ಸಮರ್ಪಣೆ

Shivamogga Narayana Super Specialty Clinic ನೂತನವಾಗಿ ಉದ್ಘಾಟನೆಗೊಂಡ ಈ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯವನ್ನು ಸಂಸದರು ನೆಚ್ಚಿನ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಸಮರ್ಪಿಸಿದರು. ಪ್ರಧಾನಿ ಮೋದಿಯವರ ‘ಸ್ವಸ್ಥ ಭಾರತ’ ಪರಿಕಲ್ಪನೆ ಹಾಗೂ ಪ್ರತಿಯೊಬ್ಬ ಜನಸಾಮಾನ್ಯನಿಗೂ ಕೈಗೆಟುಕುವ ದರದಲ್ಲಿ ಅತ್ಯುತ್ತಮ ಗುಣಮಟ್ಟದ ಆರೋಗ್ಯ ಸೇವೆಗಳು ದೊರೆಯಬೇಕು ಎಂಬ ಅವರ ಮಹತ್ವಾಕಾಂಕ್ಷೆಯ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಈ ನೂತನ ಕೇಂದ್ರವು ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ಬಣ್ಣಿಸಿದರು. ದೇಶದ ಮೂಲೆಮೂಲೆಗೂ ಸುಸಜ್ಜಿತ ವೈದ್ಯಕೀಯ ಸೌಲಭ್ಯಗಳನ್ನು ತಲುಪಿಸುವ ಪ್ರಧಾನಮಂತ್ರಿಯವರ ದೂರದೃಷ್ಟಿಯ ಗುರಿಗೆ ಪೂರಕವಾಗಿ ಈ ನೂತನ ಕೀಮೋಥೆರಪಿ ಮತ್ತು ಎಂಡೋಸ್ಕೋಪಿ ಡೇ-ಕೇರ್ ಕ್ಲಿನಿಕ್ ಜನಸೇವೆಗೆ ಮುಡಿಪಾಗಿರಲಿದೆ ಎಂದು ರಾಘವೇಂದ್ರ ಅವರು ಇದೇ ಸಂದರ್ಭದಲ್ಲಿ ಹೆಮ್ಮೆಯಿಂದ ನುಡಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...