Wednesday, August 5, 2026
Wednesday, August 5, 2026

ಹೊಳೆಬೆನವಳ್ಳಿ ಸನಿಹ ಭತ್ತದ ಗದ್ದೆಗೆ ನುಗ್ಗಿದ ಕಾರು:ಏರ್ ಬ್ಯಾಗ್ ರಕ್ಷಣೆಯಿಂದಾಗಿ ಚಾಲಕ‌ ಪಾರು

Date:

ಶಿವಮೊಗ್ಗ-ಚಿತ್ರದುರ್ಗ ಹೆದ್ದಾರಿಯ ಹೊಳೆಬೆನವಳ್ಳಿ ಸಮೀಪ ಕಾರೊಂದು ಭತ್ತದ ಗದ್ದೆ ನುಗ್ಗಿದೆ. ಶಿವಮೊಗ್ಗಕ್ಕೆ ಪ್ರಯಾಣಿಸುತ್ತಿದ ಕಾರು ಎದುರಿನಲ್ಲಿ ಬಂದ ಸರ್ಕಾರಿ ಬಸ್‌ ತಪ್ಪಿಸಲು ಹೋಗಿ ಚಾಲಕ ಕಾರನ್ನು ರಸ್ತೆ ಬದಿಯ ಭತ್ತದ ಗದ್ದೆಗೆ ನುಗಿಸಿದ್ದಾನೆ. ಕಾರು ಒಂದೆರಡು ಪಲ್ಟಿಯಾಗಿ ರಸ್ತೆ ಬದಿಯ 5-6 ಅಡಿ ತಗ್ಗಿನಲ್ಲಿರುವ ಗದ್ದೆಗೆ ನುಗ್ಗಿದೆ. ಎಲ್ಲ ಏರ್ ಬ್ಯಾಗ್‌ಗಳು ತೆರೆದುಕೊಂಡಿದ್ದರಿಂದ ಪ್ರಾಣಾಪಾಯ ಸಂಭವಿಸಿಲ್ಲ. ಕಾರು ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಓದುತ್ತಿರುವ ಆಂಧ್ರಪ್ರದೇಶದ ವಿದ್ಯಾರ್ಥಿಯದು ಎನ್ನಲಾಗಿದೆ. ಕೆರೆಯ ಕೆಲಸ ಮಾಡುತ್ತಿದ್ದವರು ಕಾರಿನಲ್ಲಿದವರನ್ನು ರಕ್ಷಿಸಿದ್ದಾರೆ. ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

DC Shivamogga “ಭಾರತ್ ಜೋಡೋ” ಯೋಜನೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಚಾಲನೆ ನೀಡಲಾಗಿದೆ: ಪ್ರಭುಲಿಂಗ ಕವಳಿಕಟ್ಟಿ

DC Shivamogga ಯುವಜನರಲ್ಲಿ ಕ್ರೀಡೆ, ಸಂಸ್ಕೃತಿ, ವೈಜ್ಞಾನಿಕ ಮನೋಭಾವ ಹಾಗೂ ಸಾಮುದಾಯಿಕ-ಸಾಮಾಜಿಕ...

B.Y. Raghavendra ಕೇಂದ್ರದ ಅಟಲ್ ಪಿಂಚಣಿ ಯೋಜನೆಗೆಶಿವಮೊಗ್ಗ ಜಿಲ್ಲೆಯಲ್ಲಿ ಗಮನಾರ್ಹ ಸ್ಪಂದನ- ಸಂಸದ ಬಿ.ವೈ.ರಾಘವೇಂದ್ರ

B.Y. Raghavendra ಅಸಂಘಟಿತ ವಲಯದಲ್ಲಿ ದುಡಿಯುವ ಲಕ್ಷಾಂತರ ಕಾರ್ಮಿಕರಿಗೂ ವೃದ್ಧಾಪ್ಯದಲ್ಲಿ ಆರ್ಥಿಕ...

S. N. Channabasappa ಶಿವಮೊಗ್ಗ ಸಾಂಸ್ಕೃತಿಕ ರಾಜಧಾನಿ ಎಂಬ ಪ್ರಸಿದ್ಧಿಗೆ ಇಲ್ಲಿನ ಸಹೃದಯರೇ ಕಾರಣ- ಕಾ.ವೆಂ‌.ಶ್ರೀ.

S. N. Channabasappa "ಶಿವಮೊಗ್ಗ ನಗರದ ಜೀವನಾಡಿ ಹಾಗೂ ಸಮೃದ್ಧಿಯ ಸಂಕೇತವಾಗಿ...