Tuesday, July 28, 2026
Tuesday, July 28, 2026

S.N. Channabasappa ವಿದ್ಯಾವಂತ ಯುವಕ- ಯುವತಿಯರು “ಕಾಯಕ ಸೇತು” ಪೋರ್ಟಲ್ ನ ಸದುಪಯೋಗಪಡಿಸಿಕೊಳ್ಳಿ- ಎಸ್.ಎನ್.ಚನ್ನಬಸಪ್ಪ.

Date:

S.N. Channabasappa ನಮ್ಮ ಶಿವಮೊಗ್ಗದ ಹೆಣ್ಣುಮಕ್ಕಳ ಆರ್ಥಿಕ ಸಬಲೀಕರಣಕ್ಕೆ ಮತ್ತೊಂದು ಮಹತ್ವದ ಹೆಜ್ಜೆ: ‘ಕಾಯಕ ಸೇತು’ ಬೃಹತ್ ಉದ್ಯೋಗ ನೇಮಕಾತಿ ಅಭಿಯಾನಕ್ಕೆ ಚಾಲನೆ!

ನಮ್ಮ ಶಿವಮೊಗ್ಗದ ಯುವಜನತೆಗೆ ಉದ್ಯೋಗಾವಕಾಶ ಕಲ್ಪಿಸುವ ಶ್ಲಾಘನೀಯ ಸದುದ್ದೇಶದಿಂದ ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ ಸರ್ಜಿ ಅವರು ಪ್ರಾರಂಭಿಸಿರುವ ‘ಕಾಯಕ ಸೇತು’ ಜಾಬ್ ಪೋರ್ಟಲ್ ಹಾಗೂ ಸರ್ಜಿ ಫೌಂಡೇಶನ್ ಜಂಟಿ ಸಹಯೋಗದಲ್ಲಿ ಆಯೋಜಿಸಲಾಗಿರುವ 5 ದಿನಗಳ ಕಾಲ ಡಾ. ಧನಂಜಯ್ ಸರ್ಜಿ ಅವರ ಕಚೇರಿಯಲ್ಲಿ ನಡೆಯಲಿರುವ  ಉದ್ಯೋಗ ಸಂದರ್ಶನ ಪ್ರಕ್ರಿಯೆಗೆ ಇಂದು ಚಾಲನೆ ನೀಡಲಾಯಿತು.

ಬೆಂಗಳೂರಿನ ಪ್ರತಿಷ್ಠಿತ ಬಹುರಾಷ್ಟ್ರೀಯ ಮೊಬೈಲ್ ತಯಾರಿಕಾ ಕಂಪನಿಯಲ್ಲಿ ಖಾಲಿ ಇರುವ 2,000ಕ್ಕೂ ಹೆಚ್ಚು ಹುದ್ದೆಗಳಿಗೆ ಕೇವಲ ಮಹಿಳಾ ಅಭ್ಯರ್ಥಿಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಗುತ್ತಿದ್ದು, ನಮ್ಮ ಶಿವಮೊಗ್ಗ ನಗರ ಹಾಗೂ ಗ್ರಾಮೀಣ ಭಾಗದ ಅರ್ಹ ಯುವತಿಯರಿಗೆ ಇದೊಂದು ಸುವರ್ಣಾವಕಾಶವಾಗಿದೆ. ಹೆಣ್ಣುಮಕ್ಕಳು ಆರ್ಥಿಕವಾಗಿ ಸ್ವತಂತ್ರರಾಗಬೇಕು, ಅವರಿಗೆ ಅತ್ಯಂತ ಸುರಕ್ಷಿತ ಹಾಗೂ ಭದ್ರತೆಯ ವಾತಾವರಣ ಸಿಗಬೇಕು ಎನ್ನುವ ಕಳಕಳಿಯಿಂದ ಈ ಮೇಳವನ್ನು ಹಮ್ಮಿಕೊಳ್ಳಲಾಗಿದೆ.

S.N. Channabasappa ಲೋಕಾರ್ಪಣೆಗೊಂಡ ಕೇವಲ 7 ತಿಂಗಳ ಅಲ್ಪಾವಧಿಯಲ್ಲೇ ನೂರಾರು ಯುವಕ-ಯುವತಿಯರಿಗೆ ಆಸರೆಯಾಗಿರುವ ‘ಕಾಯಕ ಸೇತು’ ಪೋರ್ಟಲ್‌ನ ಈ ಜನಪರ ಪ್ರಯತ್ನ ಅತ್ಯಂತ ಶ್ಲಾಘನೀಯ. ಜಿಲ್ಲೆಯ ಆಸಕ್ತ ಮಹಿಳಾ ಅಭ್ಯರ್ಥಿಗಳು ಈ ಸದವಕಾಶದ ಸದುಪಯೋಗ ಪಡಿಸಿಕೊಳ್ಳಬೇಕಾಗಿ ಕೋರುತ್ತೇನೆ.

​ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಡಿ.ಎಸ್. ಅರುಣ್, ಡಾ. ಧನಂಜಯ ಸರ್ಜಿ, ಮಾಜಿ ಸುಡಾ ಅಧ್ಯಕ್ಷರಾದ ಶ್ರೀ ನಾಗರಾಜ್, ಪ್ರಮುಖರಾದ ಶ್ರೀ ಜ್ಞಾನೇಶ್ವರ್, ಇನ್ನೋವ್ ಕಂಪನಿಯ ಅಸಿಸ್ಟೆಂಟ್ ಮ್ಯಾನೇಜರ್ ಶ್ರೀ ದಯಾನಂದ್ ಹಾಗೂ  ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Karnataka State Brahmin Development Board ವಿಪ್ರ ಸ್ವ- ಉದ್ಯಮ ನೇರ ಸಾಲ ಯೋಜನೆ: ಅರ್ಜಿ ಆಹ್ವಾನ

Karnataka State Brahmin Development Board ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ...

Rotary Club of Shivamogga ವೈದ್ಯರು ಉಚಿತವಾಗಿ ನೀಡುವ ಸಲಹಾ ಸೌಲಭ್ಯ ಬಳಸಿಕೊಳ್ಳಿ- ಎನ್.ಗೋಪಿನಾಥ್

Rotary Club of Shivamogga ವೈದ್ಯರು ಉಚಿತವಾಗಿ ನೀಡುತ್ತಿರುವ ಸಲಹೆಗಳನ್ನು ಬಳಸಿಕೊಳ್ಳಿ...

Klive Special Article ತೆರಿಗೆಯು ಜೇನ್ನೊಣವು ಹೂವಿನಿಂದ ಜೇನು ಸಂಗ್ರಹಿಸುವಂತೆ ಇರಬೇಕು

ವಿಶೇಷ ಲೇಖನ: ಆರ್.ಮನೋಹರ್.ತೆರಿಗೆ ಸಲಹೆಗಾರ. ಶಿವಮೊಗ್ಗ. Klive Special Article ಆದಾಯ ತೆರಿಗೆ...