Monday, September 7, 2026
Monday, September 7, 2026

Bhadra Achukattu Area Development ರೈತರು ನೀರನ್ನ ಮಿತ ಬಳಸಿ,ಬಹುಬೆಳೆ ಮಾದರಿ ಅನುಸರಿಸಿ ಮಣ್ಣಿನ ಫಲವತ್ತತೆ ಕಾಪಾಡಬೇಕು,- ಡಾ.ಕೆ.ಪಿ.ಅಂಶುಮಂತ್.

Date:

Bhadra Achukattu Area Development ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಶಿವಮೊಗ್ಗ ಈ ಕಛೇರಿಯಲ್ಲಿ ದಿನಾಂಕ 06.06.2026 ರ ಶನಿವಾರದಂದು ಅಧ್ಯಕ್ಷರಾದ ಡಾ.ಕೆ.ಪಿ. ಅಂಶುಮಂತ್ ರವರ ಅಧ್ಯಕ್ಷತೆಯಲ್ಲಿ ವಿವಿಧ ಸಹಕಾರ ಸಂಘಗಳ ಪದಾಧಿಕಾರಿಗಳು ಮತ್ತು ಸದಸ್ಯರು, ಪ್ರಗತಿಪರ ರೈತರು, ಕೃಷಿಕರು ಹಾಗೂ ಕೃಷಿ ತಜ್ಞರುಗಳೊಂದಿಗೆ ಭದ್ರಾ ಕಾಡ ಪ್ರಾಧಿಕಾರದ ಉದ್ದೇಶ ಕಾರ್ಯ ಚಟುವಟಿಕೆಗಳ ಕುರಿತು ಮಾಹಿತಿ ನೀಡಿ ಭದ್ರಕಾಡ ಪ್ರಾಧಿಕಾರವು ಸಾಧಿಸಿರುವ ಪ್ರಗತಿಯ ಕುರಿತು
ಸಮಾಲೋಚನೆ ಮತ್ತು ತರಬೇತಿ ಕಾರ್ಯಗಾರವನ್ನು ಏರ್ಪಡಿಸಲಾಗಿತ್ತು .

ಮಾನ್ಯ ಅಧ್ಯಕ್ಷರು ಮಾತನಾಡುತ್ತಾ – ನೀರಾವರಿ ಕ್ಷೇತ್ರದಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳ ಜವಾಬ್ದಾರಿಗಳ ಬಗ್ಗೆ ವಿವರಿಸಿದರು.ರೈತರು ಬಹು ಬೆಳೆ ಮಾದರಿಯನ್ನು ಅನುಸರಿಸಿ ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಬೇಕು ಹಾಗೂ ನೀರನ್ನು ಮಿತವಾಗಿ ಬಳಸಬೇಕು, ರೈತರು ವಿವಿಧ ಮಾದರಿಯ ಬೆಳೆಯನ್ನು ಬೆಳೆದು ಕೊಯ್ಲಿನ ಬಳಿಕದ ತಂತ್ರಜ್ಞಾನಗಳನ್ನು ಬಳಸಿ ಮಾರುಕಟ್ಟೆಯನ್ನು ಕಂಡುಕೊಳ್ಳಬೇಕು.

ಹೆಚ್ಚಿನ ಲಾಭವನ್ನು ಗಳಿಸಿಕೊಳ್ಳಬೇಕು ಇದಕ್ಕೆ ನೀರು ಬಳಕೆದಾರರ ಸಹಕಾರ ಸಂಘಗಳು ಹೊಸ ಚಿಂತನೆಯೊಂದಿಗೆ ಆಧುನಿಕ ತಂತ್ರಜ್ಞಾನವನ್ನು ಬಳಸಿ ಕೃಷಿಯಲ್ಲಿ ವಿವಿಧ ರೀತಿಯಲ್ಲಿ ಅಭಿವೃದ್ಧಿಗಳನ್ನು ಸಾಧಿಸಿ ಆರ್ಥಿಕವಾಗಿ ಸಬಲರಾಗಿ
ಮುನ್ನಡೆಯಬೇಕು ಎಂದು ತಿಳಿಸಿದರು.

Bhadra Achukattu Area Development ಕಾಡಾ ಪ್ರಾಧಿಕಾರದ ಕಾಮಗಾರಿಗಳ ಮತ್ತು ತರಬೇತಿ ಹಾಗೂ ಸಾಧಿಸಿದ ಪ್ರಗತಿ ಯಂತ್ರೋಪಕರಣಗಳ ವಿತರಣೆ ಮತ್ತಿತರ ಕಾರ್ಯ ಚಟುವಟಿಕೆಗಳ ಕುರಿತು ಭೂ ಅಭಿವೃದ್ಧಿ ಅಧಿಕಾರಿಗಳು ಕೆ, ಪ್ರಶಾಂತ್ (ತಾಂತ್ರಿಕ),(ಕೃಷಿ)(ಪ್ರ) ರವರು ಮತ್ತು ಡಾ.ನಾಗೇಶ್ ಎಸ್ ಡೋಂಗರೆ , ಭೂ ಅಭಿವೃದ್ಧಿ ಅಧಿಕಾರಿ ( ಸಹಕಾರ ) ಇವರುಗಳು ವಿವರಿಸಿದರು.

ಈ ಸಂದರ್ಭದಲ್ಲಿ ಪ್ರಾಧಿಕಾರದ ತಾಂತ್ರಿಕ ಕೃಷಿ ಮತ್ತು ಸಹಕಾರ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಸಮಾಜಮುಖಿಯಾಗಿ ಕ್ರಿಯಾಶೀಲವಾಗಿರುವ ಆರ್ಯವೈಶ್ಯ ಶ್ರೀರಾಮಸಹಕಾರ ಸಂಘದ ಕಾರ್ಯ ಶ್ಲಾಘನೀಯ : ಎಸ್.ಎನ್.ಚನ್ನಬಸಪ್ಪ

S.N. Channabasappa "ಸಮಾಜದ ಉದಯೋನ್ಮುಖ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಹಾಗೂ...

B.Y. Raghavendra ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬಕ್ಕೆ ಸಂಸದ ಬಿ.ವೈ. ರಾಘವೇಂದ್ರ ಅಸಮಾಧಾನ

B.Y. Raghavendra ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ರಾಷ್ಟ್ರೀಯ ಹೆದ್ದಾರಿ...

Bhadra Reservoir ಸೆಪ್ಟೆಂಬರ್ 1 ರಿಂದ 10 ರವರೆಗೆ ಭದ್ರಾ ಬಲದಂಡೆ ನಾಲೆಯಲ್ಲಿ ನೀರು ಬಿಡುಗಡೆ: ಕುಡಿಯುವ ನೀರಿಗೆ ಮಾತ್ರ ಬಳಕೆ

Bhadra Reservoir ದಾವಣಗೆರೆ ಹಾಗೂ ಚನ್ನಗಿರಿ ತಾಲ್ಲೂಕುಗಳ ಜನ-ಜಾನುವಾರುಗಳಿಗೆ ಮತ್ತು ಬಹುಗ್ರಾಮ...