K.S. Eshwarappa ಮಾಜಿ ಉಪಮುಖ್ಯಮಂತ್ರಿಗಳಾದ ಶ್ರೀಯುತ ಕೆ. ಎಸ್. ಈಶ್ವರಪ್ಪನವರನ್ನು ಭೇಟಿಯಾಗಿ ನಮ್ಮ ಇತಿಹಾಸ ವೇದಿಕೆಯ ಕಾರ್ಯಗಳನ್ನು ತಿಳಿಸಿದ್ದು ಅದನ್ನು ಆಲಿಸಿದ ಅವರು ಹರ್ಷಿತರಾಗಿ ನಮ್ಮಮುಂದಿನ ಎಲ್ಲಾ ಅಧ್ಯಯನ ಮತ್ತು ಸಂಶೋಧನಾ ಕಾರ್ಯಗಳಿಗೆ ಎಲ್ಲಾ ರೀತಿಯ ಬೆಂಬಲ ಹಾಗೂ ಅಗತ್ಯ ಸಹಾಯಗಳನ್ನು ನೀಡುವುದಾಗಿ ಭರವಸೆಯನ್ನು ನೀಡುವುದರ ಜೊತೆಗೆ ನಮ್ಮ ವೇದಿಕೆಗೆ ಅಗತ್ಯವಾದ ಧನಸಹಾಯಕ್ಕಾಗಿ (CSR Fund) ಸಂಬಂಧಪಟ್ಟ ಅಧಿಕಾರಿಯವರನ್ನುಸ್ಥಳದಲ್ಲೇ ಕರೆಸಿ ಭೇಟಿ ಮಾಡಿಸಿ ಧನಸಹಾಯದ ಭರವಸೆಯೂ ಸಹ ದೊರಕಿದ್ದು ಜೊತೆಗೆ ವೇದಿಕೆಯನ್ನು ನೋಡಲ್ ಸಂಸ್ಥೆಯಾಗಿ ನೇಮಿಸಲು ಸರ್ಕಾರದ ವತಿಯಿಂದ ಆಗಬೇಕಾದ ಕೆಲಸ ಮಾಡಲು ಅಗತ್ಯವಿರುವ ಅಧಿಕಾರಿಯೊಂದಿಗೂ ಸಹ ದೂರವಾಣಿಯಲ್ಲಿ ಮಾತನಾಡಿಸಿದ್ದು ಅತಿ ಶೀಘ್ರದಲ್ಲಿ ವೇದಿಕೆಯು ನೋಡಲ್ ಸಂಸ್ಥೆಯಾಗಿ ಅನುಮೋದಿಸಲಿದೆ.
ಇದಕ್ಕಾಗಿ ಎಲ್ಲಾ ನೆರವು ನೀಡಿದ ಶ್ರೀಯುತ ಕೆ.ಎಸ್.ಈಶ್ವರಪ್ಪನವರಿಗೆ ಹೃತ್ಪೂರ್ವಕ ಗೌರವವನ್ನು ಸಲ್ಲಿಸಲಾಯಿತು. ಭೇಟಿಯ ಸಂಧರ್ಭದಲ್ಲಿ ವೇದಿಕೆಯ ಅಧ್ಯಕ್ಷರಾದ ಶ್ರೀಯುತ ಡಾ. ಎಸ್.ಜಿ ಸಾಮಕ್, ಶ್ರೀಯುತ ಮಹಾದೇವಸ್ವಾಮಿ, ಶ್ರೀಯುತ ಎಸ್.ಎಸ್.ವಾಗೀಶ್, ಶ್ರೀಯುತ ರಾಮ್ ಗೋಪಾಲ್, ಶ್ರೀಯುತ ಆದಿತ್ಯ ಪ್ರಸಾದ್ ರವರು ಜೊತೆಗೆ ಇದ್ದು ಸಹಕರಿಸಿದರು. ಇವರೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು.
ದಿಲೀಪ್ ನಾಡಿಗ್
ಕಾರ್ಯದರ್ಶಿ
ಮ.ಇ.ಸಂ.ಮತ್ತು ಅ ವೇದಿಕೆ.
