Tuesday, October 13, 2026
Tuesday, October 13, 2026

ಪ್ರೊ ಕಬಡ್ಡಿ ಲೀಗ್ ಸ್ಟೀಲರ್ಸ್-ಯೋಧಾ ಜಯಭೇರಿ

Date:

ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಶೆರಟಾನ್ ಗ್ರ್ಯಾಂಡ್ ಹೋಟೆಲ್ ಮೈದಾನದಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ ಪಂದ್ಯಾವಳಿಯು ಶುಕ್ರವಾರ 4 ತಂಡಗಳ ನಡುವೆ ಪಂದ್ಯ ನಡೆಯಿತು.

ಸ್ಟೀಲರ್ಸ್ ವಿರುದ್ಧ ಡೆಲ್ಲಿ ಗೆ ಸತತ ಸೋಲು
ಹರಿಯಾಣ ಸ್ಟಿಲರ್ಸ್(36) ಮತ್ತು ದಬಾಂಗ್ ಡೆಲ್ಲಿ(33) ತಂಡಗಳ ನಡುವೆ ಪಂದ್ಯ ನಡೆಯಿತು. ಹರಿಯಾಣ ತಂಡವು ದಬಾಂಗ್ ವಿರುದ್ಧ ಭರ್ಜರಿ ಜಯ ಸಾಧಿಸಿತು.
ಮೊದಲಾರ್ಧದಲ್ಲೇ ಹರಿಯಾಣ 19-11 ರಿಂದ ಮುಂದಿತ್ತು ಅದೇ ಲಯವನ್ನು ಮುಂದುವರೆಸಿಕೊಂಡು ಪಂದ್ಯವನ್ನು ಮುನ್ನಡೆಸಿತು.
ಹರಿಯಾಣ ಪರ ವಿಕಾಸ್ 9 ಟಚ್ ಪಾಯಿಂಟ್ಸ್ ಮತ್ತು 4 ಬೋನಸ್ ಪಾಯಿಂಟ್ಸ್ ಸೇರಿ ಒಟ್ಟು 13 ರೇಡಿಂಗ್ ಪಾಯಿಂಟ್ಸ್ ತಂಡಕ್ಕೆ ಸೇರಿಸಿದರು.ಹಾಗೆಯೇ ವಿನಯ್ 7 ಪಾಯಿಂಟ್ಸ್ ಮತ್ತು ಆಶಿಶ್ 4 ಪಾಯಿಂಟ್ಸ್ ಗಳಿಸಿ ತಂಡಕ್ಕೆ ನೀಡಿದರು.
ಇದರಿಂದಾಗಿ ಹರಿಯಾಣ ಸ್ಟೀಲರ್ಸ್ ತಂಡವು ಸತತ 5 ನೇ ಬಾರಿ ಜಯ ಸಾಧಿಸಿದೆ.

ಯೋಧಾ ಗೆ ಮಣಿದ ವಾರಿಯರ್ಸ್
ಯು.ಪಿ ಯೋಧಾ(40) ಮತ್ತು ಬೆಂಗಾಲ್ ವಾರಿಯರ್ಸ್ (36) ತಂಡಗಳ ನಡುವೆ ಪಂದ್ಯ ನಡೆಯಿತು.ವಾರಿಯರ್ಸ್ ವಿರುದ್ಧ ಯೋಧಾ ರೋಚಕ ಜಯ ಸಾಧಿಸಿದೆ.
ಯೋಧಾ ತಂಡದ ರೇಡರ್ ಗಳಾದ ಪ್ರದೀಪ್ ನರ್ವಾಲ್ 9 ಪಾಯಿಂಟ್ಸ್ ಮತ್ತು ಸುರೇಂದರ್ ಗಿಲ್ 9 ಪಾಯಿಂಟ್ಸ್ ಗಳನ್ನ ಕಲೆಹಾಕಿ ಹರಿಯಾಣ ತಂಡವು 40-36 ರ 4 ಅಂಕಗಳ ಅಂತರದಿಂದ ಬೆಂಗಾಲ್ ವಾರಿಯರ್ಸ್ ತಂಡವನ್ನು ಸೋಲಿಸಿತು.

ಇಂದು ನಡೆಯಲಿರುವ ಪಂದ್ಯಗಳು:
೧. ಬೆಂಗಳೂರು ಬುಲ್ಸ್ ಮತ್ತು ಪುಣೇರಿ ಪಲ್ಟನ್
ಸಮಯ:7.30
೨. ಯು.ಮುಂಬಾ ಮತ್ತು ತೆಲುಗು ಟೈಟನ್ಸ್
ಸಮಯ:8.30
೩. ಜೈಪುರ್ ಪಿಂಕ್ ಪ್ಯಾಂಥರ್ಸ್ ಮತ್ತು ತಮಿಳ್ ತಲೈವಾಸ್
ಸಮಯ:9.30

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Mysuru Dasara ಮೈಸೂರು ದಸರಾ ವಿದ್ಯುತ್ ದೀಪಾಲಂಕಾರಕ್ಕೆ ಸಚಿವ ಜಾರ್ಜ್ ಚಾಲನೆ

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ವಿದ್ಯುತ್‌ ದೀಪಾಲಂಕಾರಕ್ಕೆ...

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...