Diploma Admission ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್‌ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ಶಿವಮೊಗ್ಗ ಇವರ ವತಿಯಿಂದ 01.07.2026 ರಿಂದ ಪ್ರಾರಂಭವಾಗುವ ಸಹಕಾರ ಸಂಘ/ಸಂಸ್ಥೆಗಳ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ 6 ತಿಂಗಳ ದೂರಶಿಕ್ಷಣ ಮತ್ತು ಇತರೆ ಎಲ್ಲಾ ಅಭ್ಯರ್ಥಿಗಳಿಗೆ ರೆಗ್ಯುಲರ್ ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ತರಬೇತಿಗೆ ಪ್ರವೇಶ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಡಿ ಸಿ ಎಂ ಕೋರ್ಸ್ ತರಬೇತಿ ಸೇರಬಯಸುವ ಆಸಕ್ತ ಅಭ್ಯರ್ಥಿಗಳಿಗೆ ಜುಲೈ ರಿಂದ ಡಿಸೆಂಬರ್ ಹಾಗೂ ಜನವರಿ ಯಿಂದ ಜೂನ್‌ವರೆಗೆ ವಾರ್ಷಿಕ ಎರಡು ತಂಡಗಳ ಡಿ.ಸಿ.ಎಂ ಕೋರ್ಸ್ ತರಬೇತಿ ನಡೆಸಲಾಗುವುದು.
ಕನಿಷ್ಠ ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿಯನ್ನು ಪೂರ್ಣಗೊಳಿಸಿರಬೇಕು ಮತ್ತು ರೆಗ್ಯೂಲರ್ ಡಿ.ಸಿ.ಎಂ ಕೋರ್ಸ್ ತರಬೇತಿ ಪಡೆಯುವ ಉದ್ಯೋಗ ಆಕಾಂಕ್ಷಿಗಳು ಅವರವರ ಶೈಕ್ಷಣಿಕ ಅರ್ಹತೆಗೆ ಅನುಸಾರವಾಗಿ ಸಹಕಾರ ಇಲಾಖೆ ಮತ್ತು ಸಹಕಾರ ಕ್ಷೇತ್ರದ ಎಲ್ಲಾ ಸಂಘ / ಸಂಸ್ಥೆಗಳ ಉನ್ನತ ಹುದ್ದೆಗಳಿಗೂ ನೇಮಕಾತಿ ಹೊಂದಲು ಅರ್ಹರಾಗುತ್ತಾರೆ.
ಪ್ರವೇಶ ಪಡೆಯುವ ಎಲ್ಲಾ ಅಭ್ಯರ್ಥಿಗಳಿಗೆ ಕಂಪ್ಯೂಟರ್ ತರಬೇತಿಯ ಜೊತೆಗೆ ಪ್ರತಿ ತಿಂಗಳೂ ರೂ. 500/- ಹಾಗೂ ಪ.ಜಾ / ಪ.ಪಂಗಡ ಅಭ್ಯರ್ಥಿಗಳಿಗೆ ರೂ. 600/- ಶಿಷ್ಯ ವೇತನ ನೀಡಲಾಗುವುದು. ಹಾಗೂ ಸಹಕಾರ ಕ್ಷೇತ್ರದ ಅಪೆಕ್ಸ್ ಬ್ಯಾಂಕ್, ಡಿಸಿಸಿ ಬ್ಯಾಂಕ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಕೆಎಂಎಫ್, ಶಿಮುಲ್ (ಹಾಲು ಒಕ್ಕೂಟ) ಮ್ಯಾಮ್ಕೋಸ್, ಟುಮ್ಕೋಸ್, ರಮ್ಕೋಸ್, ಹಾಲು ಉತ್ಪಾದಕರ ಸಹಕಾರ ಸಂಘ ಮತ್ತು ಇತರೆ ಎಲ್ಲಾ ವರ್ಗದ ಸಹಕಾರ ಸಂಘಗಳ ಉದ್ಯೋಗಗಳ ನೇಮಕಾತಿಯಲ್ಲಿ ಈ ತರಬೇತಿ ಪಡೆದವರಿಗೆ ಆದ್ಯತೆ ನೀಡಲಾಗುವುದು.
ಮೇಲಿನ ಎಲ್ಲಾ ವರ್ಗದ ಸಹಕಾರ ಸಂಘ/ಸಂಸ್ಥೆಗಳ ಉದ್ಯೋಗಗಳ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುವುದು ಜೊತೆಗೆ ಕೆಎಎಸ್ ಮತ್ತು ಇತರೆ ಉದ್ಯೋಗಗಳ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗಿದೆ.
Diploma Admission ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂಸ್ಥೆಯಲ್ಲಿ ಸುಸಜ್ಜಿತ ತರಗತಿ ಕೊಠಡಿ, ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್‌ಲ್ಯಾಬ್ ಹಾಗೂ ವೈ-ಫೈ ಸೌಲಭ್ಯವನ್ನು ಇದ್ದು, ಡಿಸಿಎಂ ಕೋರ್ಸ್ ಜೊತೆಗೆ 5 ತಿಂಗಳ ಕಂಪ್ಯೂಟರ್ ತರಬೇತಿ ನೀಡಲಾಗುವುದು ಹಾಗೂ ಸಹಕಾರ ಇಲಾಖೆ ಮತ್ತು ಸಹಕಾರ ಸಂಘ/ಸAಸ್ಥೆಗಳಲ್ಲಿನ ನೌಕರರೂ ಪ್ರವೇಶ ಪಡೆಯಬಹುದು.
ದೂರ ಶಿಕ್ಷಣ ಡಿಸಿಎಂ ಕೋರ್ಸ್: ಸಹಕಾರ ಸಂಘ/ಸAಸ್ಥೆಗಳಲ್ಲಿನ ಖಾಯಂ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮಾತ್ರ ದೂರ ಶಿಕ್ಷಣ ಡಿ.ಸಿ.ಎಂ ಕೋರ್ಸ್ಗೆ ಪ್ರವೇಶ ನೀಡಲಾಗುವುದು.
ಜುಲೈ ರಿಂದ ಡಿಸೆಂಬರ್ ಹಾಗೂ ಜನವರಿ ಯಿಂದ ಜೂನ್ ವರೆಗೆ ವಾರ್ಷಿಕ ಎರಡು ತಂಡಗಳ ಡಿ.ಸಿ.ಎಂ ಕೋರ್ಸ್ ತರಬೇತಿ ನಡೆಸಲಾಗುವುದು. ಅಭ್ಯರ್ಥಿಗಳಿಗೆ ಅಧ್ಯಯನ ಸಾಹಿತ್ಯ ನೀಡುವುದರ ಜೊತೆಗೆ ಕೋರ್ಸ್ ಅವಧಿಯಲ್ಲಿ 10 ದಿನಗಳ (5+5) ಸಂಪರ್ಕ ತರಗತಿಗಳನ್ನು ನಡೆಸಲಾಗುವುದು ಇದು ಸಹಕಾರ ಸಂಘ/ಸAಸ್ಥೆಗಳಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿಗಳ ಪದೋನ್ನತ್ತಿಗೆ ಡಿ.ಸಿ.ಎಂ ಕೋರ್ಸ್ ಕಡ್ಡಾಯವಾಗಿದೆ.
ದೂರ ಶಿಕ್ಷಣ ಡಿಸಿಎಂ ತರಬೇತಿಗೆ ಆನ್‌ಲೈನ್ ಲಿಂಕ್ www.ksefdem.co.in ಮೂಲಕವೂ ಪ್ರವೇಶ ಪಡೆಯಬಹುದು.
ಅರ್ಜಿ ಸಲ್ಲಿಸಲು ಜೂನ್ 25 ಕೊನೆಯ ದಿನವಾಗಿರುತ್ತೆ. ಹೆಚ್ಚಿನ ಮಾಹಿತಿಗಾಗಿ ದೂ. ಸಂ : 08182 248873, 9449075746, 9845068191 : 7022441115, 7026246493, 9482216930 ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕೋ ಮ್ಯಾನೇಜಮೆಂಟ್ ಪ್ರಾಂಶುಪಾಲರು ತಿಳಿಸಿದ್ದಾರೆ.
