Shimoga News ಭಾರತೀಯ ಸಂಸ್ಕೃತಿಯಲ್ಲಿ ಬ್ರಹ್ಮಾಂಡದ ಸೃಷ್ಟಿ, ಸ್ಥಿತಿ, ಲಯಗಳಿಗೆ ಸ್ತ್ರೀ ಶಕ್ತಿಯೇ ಆಧಾರ ಎಂಬ ನಂಬಿಕೆ ಇದೆ. ನಮ್ಮ ಸಂಸ್ಕೃತಿ ಮಾತ್ರ ಬ್ರಹ್ಮಾಂಡದ ಮೂಲಶಕ್ತಿಯನ್ನು ಸ್ತ್ರೀಶಕ್ತಿಯನ್ನಾಗಿ ಆರಾಧಿಸುವ ಮೂಲಕ ಆದಿಶಕ್ತಿಗೆ ಮಹತ್ವದ ಸ್ಥಾನ ನೀಡಿದೆ ಎಂದು ಸನ್ ಸ್ಪೆಷಲಿಟಿ ಹಾಸ್ಪಿಟಲ್ ವೈದ್ಯಕೀಯ ನಿರ್ದೇಶಕ, ಬೆನ್ನು ಹುರಿ ಮತ್ತು ಮೂಳೆತಜ್ಞ ಡಾ. ಆಕಾಶ್ ಹೊಸತೋಟ ಹೇಳಿದರು
ಇಚ್ಚಾಶಕ್ತಿ, ಕ್ರಿಯಾಶಕ್ತಿ, ಜ್ಞಾನಶಕ್ತಿ, ಶ್ರೀದುರ್ಗಾ ಶಕ್ತಿ, ಸಪ್ತಶತಿ, ಋಷಿ ಪ್ರಜ್ಞಾ ಆಂದೋಲನ ಭಾಗವಾಗಿ ಇಲ್ಲಿನ ತಿಲಕ್ ನಗರದಲ್ಲಿರುವ ಸನ್ ಸ್ಪೆಷಾಲಿಟಿ ಹಾಸ್ಪಿಟಲ್‌ನ ಧನ್ವಂತರಿ ಸಭಾಂಗಣದಲ್ಲಿ ಇಂದು ಶುಕ್ರವಾರ ಬೆಳಗ್ಗೆ ಹಮ್ಮಿಕೊಳ್ಳಲಾಗಿದ್ದ ಶ್ರೀ ದುರ್ಗಾ ಸಪ್ತಶತೀ ಪೂರ್ಣ ಪಾರಾಯಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಕಲ ದೇವತೆಗಳ ಮೂಲವಾದ ಆದಿಶಕ್ತಿಯು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರಿಗೂ ಶಕ್ತಿಯನ್ನು ನೀಡುವ ಮೂಲ ಶಕ್ತಿದಾಹಿಯಾಗಿದ್ದಾಳೆ. ದೇವೀ ಮಹಾತ್ಮದ ಪ್ರಕಾರ ಮಹಾಕಾಳಿಯು ಶಕ್ತಿ- ಧೈರ್ಯ, ಮಹಾಲಕ್ಷಿö್ಮಯು ಸಂಪತ್ತು- ಸಮೃದ್ಧಿ ಮತ್ತು ಸರಸ್ವತಿಯು ಜ್ಞಾನ- ಬುದ್ಧಿ ಎಂಬ ಮೂರು ರೂಪಗಳಲ್ಲಿ ಜಗತ್ತನ್ನು ಪಾಲಿಸುತ್ತಾಳೆ ಎಂದು ತಿಳಿಸಿದರು.
Shimoga News ಮಾತೃಶಕ್ತಿ ಜಾಗೃತಿಯಾಗಲು ಮನಸ್ಸು ಮತ್ತು ಬುದ್ಧಿಯನ್ನು ಬೆಳಗುತ್ತಿರುವ ದೇವಿಯನ್ನು ಪೂಜಿಸಬೇಕು. ಮಾತೃಶಕ್ತಿ ಜಾಗೃತಿಯಾದರೆ ಮಾತ್ರ ಭಾರತದ ಸಂಸ್ಕೃತಿ ಉಳಿಯುತ್ತದೆ. ಹೀಗಾಗಿ ಮಾತೃಶಕ್ತಿ ಉದ್ದೀಪನಕ್ಕಾಗಿ ಶ್ರೀ ದುರ್ಗಾ ಸಪ್ತಶತೀ ಪೂರ್ಣ ಪಾರಾಯಣ ನಡೆಸಲಾಗುತ್ತಿದೆ ಎಂದು ನುಡಿದರು.
ನಮ್ಮ ಸಂಸ್ಕೃತಿಯಲ್ಲಿ ಕುಟುಂಬ ವ್ಯವಸ್ಥೆ ಜೀವಂತವಾಗಿದೆ. ಮಾತೃಶಕ್ತಿ ಜಾಗೃತವಾಗದೆ ಮೌಲ್ಯಯುತ ಒಳ್ಳೆಯ ಕುಟುಂಬ ವ್ಯವಸ್ಥೆ ಸಾಧ್ಯವಿಲ್ಲ. ಕುಟುಂಬದ ಸದಸದ್ಯರ ನಡುವೆ ಪ್ರೀತಿ- ಬಾಂಧವ್ಯ ಮುಖ್ಯ. ಮೊಬೈಲ್ ಮೂಲಕ ಭಾವನೆಗಳನ್ನು ಹಂಚಿಕೊಳ್ಳುವ ಬದಲು ಕುಟುಂಬದವರೊAದಿಗೆ ಕುಳಿತು ಭಾವನೆಯನ್ನು ಹಂಚಿಕೊಳ್ಳುವAತಾಗಬೇಕು ಎಂದು ಆಶಿಸಿದರು
ಖ್ಯಾತ ಉದ್ಯಮಿ ಹೊಸತೋಟ ಸೂರ್ಯನಾರಾಯಣ್, ಇಚ್ಚಾಶಕ್ತಿ, ಕ್ರಿಯಾಶಕ್ತಿ, ಜ್ಞಾನಶಕ್ತಿ, ಶ್ರೀದುರ್ಗಾ ಶಕ್ತಿ, ಸಪ್ತಶತಿ, ಋಷಿ ಪ್ರಜ್ಞಾ ಆಂದೋಲನದ ಪ್ರಮುಖರಾದ ನರೇಂದ್ರ ಕುಮಾರ್ ಶರ್ಮಾ, ಸಹ ಪ್ರಮುಖ್ ದುರ್ಗಾ ಪ್ರಸಾದ್, ಪ್ರಕಾಶ್ ಗುಬ್ಬಿ, ಎಸ್.ಎನ್. ಕಲಾ ಸೇರಿದಂತೆ ಪಾರಾಯಣ ಬಂಧುಗಳು ಭಾಗವಹಿಸಿದ್ದರು.
