Tuesday, May 19, 2026
Tuesday, May 19, 2026

Friends Center ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರುಣಿಸುವ ಕಾರ್ಯ ಶ್ಲಾಘನೀಯ- ಬಿ.ಜಿ‌.ಧನರಾಜ್

Date:

Friends Center ಶಿವಮೊಗ್ಗ ನಗರದ ಪ್ರತಿಷ್ಟಿತ ಸಂಸ್ಥೆಯಾದ ಫ್ರೆಂಡ್ಸ್ ಸೆಂಟರ್ ವತಿಯಿಂದ ಬೇಸಿಗೆ ಕಾಲದಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರನ್ನು ಒದಗಿಸಲು “ಜಲಾಮೃತ” ಕಾರ್ಯಕ್ರಮ ಹಮ್ಮಿಕೆುಾಂಡು ವಿವಿಧ ಬಡಾವಣೆಗಳಿಗೆ ಸಿಮೆಂಟಿನ ನೀರಿನ ತೆುಾಟ್ಟಿಗಳನ್ನು ವಿತರಿಸಲಾಯಿತು.
ಫ್ರೆಂಡ್ಸ್ ಸೆಂಟರ್ ಅಧ್ಯಕ್ಷರಾದ ಬಿ.ಜಿ.ಧನರಾಜ್ ರವರು ಮಾತನಾಡಿ ಪಕ್ಷಿಗಳು ತಿಂದ ಹಣ್ಣಿನ ಬೀಜಗಳಿಂದ ಅವುಗಳು ಹಾರಾಡುತ್ತಲೇ ವೃಕ್ಷಗಳನ್ನು ಸೃಷ್ಟಿ ಮಾಡುತ್ತವೆ ಹಾಗು ಕಾಡುಗಳಲ್ಲಿ ಸಮೃದ್ದವಾದ ಮರಗಳು ಬೆಳೆಯುತ್ತವೆ ಅದರಿಂದ ಮಳೆಯಾಗುತ್ತದೆ ಹೀಗೆ ಒಂದಕ್ಕೆುಾಂದು ಸಂಬಂಧವನ್ನು ಬೆಸೆಯುವಲ್ಲಿ ಹಾಗುಾ ಪ್ರಕೃತಿಯ ಸಮತೆುಾೕಲನ ಕಾಪಾಡುವಲ್ಲಿ ಪಕ್ಷಿಗಳ ಪಾತ್ರ ಬಹಳ ಮುಖ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸುಡುವ ಬಿಸಿಲಿನ ಬೇಗೆಯಲ್ಲಿ ಪಕ್ಷಿಗಳಿಗೆ ಕುಡಿಯಲು ನೀರಿಲ್ಲದೇ ಪ್ರಾಣ ಕಳೆದುಕೆುಾಳ್ಳುತ್ತಿವೆ ಆದ್ದರಿಂದ ಅವುಗಳ ಜೀವ ಕಾಪಾಡುವುದು ಪ್ರತಿಯೊಬ್ಬ ಮನುಷ್ಯನ ಜವಾಬ್ದಾರಿ ಹಾಗೂ ಆದ್ಯ ಕರ್ತವ್ಯ ಎಂದು ಹೇಳಿದರು.
ತೆುಾಟ್ಟಿ ವಿತರಣಾ ಕಾರ್ಯಕ್ರಮವನ್ನು ಪರಿಸರ ಪ್ರೇಮಿಗಳಾದ ಜನಮೇಜಯರವರು ಉಧ್ಘಾಟಿಸಿ ಮಾತನಾಡಿ ಪ್ರಾಣಿ ಪಕ್ಷಿಗಳಿಗಾಗಿ ಸಿಮೆಂಟ್ ತೊಟ್ಟಿಗಳನ್ನು ವಿತರಿಸಿ ನೀರುಣಿಸುವ ಪುಣ್ಯದ ಕೆಲಸವನ್ನು ಫ್ರೆಂಡ್ಸ್ ಸೆಂಟರ್ ಸದಸ್ಯರು ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ತಿಳಿಸಿದರು. ಹೀಗೆಯೇ ಸದಸ್ಯರು ನಿರಂತರವಾಗಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಇಂತಹ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಲಿ ಎಂದು ಆಶಿಸಿದರು. ಹಾಗುಾ ಮನೆಯ ಮೇಲೆ ಹಾಗುಾ ಕಿಟಕಿಯ ಹೆುಾರಗಡೆ ನಿಮ್ಮ ಮನೆಯಲ್ಲಿರುವ ತಟ್ಟೆಗಳು, ಪಾತ್ರೆಗಳು ಹಾಗುಾ ಡಬ್ಬಿಗಳಲ್ಲಿ ನೀರನ್ನು ತುಂಬಿ ಇಡಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
Friends Center ನೇತ್ರ ಭಂಡಾರದ ಅಧ್ಯಕ್ಷರಾದ ವಿ ನಾಗರಾಜ್ ರವರು ಮಾತನಾಡಿ ಪ್ರಕೃತಿಯು ವಿನಾಶದ ಅಂಚಿನೆಡೆ ಸಾಗುತ್ತಿದ್ದು ನಾವುಗಳು ನೆುಾೕಡುತ್ತಿದ್ದ ಗುಬ್ಬಿಗಳು ಕಡಿಮೆಯಾಗಿ ಇನ್ನು ಅನೇಕ ಪ್ರಾಣಿ ಪಕ್ಷಿಗಳು ನಾಶವಾಗಿ ನಾವುಗಳು ನಮ್ಮ ಮುಂದಿನ ಪೀಳಿಗೆಗೆ ಭಾವಚಿತ್ರದ ಮುಾಲಕ ತೆುಾೕರಿಸಬೇಕಾಗುತ್ತದೆಂದು ಕಳವಳ ವ್ಯಕ್ತಪಡಿಸಿದರು
ಮಾಜಿ ಅಧ್ಯಕ್ಷರಾದ ಜಿ ವಿಜಯಕುಮಾರ್ ಮಾತನಾಡಿ ಇತ್ತೀಚೆಗೆ ಅರಣ್ಯ ಸಂಪತ್ತು ಕ್ಷೀಣಿಸುತ್ತಿರುವ ಕಾರಣ ಪ್ರಾಣಿ ಪಕ್ಷಿಗಳಿಗೆ ಆಸರೆ ಇಲ್ಲದಂತಾಗಿ ಅವುಗಳು ಕಾಡಿನಿಂದ ನಾಡಿನ ಕಡೆಗೆ ಬರುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು
ನಂತರ ಸದಸ್ಯರೆಲ್ಲರು ಸೇರಿ ಗೆುಾೕಪಾಳದ ಕೃಷ್ಣ ಮಠ ಪಾರ್ಕ್, ಸ್ವಾಮಿ ವಿವೇಕಾನಂದ ಪಾರ್ಕ್, ಕಮರ್ಷಿಯಲ್ ಟ್ಯಾಕ್ಸ್ ಆಫೀಸ್,ಅಶ್ವಥ್ಥನಗರ ಪಾರ್ಕ್,ರಾಜೇಂದ್ರ ನಗರ,ಬಸವನಗುಡಿ, ತಿಲಕ್ ನಗರ ಹಾಗುಾ ಗಾರ್ಡನ್ ಏರಿಯಾ ಇನ್ನು ಅನೇಕ ಕಡೆಗಳಲ್ಲಿ ತೆುಾಟ್ಟಿಗಳನ್ನು ನಿರ್ವಹಣೆ ಮಾಡುವ ಮನೆಗಳ ಮುಂದೆ ವಿತರಿಸಲಾಯಿತು
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಯುಆರ್ ಐತಾಳ್, ಮಹಿಳಾ ಅಧ್ಯಕ್ಷೆ ಸಪ್ನ ಬದ್ರಿನಾಥ್,ನೇತ್ರ ಭಂಡಾರದ ಅಧ್ಯಕ್ಷರಾದ ವಿ ನಾಗರಾಜ್, ಜಿ ವಿಜಯಕುಮಾರ್,ಆರ್ ಮನೆುಾೕಹರ್ ,ಪಿ ರಾಜೇಶ್,ಎಂ ಪಿ ನಾಗರಾಜ್, ಮಲ್ಲಿಕಾರ್ಜುನ್ ಕಾನುಾರು,ಹೆಚ್ ಎಂ ಸತ್ಯನಾರಾಯಣ್,ಪಿ ಹಿರೇಮಠ್, ಗಂಗಾಧರ್ ಮತ್ತು ಸತೀಶ್ ಇನ್ನಿತರರು
ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

DC Shivamogga ಮೇ ಮತ್ತು ಜೂನ್ ತಿಂಗಳ ಪಡಿತರ ಅಕ್ಕಿ ವಿತರಣೆ ಮಾಹಿತಿ

DC Shivamogga ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ 2026ರ ಮೇ ಮತ್ತು...

Dr. Dhananjaya Sarji ದುಬಾರೆ ಸಾಕಾನೆ ಶಿಬಿರ ದುರಂತ: ಇಂತಹ ಘಟನೆ ಮರು ಕಳಿಸದಿರಲಿ- ಡಾ.ಧನಂಜಯ ಸರ್ಜಿ

Dr. Dhananjaya Sarji ಕೊಡಗಿನ ದುಬಾರೆ ಸಾಕಾನೆ ಶಿಬಿರದಲ್ಲಿ ನದಿಯಲ್ಲಿ ಆನೆಗಳನ್ನು...