Karnataka Sanga ಶಿವಮೊಗ್ಗ ಕರ್ನಾಟಕ ಸಂಘದಲ್ಲಿ ದಿನಾಂಕ 15 ಮೇ 2026ರ ಶುಕ್ರವಾರ, ‘2026ರ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಸಮಾರಂಭ’ ವನ್ನು ಹಮ್ಮಿಕೊಳ್ಳಲಾಗಿದೆ. ಅಂದು ಸಂಜೆ 05:30 ಘಂಟೆಗೆ ನಾಡಿನ ಖ್ಯಾತ ಕವಿ ಮತ್ತು ಸಾಹಿತಿಗಳಾದ ಚೊಕ್ಕಾಡಿಯ ಶ್ರೀ ಸುಬ್ರಾಯ ಚೊಕ್ಕಾಡಿ ಅವರಿಗೆ ‘ಡಾ. ದ.ರಾ. ಬೇಂದ್ರೆ ಕಾವ್ಯ ಪ್ರಶಸ್ತಿ’ ಯನ್ನು ಮತ್ತು ಪ್ರಸಿದ್ಧ ಸಾಹಿತಿ, ವಿಮರ್ಶಕರಾದ ಬೆಂಗಳೂರಿನ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರಿಗೆ ‘ಡಾ. ತೀ.ನಂ.ಶ್ರೀ. ಸಾಹಿತ್ಯ ವಿಮರ್ಶೆ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಗುವುದು. ಶ್ರೀ ಸುಬ್ರಾಯ ಚೊಕ್ಕಾಡಿ ಅವರ ಕುರಿತು ಶ್ರೀ ಕೆ.ಪಿ. ಸುರೇಶ, ಸಾಹಿತಿ, ದಕ್ಷಿಣ ಕನ್ನಡ ಮತ್ತು ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಕುರಿತು ಶ್ರೀ ಹಳೇಮನೆ ರಾಜಶೇಖರ, ಕನ್ನಡ ಪ್ರಾಧ್ಯಾಪಕರು, ಸಾಹಿತಿ, ಉಜಿರೆ ಇವರುಗಳು ಅಭಿನಂದನಾ ನುಡಿಗಳನ್ನಾಡಲಿದ್ದಾರೆ.
ಪ್ರಶಸ್ತಿಯು ೨೫,೦೦೦/- ರೂ. (ಇಪ್ಪತ್ತೈದು ಸಾವಿರ) ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಪ್ರೊ. ಹೆಚ್.ಆರ್. ಶಂಕರನಾರಾಯಣ ಶಾಸ್ತ್ರಿ ಅವರು ವಹಿಸಲಿದ್ದಾರೆ.
Karnataka Sanga ಆಸಕ್ತರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳ ಬೇಕೆಂದು ಈ ಮೂಲಕ ವಿನಂತಿಸಲಾಗಿದೆ.
